ಕೋಲ್ಕತ್ತಾ: ಸಾಮಾನ್ಯವಾಗಿ ಚಹಾ ಎಲ್ಲರಿಗೂ ಬಹಳ ಇಷ್ಟವಾದ ಪಾನೀಯ. ಎಷ್ಟೋ ಮಂದಿ ಚಹಾ ಕುಡಿಯುವುದನ್ನು ತಮ್ಮ ದಿನನಿತ್ಯದ ಅಭ್ಯಾಸವಾಗಿ ಮಾಡಿಕೊಂಡಿರುತ್ತಾರೆ. ಅಲ್ಲದೆ ಚಹಾಕ್ಕಾಗಿ ಬೆಲೆಬಾಳುವಂತಹ ಕೆಫೆ ಅಥವಾ ರೆಸ್ಟೊರೆಂಟ್‍ಗಳಿಗೆ ಭೇಟಿ ನೀಡಿ ಚಹಾ ಸವಿಯುವುದನ್ನು ನಾವು ನೋಡಿರುತ್ತೇವೆ. ಆದರೆ ಕೋಲ್ಕತ್ತಾದ ಮುಕುಂದಪುರದ ರಸ್ತೆ ಬದಿಯಲ್ಲಿ ಛತ್ರಿ ನೆಟ್ಟು, ಅನೇಕ ಪ್ಲಾಸ್ಟಿಕ್ ಚೇರ್‍ಗಳನ್ನು ಹಾಕಿಕೊಂಡಿರುವ ಚಿಕ್ಕದೊಂದು ಚಹಾ ಅಂಗಡಿ ದುಬಾರಿ ಮೊತ್ತದ ಚಹಾವನ್ನು ಮಾರಾಟ ಮಾಡುತ್ತಿದೆ. ಈ ಚಿಕ್ಕ ಅಂಗಡಿಯಲ್ಲಿ ದೊರೆಯುವ ಸ್ಪೆಷಲ್ ಚಹಾದ ಬೆಲೆ 1,000 ರೂ ಆಗಿದೆ.
Advertisement
ಹೌದು ಕೋಲ್ಕತ್ತಾದ ಪುಟ್ಟ ಚಹಾದ ಅಂಗಡಿಯೊಂದು ಸುಮಾರು ನೂರಕ್ಕೂ ಅಧಿಕ ವಿವಿಧ ರೀತಿಯ ಚಹಾಗಳನ್ನು ಮಾರಾಟ ಮಾಡುವ ಮೂಲಕ ಬಹಳ ಪ್ರಸಿದ್ಧಿಗಳಿಸಿದೆ. ಈ ಅಂಗಡಿಯಲ್ಲಿ ಒಂದು ಕಪ್ ಚಹಾ 12ರೂ. ಯಿಂದ ಪ್ರಾರಂಭವಾಗಿ 1,000 ರೂ.ವರೆಗೂ ದೊರೆಯುತ್ತದೆ. ಅದರಲ್ಲೂ ಇಲ್ಲಿ ದೊರೆಯುವ ಬೊ-ಲೇ ಟೀ ಒಂದು ಕೆಜಿಗೆ ಸುಮಾರು 3 ಲಕ್ಷ ರೂ. ಆಗಿದೆ. ಸಿಲ್ವರ್ ನೀಡಲ್ ವೈಟ್ ಟೀ, ಲ್ಯಾವೆಂಡರ್ ಟೀ, ಹೈಬಿಸ್‍ಕಸ್(ದಾಸವಾಳದ)ಟೀ, ವೈನ್ ಟೀ, ತುಳಸಿ ಟೀ, ನೀಲಿ ಟಿಸೇನ್ ಟೀ, ಟೀಸ್ತಾ ವ್ಯಾಲಿ ಟೀ, ಮಕೈಬರಿ ಟೀ, ರೂಬಿಯೋಸ್ ಟೀ ಮತ್ತು ಒಕೈಟಿ ಟೀ ಹೀಗೆ ಹಲವು ರೀತಿಯ ಭಿನ್ನ ಭಿನ್ನ ರುಚಿ ನೀಡುವ ಚಹಾ ಈ ಮುಕುಂದಪುರ ಪ್ರದೇಶದಲ್ಲಿ ದೊರೆಯುತ್ತದೆ.
Advertisement
Advertisement
ಈ ವಿಚಾರವಾಗಿ ಮಾತನಾಡಿದ ಅಂಗಡಿಯ ಮಾಲೀಕ ಪಾರ್ಥ ಪ್ರತಿಮ್ ಗಂಗೂಲಿ, ನಾನು ಮೊದಲಿಗೆ ಬೇರೆ ಕಡೆ ಪೂರ್ತಿದಿನ ಕೆಲಸ ಮಾಡುತ್ತಿದೆ. ಆದರೆ 2014ರಲ್ಲಿ ಚಹಾದ ಅಂಗಡಿಯನ್ನು ತೆರೆದು ಸ್ವಂತ ವ್ಯಾಪಾರ ಮಾಡಲು ಆರಂಭಿಸಿದೆ. ಮೊದಲಿಗೆ ವ್ಯಾಪಾರದಲ್ಲಿ ಯಶಸ್ಸು ಕಾಣಲಿಲ್ಲ ಹೀಗಾಗಿ ವಿವಿಧ ರೀತಿಯ ಚಹಾಗಳನ್ನು ಮಾರಾಟ ಮಾಡಲು ಆರಂಭಿಸಿದೆ. ಇದರಿಂದಾಗಿ ವ್ಯಾಪಾರ ಮಾಡಲು ಹಲವು ರೀತಿಯ ಚಹಾಗಳ ಬಗ್ಗೆ ಅರಿವಿರಬೇಕು ಹಾಗೂ ಅವುಗಳನ್ನು ಹೇಗೆ ಮಾರಾಟ ಮಾಡಬೇಕೆಂಬುವುದನ್ನು ತಿಳಿದಿರಬೇಕು ಎಂದು ಹೇಳಿದರು.
Advertisement