ನವದೆಹಲಿ: ಕೋವಿಡ್ 19 ಸೋಂಕಿತರಿಗೆ ಝೈಡಸ್ ಕ್ಯಾಡಿಲಾ ಕಂಪನಿಯ ವಿರಾಫಿನ್ ಔಷಧ ನೀಡಲು ಭಾರತದಲ್ಲಿ ಅನುಮತಿ ಸಿಕ್ಕಿದೆ.
ಭಾರತೀಯ ಔಷಧ ನಿಯಂತ್ರಣ ಸಂಸ್ಥೆ (ಡಿಜಿಸಿಐ) ಇಂದು ವಿರಾಫಿನ್ ನೀಡಲು ತುರ್ತು ಅನುಮತಿ ನೀಡಿದೆ. ವಿರಾಫಿನ್ ಪಡೆದ ಕೊರೊನಾ ಸೋಂಕಿತರು ಚೇತರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.
Advertisement
https://twitter.com/ZydusUniverse/status/1385542241285025792
Advertisement
7 ದಿನದಲ್ಲಿ ವಿರಾಫಿನ್ ತೆಗೆದುಕೊಂಡ ಶೇ.91.15 ಮಂದಿಯ ಆರ್‌ಟಿಪಿಸಿಆರ್- ಪರೀಕ್ಷೆಯ ವರದಿ ನೆಗೆಟಿವ್ ಬಂದಿದೆ ಎಂದು ಕಂಪನಿ ತಿಳಿಸಿದೆ. ದೇಶದ 20-25 ಕೇಂದ್ರದಲ್ಲಿ ಈ ಪ್ರಯೋಗ ಮಾಡಿದ್ದು ವಿರಾಫಿನ್ ತೆಗೆದುಕೊಂಡವರು ಕಡಿಮೆ ಆಕ್ಸಿಜನ್ ಬಳಕೆ ಮಾಡಿದ್ದಾರೆ ಎಂದು ಹೇಳಿದೆ.