ಕಲಬುರಗಿ: ಕುಂಟು ನೆಪ ಹೇಳಿ ಕೋವಿಡ್ ಕೇರ್ ಸೆಂಟರ್‌ನಿಂದ 8 ಜನ ಸೋಂಕಿತರು ಎಸ್ಕೇಪ್ ಆಗಿರುವ ಘಟನೆ ಕಲಬುರಗಿ ಜಿಲ್ಲೆy ಅಫಜಲಪುರ್ ತಾಲೂಕಿನ ಕೋವಿಡ್ ಕೇರ್ ಸೆಂಟರ್ ನಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಗ್ರಾಮೀಣ ಪ್ರದೇಶದಲ್ಲಿ ಸೋಂಕು ಬಂದ್ರೆ ಮನೆಯಲ್ಲಿ ಹೋಂ ಐಸೋಲೇಷನ್ ಕಷ್ಟ ಅಂತ ಅವರನ್ನು ಕೇರ್ ಸೆಂಟರ್ ಗೆ ತರಲಾಗುತ್ತಿದೆ. ಈ ಮೂಲಕ ಅವರ ಮನೆಯವರಿಗೆ ಹರಡಬಹುದಾದ ಸೋಂಕು ತಡೆಯಲು ಜಿಲ್ಲಾಡಳಿತ ಹಲವು ಕಟ್ಟುನಿಟ್ಟಿನ ಕ್ರಮ ಜರುಗಿಸುತ್ತಿದೆ.
Advertisement
Advertisement
ಅದೇ ರೀತಿ ಅಫಜಲಪುರ್ ಪಟ್ಟಣದಲ್ಲಿ ಸಹ ಕೋವಿಡ್ ಕೇರ್ ಸೆಂಟರ್ ಆರಂಭಿಸಿ ಸೋಂಕಿತರಿಗೆ ಅಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ಆದರೆ ದಾಖಲಾದ ದಿನವೇ ಮೂರ್ಛೆ ರೋಗ ಸೇರಿದಂತೆ ಇಲ್ಲ ಸಲ್ಲದ ಕಾರಣ ಹೇಳಿ ಎಸ್ಕೇಪ್ ಆಗಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಸೋಂಕಿತರನ್ನು ಹಿಡಿದು ಕೇರ್ ಸೆಂಟರ್ ಗೆ ದಾಖಲಿಸಿದ್ದಾರೆ.
Advertisement
ಎಸ್ಕೇಪ್ ಆದವರ ವಿರುದ್ಧ ಎಫ್‍ಐಆರ್:
ಎಸ್ಕೇಪ್ ಆದ 8 ಜನರನ್ನು ಮರಳಿ ಕೇರ್ ಸೆಂಟರ್ ತಂದು ದಾಖಲಿಸಲಾಗಿದೆ. ಅದೇ ರೀತಿ ಕೋವಿಡ್ ಹರಡುವಿಕೆ ಹಿನ್ನೆಲೆ ಇವರ ವಿರುದ್ಧ ಅಫಜಲಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಿಸಲಾಗಿದೆ.