– ತನಿಖೆಗೆ ಆದೇಶಿಸಿದ ಆರೋಗ್ಯ ಇಲಾಖೆ
ಡಿಸ್ಪುರ್: ಅಸ್ಸಾಂನ ಕಚಾರ್ ಜಿಲ್ಲೆಯ ಸಿಲ್ಚೇರ್ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ಕೋಲ್ಡ್ ಸ್ಟೋರೇಜ್ ನಲ್ಲಿ ಸುಮಾರು 1,000 ಡೋಸ್ ಕೊರೊನಾ ಲಸಿಕೆ ಹೆಪ್ಪುಗಟ್ಟಿ ವ್ಯರ್ಥವಾದ ಘಟನೆ ಬೆಳಕಿಗೆ ಬಂದಿದೆ.
ವರದಿಗಳ ಪ್ರಕಾರ, 1,000 ಡೋಸ್‍ಗಳನ್ನು ಹೊಂದಿರುವ ಕೋವಿಶೀಲ್ಡ್ ಲಸಿಕೆಯ ಸುಮಾರು 100 ಬಾಟ್ಲಿಗಳನ್ನು ಶೂನ್ಯ ತಾಪಮಾನದಲ್ಲಿ ಸಂಗ್ರಹಿಸಲಾಗಿದೆ. ಕೋವಿಶೀಲ್ಡ್ ಲಸಿಕೆಯನ್ನು 2-8 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಸಂಗ್ರಹಿಸಬೇಕಾಗುತ್ತದೆ, ಆದರೆ ಸಿಲ್ಚಾರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಐಸ್ ಲೇನ್ಡ್ ರೆಫ್ರಿಜರೇಟರ್(ಐಎಲ್‍ಆರ್) ತಾಪಮಾನವು ಶೂನ್ಯಕ್ಕಿಂತ ಕಡಿಮೆಯಾಗಿತ್ತು. ಹೀಗಾಗಿ ಲಸಿಕೆ ಕೆಟ್ಟು ಹೋಗಿದೆ ಎನ್ನಲಾಗಿದೆ.
Advertisement
Advertisement
ಲಿಸಿಕೆ ಬಾಟ್ಲಿಗಳು ಭಾಗಶಃ ಹೆಪ್ಪುಗಟ್ಟಿರುವುದು ಕಂಡುಬಂದಿದೆ. ಐಎಲ್‍ಆರ್ ನ ಕೆಲವು ತಾಂತ್ರಿಕ ದೋಷವಿರಬಹುದು. ನಾವು ಸಾಮಾನ್ಯವಾಗಿ 2-8 ಡಿಗ್ರಿ ಸೆಲ್ಸಿಯಸ್ ನಡುವಿನ ಐಎಲ್‍ಆರ್ ತಾಪಮಾನವನ್ನು ನಿಯಂತ್ರಿಸುತ್ತೇವೆ. ತಾಪಮಾನ ಕಡಿಮೆಯಾದಾಗ ಐಎಲ್‍ಆರ್ ಯಂತ್ರ ಸಂದೇಶ ಕಳುಹಿಸುತ್ತದೆ. ಆದರೆ ನಮ್ಮ ವ್ಯಾಕ್ಸಿನೇಟರ್ ಯಾವುದೇ ಸಂದೇಶ ನೀಡಲಿಲ್ಲ. ಬಹುಶಃ ಇದು ತಾಂತ್ರಿಕ ದೋಷವಾಗಿದೆ. ಲಸಿಕೆಗಳನ್ನು ಇಡೀ ರಾತ್ರಿ ಸಂಗ್ರಹಿಸಲಾಗಿದೆ. ತಾಪಮಾನ ಹೇಗೆ ಕಡಿಮೆಯಾಗಿದೆ ಎಂಬುದು ಗೊತ್ತಾಗುತ್ತಿಲ್ಲ ಎಂದು ಕ್ಯಾಚರ್ ಜಿಲ್ಲೆಯ ಆರೋಗ್ಯ ಅಧಿಕಾರಿ ತಿಳಿಸಿದ್ದಾರೆ.
Advertisement
Advertisement
ಸದ್ಯ ಅಷ್ಟೇ ಪ್ರಮಾಣದ ಸಲಿಕೆ ಬಾಟ್ಲಿಗಳನ್ನು ಮತ್ತೆ ಸಿಲ್ಚಾರ್ ವೈದ್ಯಕೀಯ ಹಾಗೂ ಆಸ್ಪತ್ರೆಗೆ ಕಳುಹಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಅಲ್ಲದೆ ಘಟನೆಯನ್ನು ಗಂಭೀರ ಪರಿಗಣಿಸಿದ್ದು, ಈ ಬಗ್ಗೆ ಇಲಾಖೆ ತನಿಖೆಗೆ ಆದೇಶಿಸಿದೆ.