ಮಡಿಕೇರಿ: ಕೋವಿಡ್ ನಕಲಿ ನೆಗೆಟಿವ್ ರಿಪೋರ್ಟ್ ಕೊಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಸ್ಥಳೀಯ ಪತ್ರಕರ್ತ ಅಬ್ದುಲ್ ಅಜೀಜ್ ಎಂಬಾತನ ಬಂಧನವಾಗಿದ್ದು, ರಾಜ್ಯಮಟ್ಟದ ಪತ್ರಿಕೆಯೊಂದರ ಬಿಡಿ ಸುದ್ದಿಗಾರನಾಗಿದ್ದ. ಕೊಡಗು ಜಿಲ್ಲೆ ನೆಲ್ಯಹುದಿಕೇರಿಯ ನಿವಾಸಿ ಅಬ್ದುಲ್ ಅಜೀಜ್ ಕೊಡಗಿನಿಂದ ಕೇರಳಕ್ಕೆ ಹೋಗುತ್ತಿದ್ದವರ ಬಳಿ ಹಣಪಡೆದು ನಕಲಿ ನೆಗೆಟಿವ್ ರಿಪೋರ್ಟ್ ಕೊಡುತ್ತಿದ್ದ.
ಕುಟ್ಟ ಗಡಿಯಲ್ಲಿ ಪರಿಶೀಲಿಸುವಾಗ ನಕಲಿ ವರದಿಗಳು ಪತ್ತೆಯಾಗಿದ್ದು, ಈ ಹಿನ್ನೆಲೆ ಖಚಿತ ಮಾಹಿತಿ ಆಧರಿಸಿ ಪೊಲೀಸರು ಅಜೀಜ್‍ನ್ನು ಬಂಧಿಸಿದ್ದಾರೆ. ಪೊನ್ನಂಪೇಟೆ ತಾಲೂಕಿನ ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.