ಚಾಮರಾಜನಗರ: ಕೋವಿಡ್ ಕೇರ್ ಸೆಂಟರ್‌ನಲ್ಲಿ ಅವ್ಯವಸ್ಥೆ ವಿರೋಧಿಸಿ ಕೊರೊನಾ ಸೋಂಕಿತರು ಪ್ರತಿಭಟನೆ ನಡೆಸಿ ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಐದು ದಿನಗಳ ಕಾಲ ಚಿಕಿತ್ಸೆ ನಂತರ ಮೆಡಿಕಲ್ ಕಾಲೇಜಿನಲ್ಲಿರುವ ಕೋವಿಡ್ ಕೇರ್ ಸೆಂಟರ್‍ಗೆ ಸ್ಥಳಾಂತರಿಗೊಳಿಸಲಾಗಿದೆ. ಆದರೆ ಇಲ್ಲಿ ಇದೀಗ ಸೋಂಕಿತರು ಪ್ರತಿಭಟನೆ ನಡೆಸಿದ್ದಾರೆ.
ನಾಲ್ಕೈದು ದಿನಗಳಿಂದ ಕೊರೊನಾ ಕೇರ್ ಸೆಂಟರ್ಗೆ ವೈದ್ಯರು ಬರುತ್ತಿಲ್ಲ, ಯಾವ ತಪಾಸಣೆಯನ್ನೂ ಮಾಡುತ್ತಿಲ್ಲ. ಬಿಸಿ ನೀರು ಕೊಡುತ್ತಿಲ್ಲ. ಅಲ್ಲದೆ ಕೇರ್ ಸೆಂಟರ್ ನಲ್ಲಿ ಅಶುಚಿತ್ವ ತಾಂಡವಾಡುತ್ತಿದೆ. ಸಿಬ್ಬಂದಿ ಒರಟಾಗಿ ವರ್ತಿಸುತ್ತಾರೆ ಎಂದು ಆರೋಪಿಸಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಎರಡನೇ ಬಾರಿ ಸ್ವ್ಯಾಬ್ ಟೆಸ್ಟ್ ಮಾಡದೆ ಡಿಸ್ಚಾರ್ಜ್ ಮಾಡಲಾಗುತ್ತಿದೆ ಎಂದು ಕೂಡ ಸೋಂಕಿತರು ಆರೋಪಿಸಿದ್ದಾರೆ.