ಭೋಪಾಲ್: ಸದಾ ಒಂದಲ್ಲಾ ಒಂದು ಸುದ್ದಿಯಲ್ಲಿರುವ ಮಧ್ಯಪ್ರದೇಶದ ರೇವಾ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಜನಾರ್ದನ್ ಮಿಶ್ರಾ ಟಾಯ್ಲೆಟ್ ಸ್ವಚ್ಛಗೊಳಿಸುವ ಮೂಲಕವಾಗಿ ಚರ್ಚೆಯಲ್ಲಿದ್ದಾರೆ.
Advertisement
ಅಧಿಕಾರಿಗಳಿಗೆ ಕರ್ತವ್ಯದ ಪಾಠ, ಜವಾಬ್ದಾರಿ ತಿಳಿಸಿಕೊಡುವ ಉದ್ದೇಶದಿಂದ ಖದ್ದೂ ಟಾಯ್ಲೆಟ್ ಕ್ಲೀನ್ ಮಾಡಿದ್ದಾರೆ. ಮಿಶ್ರಾ ಅವರು ಮೌಗಂಜ್ ತೆಹ್‍ಸಿಲ್ ಕೊರೊನಾ ಕೇರ್ ಸೆಂಟರ್ ತಪಾಸಣೆಗಾಗಿ ಬಂದಿದ್ದರು. ಈ ವೇಳೆ ಕೊರೊನಾ ಸೆಂಟರ್ ತುಂಬಾ ಗಲೀಜಾಗಿತ್ತು.
Advertisement
Advertisement
ಮಿಶ್ರಾ ಸ್ವಚ್ಛಗೊಳಿಸಲು ಮುಂದಾದರು. ಕೈಗೆ ಗ್ಲೌಸ್ ಹಾಕಿಕೊಂಡು ಟಾಯ್ಲೆಟ್‍ನ ಕಮೋಡ್ ಸ್ವತಃ ಅವರೇ ಸ್ವಚ್ಛಗೊಳಿಸಿದ್ದಾರೆ. ಬ್ರಷ್, ಬಕೆಟ್ ನೀಡುವಂತೆ ಮಿಶ್ರಾ ಕೇಳಿದ್ದಾರೆ. ಆದರೆ ಅಧಿಕಾರಿಗಳು ನೀಡಲು ಹಿಂಜರಿದಾಗ ಮಿಶ್ರಾ ಅವರು ಕೈಯಲ್ಲೇ ಸ್ವಚ್ಛ ಮಾಡಿದ್ದಾರೆ. ಈ ವೇಳೆ ಕೊರೊನಾ ಸೆಂಟರ್‍ಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಪಾಠ ಮಾಡಿದ್ದಾರೆ.