ಕೋರ್ಟ್ ಆದೇಶ ಹೊರಬರುತ್ತಿದ್ದಂತೆ ರಾಗಿಣಿ-ಸಂಜನಾ ಕಣ್ಣೀರು

Public TV
1 Min Read
Ragini sanjana 1

ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಬಂಧನದಲ್ಲಿರುವ ನಟಿಯರಾದ ರಾಗಿಣಿ, ಸಂಜನಾ ಅವರ ಸಿಸಿಬಿ ಕಸ್ಟಡಿಯನ್ನು ನ್ಯಾಯಾಲಯ ಸೆ.14ರ ವರೆಗೂ ಮುಂದುವರಿಸಿ ಆದೇಶ ನೀಡಿದೆ. ಕೋರ್ಟ್ ಆದೇಶ ಹೊರಬರುತ್ತಿದ್ದಂತೆ ಇಬ್ಬರೂ ಕಣ್ಣೀರಿಟ್ಟಿದ್ದಾರೆ ಎಂಬ ಮಾಹಿತಿ ಸದ್ಯ ಲಭ್ಯವಾಗಿದೆ.

Ragini sanjana

ಇಂದು ಸುಮಾರು 45 ನಿಮಿಷಗಳ ಕಾಲ ವಾದ-ಪ್ರತಿವಾದ ಆಲಿಸಿದ ಕೋರ್ಟ್ ಬಳಿಕ ತನ್ನ ಆದೇಶವನ್ನು ನೀಡಿತ್ತು. ಆದರೆ ವಿಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಎದುರು ಸಿಸಿಬಿ ಪೊಲೀಸರು ರಾಗಿಣಿ, ಸಂಜನಾರನ್ನು ಹಾಜರು ಪಡಿಸಿದ್ದರು. ವಾದ-ಪ್ರತಿವಾದ ಮುಗಿದ ನಂತರ ತೀವ್ರ ಆತಂಕಗೊಂಡಿದ್ದ ಇಬ್ಬರು ನಟಿಯರು, ಕೊಠಡಿಯಲ್ಲಿ ಕುಳಿತ್ತಿದ್ದರು. ತೀರ್ಪಿಗೂ ಮುನ್ನ ವಿಡಿಯೋ ಕಾನ್ಫರೆನ್ಸ್ ಕಟ್ ಆಗಿದ್ದ ಕಾರಣ, ಇನ್ಸ್ ಪೆಕ್ಟರ್ ಅಂಜುಮಾಲ ಅವರಿಂದ ಆದೇಶದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು. ಇದನ್ನೂ ಓದಿ: ಸಿಕ್ಕಾಕೊಂಡ್ರರೆ ನಾವು ಮತ್ತೆ ಜೈಲಿಗೆ ಹೋಗ್ಬೇಕಾಗುತ್ತೆ- ಆಸ್ಪತ್ರೆಯಲ್ಲಿ ನಟಿ ರಾಗಿಣಿ ಕಿರಿಕ್

RAGINI CCB 1

ಆದೇಶದಂತೆ ಮತ್ತೆ ಮೂರು ದಿನಗಳ ಕಾಲ ಕಸ್ಟಡಿ ಎಂದ ಕೂಡಲೇ ರಾಗಿಣಿ ಮತ್ತು ಸಂಜನಾ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದಾರೆ ಎನ್ನಲಾಗಿದೆ. ಸದ್ಯ ಯಾರೊಂದಿಗೂ ಮಾತಾಡದೇ ಇಬ್ಬರು ಮೌನವಾಗಿ ಕೊಠಡಿಯಲ್ಲಿ ಉಳಿದುಕೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಇದನ್ನೂ ಓದಿ: ನಟಿ ಸಂಜನಾ ಸೇರಿ ಉಳಿದ ಆರೋಪಿಗಳೂ 3 ದಿನ ಸಿಸಿಬಿ ಕಸ್ಟಡಿಗೆ

sanjana

ಲಭ್ಯ ಮಾಹಿತಿಯ ಅನ್ವಯ, ನ್ಯಾಯಾಂಗ ಬಂಧನ ನೀಡಿದಿದ್ದರೆ ಜಾಮೀನು ಪಡೆಯುವುದು ಸುಲಭವಾಗುತ್ತಿತ್ತು. ಅಲ್ಲದೇ ಮತ್ತೆ ಮೂರು ದಿನಗಳ ಕಾಲ ಸಿಸಿಬಿ ಪೊಲೀಸರ ವಿಚಾರಣೆ ಎದುರಿಸಬೇಕು ಎಂಬ ಚಿಂತನೆಯನ್ನು ನಟಿಯರಿಬ್ಬರು ಮಾಡಿದ್ದರು ಎನ್ನಲಾಗಿದೆ. ಸದ್ಯ ಸಿಸಿಬಿ ಪೊಲೀಸರು ನಟಿಯರ ವಿಚಾರಣೆಯನ್ನು ಮುಂದೂವರಿಸಲಿದೆ. ಇದರ ನಡುವೆಯೇ ಸಂದೀಪ್ ಪಾಟೀಲ್ ಅವರು ಇಂದು ನಡೆಸಿದ ವಿಚಾರಣೆಯಲ್ಲಿ ಸಂಜನಾ, ರಾಗಿಣಿ ಅವರು ಇಬ್ಬರು ಪ್ರಭಾವಿ ನಾಯಕರ ಹೆಸರನ್ನು ಹೇಳಿದ್ದಾರೆ ಎನ್ನಲಾಗಿದೆ. ಅಲ್ಲದೇ ನಾವು ಹೇಳುವ ಪ್ರಭಾವಿಗಳ ವಿಚಾರಣೆ ನಡೆಸಲು ಸಾಧ್ಯವೇ ಎಂದು ನಟಿಯರಿಬ್ಬರು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಮತ್ತೆ 3 ದಿನ ಸಿಸಿಬಿ ಕಸ್ಟಡಿಗೆ ನಟಿ ರಾಗಿಣಿ

Share This Article
Leave a Comment

Leave a Reply

Your email address will not be published. Required fields are marked *