– ಅತ್ಯಾಧುನಿಕ ಪ್ರಯೋಗಾಲಯ ಉದ್ಘಾಟನೆ
ಬೆಂಗಳೂರು: ಕರ್ನಾಟಕ ಕೊರೊನಾ ಹಾಟ್ ಸ್ಪಾಟ್ ಆಗ್ತಿದೆ. ಕೊರೊನಾ ಕೇಸ್‍ಗಳ ಸಂಖ್ಯೆ 5 ಲಕ್ಷದ ಗಡಿಯಲ್ಲಿದೆ. ಈ ಹಂತದಲ್ಲಿ ಕೊರೊನಾ ಚಿಕಿತ್ಸೆ, ಬೆಡ್‍ಗಳ ಸಮಸ್ಯೆ ಉಂಟಾಗಬಹುದು. ಈ ಸಮಸ್ಯೆಯನ್ನು ನಿವಾರಿಸೋ ನಿಟ್ಟಿನಲ್ಲಿ ಬೆಂಗಳೂರಿನ ಕೆಜೆ ಹಳ್ಳಿಯ ಡಾ.ಬಿ.ಆರ್ ಅಂಬೇಡ್ಕರ್ ಮೆಡಿಕಲ್ ಹಾಗೂ ಹಾಸ್ಪಿಟಲ್ ಮುಂದಾಗಿದೆ.
Advertisement
ಈ ಹಾಸ್ಪಿಟಲ್ ನಲ್ಲಿ ಇಂದು ಮೊಲೆಕ್ಯೂಲರ್ ಡೈಗೋಸ್ಟಿಕ್ ಲ್ಯಾಬೋರೇಟರಿ (ಕೋವಿಡ್ ಲ್ಯಾಬ್) ಹಾಗೂ ಸ್ಕಿಲ್ ಲ್ಯಾಬೋರೇಟರಿಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಿ.ಸುಧಾಕರ್ ಉದ್ಘಾಟಿಸಿದರು. ಇದು ಆ ಭಾಗ ಮತ್ತು ಸುತ್ತಮುತ್ತಲ ಜನತೆಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಸಹಕಾರಿಯಾಗಲಿದೆ.
Advertisement
ಈ ಹೊಸ ಕೋವಿಡ್ ಲ್ಯಾಬ್‍ನ ಜೊತೆಗೆ 400 ಬೆಡ್ ಗಳನ್ನು ಸರ್ಕಾರಕ್ಕೆ ನೀಡಲಾಗಿದೆ. ಅತ್ಯುತ್ತಮ ತಂತ್ರಜ್ಞಾನ ಹೊಂದಿರೋ ಈ ಹಾಸ್ಪಿಟಲ್ ನಲ್ಲಿ ಆಕ್ಸಿಜನ್ ವ್ಯವಸ್ಥೆ ಸಹ ಇದೆ. ಜೊತೆಗೆ ಈಗಾಗಲೇ 60 ಕ್ಕೂ ಹೆಚ್ಚು ಕೋವಿಡ್ ಪೇಟೆಂಟ್ ಗಳು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಗಿಗಳಿಗೆ ಆಹಾರದ ವ್ಯವಸ್ಥೆ ಸಹ ಇದೆ.
Advertisement
Advertisement
ಕೋವಿಡ್ ಲ್ಯಾಬ್ ಜೊತೆ ಉದ್ಘಾಟನೆಯಾದ ಮತ್ತೊಂದು ಲ್ಯಾಬ್ ಎಂದರೇ ಸ್ಕಿಲ್ ಲ್ಯಾಬ್(ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ನೀಡುವ ವಿಶೇಷ ಪ್ರಯೋಗಾಲಯ). ಈ ಸ್ಕಿಲ್ ಲ್ಯಾಬ್ ನಲ್ಲಿ ಮ್ಯಾನಿಕ್ವೀನ್ ಮೂಲಕ ಮೆಡಿಕಲ್ ಸ್ಟೂಡೆಂಟ್ಸ್ ಗಳಿಗೆ ಪ್ರಾಕ್ಟಿಕಲ್ ಟ್ರೈನಿಂಗ್ ನೀಡಲಾಗುತ್ತಿದ್ದು, ಸಚಿವರ ಪ್ರಶಂಸೆಗೆ ಕಾರಣವಾಗಿದೆ. ಸಂಕಷ್ಟದ ಕಾಲದಲ್ಲಿ ಸರ್ಕಾರದ ಕೈಜೋಡಿಸಿರುವ ವೈದ್ಯಕೀಯ ಕಾಲೇಜು ಆಡಳಿತ ಮಂಡಳಿ ಕಾರ್ಯವನ್ನು ಸಚಿವ ಸುಧಾಕರ್ ಶ್ಲಾಘಿಸಿದರು.
ಕೊರೊನಾ ಸಂದಿಗ್ಧ ಪರಿಸ್ಥಿಯನ್ನು ನಿಭಾಯಿಯಲು ನೂತನ ಅತ್ಯಾಧುನಿಕ ಪ್ರಯೋಗಾಲಯ ನೆರವಾಗಲಿದ್ದು ನಾಗರಿಕರು ಇದರ ಸದ್ಬಳಕೆ ಮಾಡಿಕೊಳ್ಳಬೇಕೆಂದು ಡಾ? ಅಂಬೇಡ್ಕರ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ? ದಿವಾಕರ್ ಮನವಿ ಮಾಡಿದ್ದಾರೆ.
ಬೆಂಗಳೂರಿನ ಕಾಡುಗೊಂಡನಹಳ್ಳಿಯ ಡಾ.ಬಿ.ಆರ್.ಅಂಬೇಡ್ಕರ್ ವೈದ್ಯಕೀಯ ಕಾಲೇಜಿನಲ್ಲಿ ನಿರ್ಮಿಸಲಾಗಿರುವ ಮಾಲಿಕ್ಯೂಲಾರ್ ಲ್ಯಾಬ್ ಮತ್ತು ಸ್ಕಿಲ್ ಲ್ಯಾಬ್ ಅನ್ನು ಇಂದು ಉದ್ಘಾಟಿಸಲಾಯಿತು. ಇಲ್ಲಿನ ಕೋವಿಡ್ ಲ್ಯಾಬ್ ನಿಂದ ಬೆಂಗಳೂರಿನ ಉತ್ತರ ಭಾಗದ ಜನರಿಗೆ ಅನುಕೂಲವಾಗಲಿದೆ. ಸಂಸ್ಥೆಯ ಮುಖ್ಯಸ್ಥರು, ಟ್ರಸ್ಟೀಗಳು, ಪ್ರಾಂಶುಪಾಲರು ಉಪಸ್ಥಿತರಿದ್ದರು. pic.twitter.com/N2W1cw7OME
— Dr Sudhakar K (@mla_sudhakar) September 18, 2020