ಪುಣೆ: ಕೋಳಿ ಸಾಕಾಣಿಕೆ ಮಾಡುತ್ತಿದ್ದ ವ್ಯಕ್ತಿಯೊಬ್ಬರು ತನ್ನ ಕೋಳಿ ಮೊಟ್ಟೆ ಇಡುತ್ತಿಲ್ಲ ಎಂದು ಪೊಲೀಸರ ಮೊರೆ ಹೋಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
Advertisement
ಆಹಾರ ಉತ್ಪಾದಕ ಘಟಕಗಳ ಆಹಾರವನ್ನು ತಂದು ನನ್ನ ಕೋಳಿಗಳಿಗೆ ನೀಡಿದ್ದೆ. ಅದನ್ನು ತಿಂದ ನಂತರ ಕೋಳಿಗಳು ಮೊಟ್ಟೆ ಇಡುವುದನ್ನು ನಿಲ್ಲಿಸಿವೆ ಎಂದು ಪುಣೆಯ ಅಹ್ಮದ್ ನಗರದ ಕೋಳಿ ಆಹಾರ ಉತ್ಪಾದನಾ ಕಂಪನಿ ವಿರುದ್ಧ ದೂರು ದಾಖಲಾಗಿದೆ. ಈ ಕಂಪನಿಯಿಂದ ಕೋಳಿಗಳಿಗೆ ಆಹಾರ ತಂದು ಹಾಕಿದ್ದ ಎಲ್ಲಾ ಫಾರಂಗಳಲ್ಲಿ ಕೋಳಿಗಳು ಮೊಟ್ಟೆ ಹಾಕುವುದನ್ನು ನಿಲ್ಲಿಸಿವೆ.
Advertisement
Advertisement
ಈ ಆರೋಪ ಕೇಳಿ ಬರುತ್ತಿದ್ದಂತೆ ಆಹಾರ ಉತ್ಪಾದನಾ ಕಂಪನಿಯು ಕೋಳಿ ಸಾಕಾಣೆಗಾರರಿಗೆ ಪರಿಹಾರ ನೀಡುವುದಾಗಿ ತಿಳಿಸಿದೆ. ಪರಿಹಾರ ನೀಡುವುದಾಗಿ ಕಂಪನಿ ಹೇಳಿರುವುದರಿಂದ ಕಂಪನಿ ವಿರುದ್ಧ ಎಫ್‍ಐಆರ್ ದಾಖಲಾಗಿಲ್ಲ.
Advertisement
ಪೊಲೀಸರು ಅಹ್ಮದ್ ನಗರದ ಪಶುಸಂಗೋಪನಾ ಅಧಿಕಾರಿಯನ್ನು ಭೇಟಿ ಮಾಡಿದ್ದರು. ಆಹಾರವನ್ನು ಪರೀಕ್ಷೆ ಮಾಡಲಾಗಿದೆ. ಕೆಲವು ಆಹಾರಗಳು ನಿರ್ದಿಷ್ಟ ತಳಿಯ ಕೋಳಿಗಳಿಗೆ ಹೊಂದಾಣಿಕೆಯಾಗುವುದಿಲ್ಲ. ಇದೊಂದು ಸಾಮಾನ್ಯ ವಿದ್ಯಮಾನ ಎಂದು ಪಶುಸಂಗೋಪನಾ ಅಧಿಕಾರಿ ಪೊಲೀಸರಿಗೆ ಹೇಳಿದ್ದಾರೆ.