– ಅಂಬುಲೆನ್ಸ್ ಗೆ ಮುಗಿಬಿದ್ದು, ಮೆರವಣಿಗೆ ಮಾಡಿದ್ರು
ಮಡಿಕೇರಿ: ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜಿಲ್ಲೆಯಲ್ಲಿ ಸಹ ಇಂದು 159 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಒಂದೇ ದಿನ ಮೂವರು ಮೃತಪಟ್ಟಿದ್ದಾರೆ. ಅದರೂ ಜನರಿಗೆ ಮಾತ್ರ ಇದಾವುದರ ಅರಿವಿಲ್ಲ. ಕೋವಿಡ್ ನಿಂದ ಮೃತಪಟ್ಟ ವ್ಯಕ್ತಿಯ ಶವಸಂಸ್ಕಾರದಲ್ಲಿ ಎಂದಿನಂತೆ ಭಯ ಇಲ್ಲದೆ ನೂರಾರು ಜನ ಪಾಲ್ಗೊಂಡಿದ್ದಾರೆ.
ಕುಶಾಲನಗರದ ವ್ಯಕ್ತಿ ನಿನ್ನೆ ಕೋವಿಡ್ ನಿಂದ ಮಡಿಕೇರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಇಂದು ಮೃತ ದೇಹವನ್ನು ಮಡಿಕೇರಿಯಿಂದ ಅಂಬುಲೆನ್ಸ್ ಮೂಲಕ ಕುಶಾಲನಗರಕ್ಕೆ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ನೂರಾರು ಜನರು ಮೃತ ದೇಹದ ಬಳಿ ಹೋಗಿ ಕೋವಿಡ್ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಕೋವಿಡ್‍ನಿಂದ ಮೃತಪಟ್ಟ ವ್ಯಕ್ತಿಯ ದೇಹ ನೋಡಲು ಜನರು ಹಾಗೂ ಆಟೋ ಚಾಲಕರು ಮುಗಿಬಿದ್ದಿದ್ದಾರೆ.
ಆಟೋ ಚಾಲಕರ ಸಂಘದಿಂದ ಅಂಬುಲೆನ್ಸ್ ಅಡ್ಡಹಾಕಿ ಚಾಲಕರು ಮೃತದೇಹ ವೀಕ್ಷಣೆ ಮಾಡಿದ್ದಾರೆ. ನಂತರ ಶವಸಂಸ್ಕಾರ ಸಂದರ್ಭದಲ್ಲಿ ಸ್ಮಶಾನಕ್ಕೆ ತೆರೆಳುವಾಗ 400ಕ್ಕೂ ಹೆಚ್ಚು ಜನ ಶವ ಇದ್ದ ಅಂಬ್ಯುಲೆನ್ಸ್ ಡೋರ್ ತೆಗೆದು ಮೆರವಣಿಗೆ ಮಾಡಿದ್ದಾರೆ. ಅಷ್ಟು ಜನ ಸೇರಿದ್ದರು ಸ್ಥಳೀಯ ಅಡಳಿತ ಅಧಿಕಾರಿಗಳು ಹಾಗೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಹೆಚ್ಚಾಗಿ ಅಟೋ ಚಾಲಕರೇ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿರುವುದರಿಂದ ಕುಶಾಲನಗರ ಜನತೆ ಭಯ ಪಡುತ್ತಿದ್ದಾರೆ.