ಬೆಂಗಳೂರು: ಕೊರೊನಾ ಎರಡನೇ ಮಾಹಾಮಾರಿಯನ್ನೆ ಕೆಲ ಆಸ್ಪತ್ರೆಗಳು ಬ್ಯುಸಿನೆಸ್ ಮಾಡಿಕೊಂಡಿವೆ. ಸರ್ಕಾರದ ನಿಗದಿ ಮಾಡಿದ ಮೇಲೆಯೂ ಅನೇಕ ಖಾಸಗಿ ಆಸ್ಪತ್ರೆಗಳು ಕೊರೊನಾ ಚಿಕಿತ್ಸೆಗೆ ದುಬಾರಿ ಶುಲ್ಕ ಪಡೆಯುತ್ತಿವೆ. ಹೀಗೆ ಸರ್ಕಾರ ನಿಗದಿ ಮಾಡಿದ ದರಕ್ಕಿಂತ ಹೆಚ್ಚು ದರ ಪಡೆದ 5 ಖಾಸಗಿ ಆಸ್ಪತ್ರೆಗಳಿಗೆ ರಾಜ್ಯ ಸರ್ಕಾರ ಉತ್ತರ ಕೇಳಿ ನೋಟೀಸ್ ಜಾರಿ ಮಾಡಿದೆ.
Advertisement
ನಗರದ ಪ್ರತಿಷ್ಠಿತ ಆಸ್ಪತ್ರೆಗಳಾದ ಅಶ್ವಿನಿ ಆಸ್ಪತ್ರೆ, ಸೆಂಟ್ ಜಾನ್ಸ್ ಆಸ್ಪತ್ರೆ, ಆಥ್ರೇಯ ಆಸ್ಪತ್ರೆ, ಕೆಕೆ ಆಸ್ಪತ್ರೆ, ಸ್ಪರ್ಶ್ ಆಸ್ಪತ್ರೆಗಳಿಗೆ ಸರ್ಕಾರ ನೊಟೀಸ್ ಜಾರಿ ಮಾಡಿದೆ. ಈ ನೊಟೀಸ್ ತಲುಪಿದ 3 ದಿನಗಳ ಒಳಗೆ ಉತ್ತರಿಸುವಂತೆ ಸೂಚನೆ ನೀಡಲಾಗಿದೆ. ಒಂದು ವೇಳೆ ಉತ್ತರ ನೀಡದೇ ಹೋದ್ರೆ ಕಾನೂನಿನ ಪ್ರಕಾರ ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನ ಸರ್ಕಾರ ಕೊಟ್ಟಿದೆ. ಇದನ್ನೂ ಓದಿ:ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಕಾಸು ಕೊಟ್ರೆ ಡೆತ್ ಸರ್ಟಿಫಿಕೇಟ್ ಡೀಲ್ ತನಿಖೆಗೆ ಅಶೋಕ್ ಆರ್ಡರ್!
Advertisement
Advertisement
ರಾಜ್ಯ ಸರ್ಕಾರ ಈಗಾಗಲೇ ಕೋವಿಡ್ ಚಿಕಿತ್ಸೆಗೆ ಎಷ್ಟು ದರ ಅಂತ ನಿಗದಿ ಮಾಡಿದೆ. ಸರ್ಕಾರದ ಕಡೆಯಿಂದ ಹೋದ ರೋಗಿಗೆ ಒಂದು ದರ, ಖಾಸಗಿಯಾಗಿ ದಾಖಲಾದ ರೋಗಿಗೆ ಇಂತಿಷ್ಟು ದರ ಅಂತ ನಿಗಧಿ ಮಾಡಿದೆ. ಆದರೆ ಕೆಲ ಆಸ್ಪತ್ರೆಗಳು ಸರ್ಕಾರದ ನಿಯಮ ಮೀರಿ ಹೆಚ್ಚು ದರ ಪಡೆದಿವೆ. ದುಬಾರಿ ಹಣ ಪಡೆದ ದೂರು ಬಂದ ಹಿನ್ನೆಲೆಯಲ್ಲಿ ಸರ್ಕಾರ ನೊಟೀಸ್ ನೀಡಿದ್ದು, ಕ್ರಮಕ್ಕೆ ಮುಂದಾಗಿದೆ.
Advertisement
ಸರ್ಕಾರದ ದರ ನಿಗದಿ ನೇರವಾಗಿ ಖಾಸಗಿ ಆಸ್ಪತ್ರೆಗೆ ದಾಖಲಾದ ರೋಗಿಗೆ ಜನರಲ್ ವಾರ್ಡ್ 10,000, ಎಚ್.ಡಿ.ಯು 12,000, ಐಸೋಲೇಶನ್ ವೆಂಟಿಲೇಟರ್ ಹೊರತುಪಡಿಸಿ ಐಸಿಯು 15,000 ಹಾಗೂ ಐಸೋಲೇಶನ್ ಐಸಿಯು ಮತ್ತು ವೆಂಟಿಲೇಟರ್ ಸೇರಿ 25,000 ಆಗಿದೆ.