ಮುಂಬೈ: ಕೋವಿಡ್ 19 ನಿಂದ ಮೃತರಾದ ಸಿಬ್ಬಂದಿಯ ಕುಟುಂಬಕ್ಕೆ ಸಹಾಯ ಮಾಡಲು ರಿಲಯನ್ಸ್ ಇಂಡಸ್ಟ್ರೀಸ್ ಮುಂದಾಗಿದೆ. ಕಂಪನಿಯ ಮುಖ್ಯಸ್ಥ ಮುಕೇಶ್ ಅಂಬಾನಿ ಮತ್ತು ಅವರ ಪತ್ನಿ ನೀತಾ ಅಂಬಾನಿ ಉದ್ಯೋಗಿಗಳಿಗೆ ಪತ್ರ ಬರೆದು ಆತ್ಮಸ್ಪೈರ್ಯ ತುಂಬಿದ್ದಾರೆ.
ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಯಾವುದೇ ವ್ಯಕ್ತಿ ಕೋವಿಡ್‍ನಿಂದ ಮೃತಪಟ್ಟರೆ ಅವರ ಕುಟುಂಬಕ್ಕೆ 10 ಲಕ್ಷ ರೂ ನೀಡಲು ರಿಲಯನ್ಸ್ ನಿರ್ಧರಿಸಿದೆ. ಸಾವನ್ನಪ್ಪಿದ ಉದ್ಯೋಗಿಯ ನಾಮಿನಿಗೆ 10 ಲಕ್ಷ ಹಣವನ್ನು ನೇರವಾಗಿ ಪಾವತಿಸಿ ಅವರ ಕುಟುಂಬಕ್ಕೆ ಧೈರ್ಯ ತುಂಬಲಿದೆ ಎಂದು ನೀತಾ ಅಂಬಾನಿ ತಿಳಿಸಿದ್ದಾರೆ.
Advertisement
Advertisement
ಪತ್ರದಲ್ಲಿ ಏನಿದೆ?
ಸಾವನ್ನಪ್ಪಿದ ಉದ್ಯೋಗಿಯ ಕೊನೆಯದಾಗಿ ಪಡೆದ ವೇತನವನ್ನು ಐದು ವರ್ಷಗಳ ಕಾಲ ಕುಟುಂಬಕ್ಕೆ ನೀಡಲಾಗುವುದು. ಇದನ್ನೂ ಓದಿ: ರೈತರೊಂದಿಗೆ ರಿಲಯನ್ಸ್ ಒಪ್ಪಂದ- ಎಂಎಸ್‌ಪಿಗಿಂತ ಹೆಚ್ಚಿನ ದರ
Advertisement
ಸಾವನ್ನಪ್ಪಿದ ಕುಟುಂಬದ ಮಕ್ಕಳು ದೇಶದಲ್ಲಿ ಎಲ್ಲೇ ಓದಿದರೂ ಅವರು ಡಿಗ್ರಿ ಪದವಿವರೆಗಿನ ಟ್ಯೂಷನ್ ಫೀಸ್, ಹಾಸ್ಟೆಲ್ ವ್ಯವಸ್ಥೆ, ಬುಕ್ ಫೀಸ್‍ಗಳನ್ನು ಸಂಪೂರ್ಣವಾಗಿ ಕಂಪನಿಯೇ ಪಾವತಿಸಲಿದೆ.
Advertisement
ಮಕ್ಕಳು ಪದವಿ ಪಡೆಯುವವರೆಗೂ ಕುಟುಂಬದ ಪೋಷಕರು, ಹೆಂಡತಿ ಅಥವಾ ಗಂಡ ಹಾಗೂ ಮಕ್ಕಳ ಆರೋಗ್ಯ ವಿಮೆಯನ್ನು ಶೇ.100ರವರೆಗೆ ಭರಿಸಲಾಗುವುದು.
ರಿಲಯನ್ಸ್ ಸಂಸ್ಥೆಗೆ ನಮ್ಮ ಸಹೋದ್ಯೋಗಿಗಳ ಕೊಡುಗೆ ಅಪಾರವಾಗಿದೆ. ಈಗಾಗಲೇ ಉದ್ಯೋಗಿಗಳಿಗೆ ಉಚಿತ ಲಸಿಕೆ ಅಭಿಯಾನ ನಡೆಸಲಾಗಿದೆ. ಎಲ್ಲರೂ ಒಟ್ಟಾಗಿ ಕೊರೊನಾ ವಿರುದ್ಧ ಹೋರಾಡೋಣ. ಸುರಕ್ಷಿತವಾಗಿ ಮತ್ತು ಆರೋಗ್ಯವಾಗಿರಿ.