ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಇಂದು ನಗರದ ವಿಕ್ಟೋರಿಯಾ ಆವರಣದಲ್ಲಿರುವ ಪಿಎಂಎಸ್‍ಎಸ್‍ವೈ ಆಸ್ಪತ್ರೆಯಲ್ಲಿ ಕೋವ್ಯಾಕ್ಸಿನ್ ಪಡೆದರು.
ಮುಖ್ಯಮಂತ್ರಿಗಳ ಜೊತೆಗೆ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಕೂಡ ಕೋವಿಡ್ ಲಸಿಕೆ ತೆಗೆದುಕೊಂಡರು. ಫ್ರಂಟ್ ಲೈನ್ ವಾರಿಯರ್ಸ್ ಕೋಟಾದಡಿ ಸುಧಾಕರ್ ಲಸಿಕೆ ತೆಗೆದುಕೊಂಡರು.
ಲಸಿಕೆ ಪಡೆಯುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಿಎಂ, ಕೊರೊನಾ ಲಸಿಕೆ ಇಂದು ನಾನು ಹಾಕಿಸಿ ಕೊಳ್ತಿದ್ದೇನೆ. ಪ್ರಧಾನಿಗಳು ಅಲ್ಲದೇ ಅವರ ತಾಯಿ ಕೂಡ ಹಾಕಿಸಿಕೊಂಡಿದ್ದಾರೆ. ಹೀಗಾಗಿ ನಾನು ರಾಜ್ಯದ ಜನತೆಗೆ ಕರೆ ಕೊಡ್ತೇನೆ. ಕೊರೊನಾ ಲಸಿಕೆ ಪಡೆಯೋದ್ರಿಂದ ಯಾವುದೇ ಸಮಸ್ಯೆ ಆಗೋದಿಲ್ಲ ಎಂದು ಹೇಳಿದ್ದರು.