ಮೈಸೂರು: ಕೋವಿಡ್‍ನಿಂದ ಸಾವನ್ನಪ್ಪಿದರೂ ಜಿಲ್ಲಾಡಳಿತಕ್ಕೆ ಮಾಹಿತಿ ನೀಡದ ಖಾಸಗಿ ಆಸ್ಪತ್ರೆಗಳಿಗೆ ಜಿಲ್ಲಾಧಿಕಾರಿ ಅಭಿರಾಮ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ನೋಟೀಸ್ ಮೂಲಕವೇ ಎಚ್ಚರಿಕೆ ನೀಡಿದ ಡಿಸಿ, ಕೋವಿಡ್ -19 ವಿಚಾರದಲ್ಲಿ ಖಾಸಗಿ ಆಸ್ಪತ್ರೆಗಳು ನಿರ್ಲಕ್ಷ್ಯ ವಹಿಸುತ್ತಿವೆ. SARI, ILI ಹಾಗೂ ಕೋವಿಡ್ ಗುಣಲಕ್ಷಣದ ರೋಗಿಯ ಮಾಹಿತಿ ನೀಡಬೇಕು. ಯಾವುದೇ ಆಸ್ಪತ್ರೆಗಳಿಗೆ ಈ ಗುಣಲಕ್ಷಣದ ರೋಗಿ ದಾಖಲಾದರೆ ವೆಬ್‍ಸೈಟ್‍ಗೆ ಅಪ್ಡೇಟ್ ಮಾಡಬೇಕು. ಆದರೆ ಕೆಲವೊಂದು ಆಸ್ಪತ್ರೆಗಳು ಮಾಹಿತಿ ನೀಡುತ್ತಿಲ್ಲ. ಎರಡು ಕೋವಿಡ್ ಪ್ರಕರಣದ ರೋಗಿ ಸಾವನ್ನಪ್ಪಿದರೂ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿಲ್ಲ. ಇದು ನಿರ್ಲಕ್ಷ್ಯತನದ ಪರಮಾವಧಿಯಾಗಿದೆ. ಇದು ನಿಮಗೆ ಕೊನೆಯ ಎಚ್ಚರಿಕೆ ಎಂದು ತಿಳಿಸಿದ್ದಾರೆ.
Advertisement
Advertisement
ಇನ್ನು ಮುಂದೆ ಖಾಸಗಿ ಆಸ್ಪತ್ರೆಗೆ ದಾಖಲಾಗುವ ಎಲ್ಲ ಮಾಹಿತಿ ನೀಡಿ. ಇಲ್ಲವಾದರೆ ನಿಮ್ಮ ಆರೋಗ್ಯ ಸಂಸ್ಥೆಯ ನೋಂದಣಿ ರದ್ದು ಮಾಡಬೇಕಾಗುತ್ತದೆ ಎಂದು ರೋಗಿ ಸಾವನ್ನಪ್ಪಿದರೂ ಮಾಹಿತಿ ನೀಡದ ಆಸ್ಪತ್ರೆಗೆ ಡಿಸಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
Advertisement