ದಾವಣಗೆರೆ: ಹಳ್ಳಿ ಹಳ್ಳಿಗೂ ಕೊರೊನಾ ವೈರಸ್ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲಾಧಿಕಾರಿಯಿಂದ ವಿನೂತನ ಪ್ರಯೋಗವೊಂದನ್ನು ಮಾಡಿದ್ದಾರೆ.
ಕೋವಿಡ್ ಕೆಲಸ ಮಾಡುವ ವೈದ್ಯರು ಬಿಟ್ಟು ಉಳಿದ ವೈದ್ಯರು ಹಳ್ಳಿ ಸೇವೆ ಮಾಡುವಂತೆ ಜಿಲ್ಲಾಧಿಕಾರಿ ಕರೆ ನೀಡಿದ್ದಾರೆ. ಈ ಮೂಲಕ ವೈದ್ಯರು ಹಳ್ಳಿಗಳನ್ನು ದತ್ತು ಪಡೆಯಲು ದಾವಣಗೆರೆ ವೈದ್ಯರುಗಳಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ದಾವಣಗೆರೆ ಒಟ್ಟು194 ಗ್ರಾಮ ಪಂಚಾಯ್ತಿಗಳನ್ನು ಹೊಂದಿರುವ ಜಿಲ್ಲೆಯಾಗಿದ್ದು, ಡಾಕ್ಟರ್ಸ್ ಹಳ್ಳಿಯನ್ನು ದತ್ತು ಪಡೆದು ಜಾಗೃತಿ ಜೊತೆ ಚಿಕಿತ್ಸೆ ನೀಡಲು ಮನವಿ ಮಾಡಿದ್ದಾರೆ. ಕೊರೊನಾ ಕಂಟ್ರೋಲ್‍ಗೆ ತರಲು ಪ್ರತಿ ಗ್ರಾಮ ಪಂಚಾಯ್ತಿಗೆ ಒಂದು ತಂಡ ರಚನೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾಹಿತಿ ನೀಡಿದ್ದಾರೆ.