ತುಮಕೂರು/ಚಾಮರಾಜನಗರ: ಸಂತೇಮರಹಳ್ಳಿ ಕೋವಿಡ್ ಕೇರ್ ಹಾಗೂ ಪಾವಗಡ ತಾಲೂಕಿನ ಕುರುಬರಹಳ್ಳಿಯ ಕೋವಿಡ್ ಆರೈಕೆ ಕೇಂದ್ರದಲ್ಲಿ ಮೂಲಸೌಲಭ್ಯವಿಲ್ಲದೆ ತೀವ್ರ ತೊಂದರೆಯಾಗಿದೆ ಎಂದು ಆರೋಪಿಸಿ ಸೋಂಕಿತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ಕೊರೊನಾ ಸೆಂಟರ್‌ನಲ್ಲಿ ಅವ್ಯವಸ್ಥೆ ಮುಂದುವರಿದಿದ್ದು, ಆಕ್ರೋಶಗೊಂಡ ಸೋಂಕಿತರು ಕೇರ್ ಸೆಂಟರ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇಲ್ಲಿನ ಕೊರೊನಾ ಕೇರ್ ಸೆಂಟರ್‌ನಲ್ಲಿ ಹಳಸಿದ ಅನ್ನ, ಒಣಗಿದ ಚಪಾತಿ, ಅರ್ಧಂಬರ್ಧ ಬೆಂದ ದೋಸೆ, ಬಿಸಿನೀರಿನಂತಿರುವ ಟೀ ನೀಡಲಾಗುತ್ತಿದೆ. ಇದನ್ನೂ ಓದಿ: ಕಠಿಣ ಲಾಕ್‍ಡೌನ್ ಮಧ್ಯೆ ಹೊರ ರಾಜ್ಯಗಳಿಂದ ಕಳ್ಳ ದಾರಿಗಳ ಮೂಲಕ ಎಂಟ್ರಿ- ಕೊರೊನಾ ಹೊತ್ತು ತರುವ ಆತಂಕ
Advertisement
Advertisement
5 ಬಾತ್ ರೂಮ್‍ಗೆ ಒಂದೇ ಬಕೆಟ್ ಇಡಲಾಗಿದೆ. 7-8 ದಿನಗಳಾದರೂ ಕಸ ಹೊಡೆದಿಲ್ಲ. ಶೌಚಾಲಯ ವಾರದವಾದರು ಸ್ವಚ್ಛ ಮಾಡಿಲ್ಲ, ಕೇಳಿದರೆ ನೀವೆ ಮಾಡಿಕೊಳ್ಳಿ ಎನ್ನುತ್ತಾರೆ. ಸರಿಯಾಗಿ ಔಷಧಿಯನ್ನು ನೀಡುವುದಿಲ್ಲ. ಹೀಗೆ ಮುಂದುವರಿದರೆ ಬೇರೆ ಬೇರೆ ಕಾಯಿಲೆಗಳು ಬರುತ್ತವೆ ಎಂದು ಸೋಂಕಿತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಮ್ಮನ್ನ ಪ್ಲೀಸ್ ಮನೆಗೆ ಕಳಿಸಿ- ಕೋವಿಡ್ ಸೋಂಕಿತರ ಅಳಲು
Advertisement
ದೇವರಾಜ್ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. ಸ್ಯಾನಿಟೈಸ್ ಮಾಡದೆ ಇರುವುದರಿಂದ ಹೊಸದಾಗಿ ರೋಗಿಗಳನ್ನು ತಂದು ಇಲ್ಲಿ ಬಿಡುತ್ತಿದ್ದಾರೆ. ಗುಣಮುಖರಾದವರು ಕೂಡ ಪುನಃ ಸೋಂಕಿಗೆ ಒಳಗಾಗುವಂತಹ ಸ್ಥಿತಿ ಇದೆ. ಬೆಳಗ್ಗೆ 7 ಗಂಟೆ ಆದರೂ ಬಿಸಿನೀರಿನ ವ್ಯವಸ್ಥೆ ಇರುವುದಿಲ್ಲ. ಶೌಚಾಲಯದಲ್ಲಿ ಸ್ವಚ್ಛತೆ ಇಲ್ಲದಂತಾಗಿದೆ. ಅಡುಗೆ ಮನೆಯಲ್ಲಿಯೂ ಸ್ವಚ್ಛತೆ ಕಾಪಾಡಿಲ್ಲ. ಇದರಿಂದಾಗಿ ಕೋವಿಡ್ ಆರೈಕೆ ಕೇಂದ್ರದಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಿಲ್ಲದಂತಾಗಿದೆ. ಹೀಗಾಗಿ, ಹೋಂ ಕ್ವಾರಂಟೈನ್‍ಗೆ ಅವಕಾಶ ಕಲ್ಪಿಸಿ ಕೊಡಬೇಕೆಂದು ಸೋಂಕಿತರು ಒತ್ತಾಯಿಸಿದ್ದಾರೆ. ಇದನ್ನೂ ಓದಿ:ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಪ್ರಣಿತಾ ಸುಭಾಷ್- ನಿತಿನ್ ರಾಜ್ ಯಾರು..?