ಧಾರವಾಡ: ಭಾರತೀಯ ಜೈನ್ ಸಂಘಟನೆಯ ಹುಬ್ಬಳ್ಳಿ ಘಟಕದಿಂದ ರ‍್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಗೆ 5 ಮಿನಿ ಬಸ್‍ಗಳನ್ನು ಸಂಘಟನೆ ಪದಾಧಿಕಾರಿಗಳು ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರಿಗೆ ಹಸ್ತಾಂತರಿಸಿದರು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಿಷನ್ ಜೀರೋ ಜಿರೋ ಕೋವಿಡ್ ಕೇಸ್ ಎಂಬ ಘೋಷ ವಾಕ್ಯದೊಂದಿಗೆ ರ‍್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಗೆ ಕೋವಿಡ್ ತಪಾಸಣೆ ವಾಹನ ಹಸ್ತಾಂತರಿಸಿದರು. ಈ ವೇಳೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಮಾತನಾಡಿ, ಕೋವಿಡ್ ನಿಯಂತ್ರಣಕ್ಕೆ ಸಂಘ, ಸಂಸ್ಥೆಗಳು ಸಹಕಾರ ನೀಡುತ್ತಿರುವುದು ಮೆಚ್ಚುಗೆ ವ್ಯಕ್ತಪಡಿಸಿದರು.
Advertisement
Advertisement
ಆರೋಗ್ಯ ಇಲಾಖೆಯೊಂದಿಗೆ ಕೋವಿಡ್ ತಪಾಸಣೆಗೆ ಮನೆಗೆ ಮನೆಗೆ ರ‍್ಯಾಪಿಡ್ ಆ್ಯಂಟಿಜನ್ ಟೆಸ್ಟ್ ನಂತರ ಸೋಂಕಿತ ಎಂದು ದೃಢಪಟ್ಟಲ್ಲಿ ಆ ವ್ಯಕ್ತಿಯನ್ನು ಆಸ್ಪತ್ರೆಗೆ ಸ್ಥಳಾಂತರಿಸಲು, 5 ಮಿನಿ ಬಸ್ ವಾಹನಗಳನ್ನು ಚಾಲಕರ ಸಮೇತ ನೀಡಿದೆ. ಇದು ಇತರೆ ಸಾಮಾಜಿಕ ಸಂಘಟನೆಗಳಿಗೆ ಮಾದರಿ ಕೆಲಸವಾಗಿದೆ ಎಂದು ಹೇಳಿದರು.
Advertisement