ದುಬೈ: ಐಪಿಎಲ್ ಇನ್ನೇನು ಮುಗಿಯುವ ಹಂತಕ್ಕೆ ಬಂದಿದೆ. ಹೀಗಿದ್ದರೂ ತಂಡಗಳು ಕೋಟಿ ರೂ. ನೀಡಿದ್ದರೂ ಖ್ಯಾತ ಆಟಗಾರರು ನಿರಾಸೆ ಮೂಡಿಸಿದ್ದಾರೆ. ಇಂಗ್ಲೆಂಡಿನ ಬೆನ್‌ಸ್ಟೋಕ್ಸ್, ಆಸ್ಟ್ರೇಲಿಯಾದ ಗ್ಲೇನ್ ಮ್ಯಾಕ್ಸ್‌ವೇಲ್, ಕೇದಾರ್ ಜಾಧವ್ ಅವರ ಆಟಕ್ಕೆ ಅಭಿಮಾನಿಗಳಿಂದ ಭಾರೀ ಟೀಕೆ ವ್ಯಕ್ತವಾಗಿದೆ.
Advertisement
ಬೆನ್ ಸ್ಟೋಕ್ಸ್ ಅವರನ್ನು ರಾಜಸ್ಥಾನ ರಾಯಲ್ಸ್ ತಂಡ 2018ರ ಹರಾಜಿನಲ್ಲಿ 12.5 ಕೋಟಿ ರೂ. ನೀಡಿ ಖರೀದಿಸಿದೆ. ಹೀಗಿದ್ದರೂ ಕಳೆದ 103 ಎಸೆತಗಳಲ್ಲಿ ಒಂದೇ ಒಂದು ಸಿಕ್ಸ್ ಹೊಡೆದಿಲ್ಲ. ಈ ವರ್ಷ 5 ಪಂದ್ಯಗಳನ್ನು ಆಡಿದ್ದು 110 ರನ್ ಹೊಡೆದಿದ್ದಾರೆ. ಇದನ್ನೂ ಓದಿ: ನಿವೃತ್ತಿ ಘೋಷಿಸಿದ 2008ರ ಅಂಡರ್-19 ವಿಶ್ವಕಪ್ ಹೀರೋ
Advertisement
Advertisement
ಕಿಂಗ್ಸ್ ಇಲೆವನ್ ಆಟಗಾರ ಗ್ಲೇನ್ ಮ್ಯಾಕ್ಸ್‌ವೇಲ್ ಈ ಬಾರಿ ಐಪಿಎಲ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. 10.75 ಕೋಟಿ ರೂ. ನೀಡಿದ್ದರೂ ಕಳೆದ 100 ಎಸೆತಗಳಲ್ಲಿ ಒಂದೇ ಒಂದು ಸಿಕ್ಸ್ ಬಂದಿಲ್ಲ. ಈ ವರ್ಷ 11 ಪಂದ್ಯವಾಡಿ ಕೇವಲ 102 ರನ್ ಬಾರಿಸಿದ್ದಾರೆ.
Advertisement
ಕೇದಾರ್ ಜಾಧವ್ ಅವರು ಚೆನ್ನಾಗಿ ಆಡಬಹುದು ಎಂಬ ನಿರೀಕ್ಷೆಯನ್ನು ಇಟ್ಟುಕೊಂಡಿದ್ದ ಚೆನ್ನೈ ತಂಡ 2018ರಲ್ಲಿ 7.8 ಕೋಟಿ ರೂ. ನೀಡಿ ಖರೀದಿಸಿತ್ತು. ಈ ವರ್ಷ 8 ಪಂದ್ಯಗಳನ್ನು ಆಡಿದ್ದು ಕಳೆದ 66 ಎಸೆತಗಳಲ್ಲಿ ಒಂದು ಸಿಕ್ಸ್ ಹೊಡೆದಿಲ್ಲ. ಒಟ್ಟು ಇಲ್ಲಿಯವರೆಗೆ 62 ರನ್ ಹೊಡೆದಿದ್ದಾರೆ.
ಅತಿ ಹೆಚ್ಚು ಸಿಕ್ಸ್ ಹೊಡೆದ ಆಟಗಾರರ ಪಟ್ಟಿಯಲ್ಲಿ ಪಂಜಾಬ್ ಆಟಗಾರ ನಿಕೂಲಸ್ ಪೂರನ್ ಇದ್ದಾರೆ. 11 ಪಂದ್ಯಗಳಲ್ಲಿ 22 ಸಿಕ್ಸ್ ಹೊಡೆದಿದ್ದಾರೆ. 11 ಪಂದ್ಯ ಆಡಿರುವ ರಾಜಸ್ಥಾನ ರಾಯಲ್ಸ್ ಆಟಗಾರ ಸಂಜು ಸಾಮ್ಸನ್ 20 ಸಿಕ್ಸ್ ಹೊಡೆದು ಎರಡನೇ ಸ್ಥಾನದಲ್ಲಿದ್ದಾರೆ. ಪಂಜಾಬ್ ತಂಡದ ನಾಯಕ ಕನ್ನಡಿಗ ಕೆಎಲ್ ರಾಹುಲ್ 11 ಪಂದ್ಯವಾಡಿದ್ದು 20 ಸಿಕ್ಸ್ ಹೊಡೆಯುವ ಮೂಲಕ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ.
2019ರ ಹರಾಜಿನಲ್ಲಿ ಪೂರನ್ ಅವರನ್ನು ಕಿಂಗ್ಸ್ ಇಲೆವನ್ ಪಂಜಾಬ್ 4.20 ಕೋಟಿ ರೂ. ನೀಡಿ ಖರೀದಿಸಿತ್ತು. ಸಂಜು ಸಾಮ್ಸನ್ ಅವರನ್ನು ರಾಜಸ್ಥಾನ 2018 ರಲ್ಲಿ 8 ಕೋಟಿ ರೂ. ನೀಡಿ ಖರೀದಿಸಿದ್ದರೆ ಕೆಎಲ್ ರಾಹುಲ್ ಅವರನ್ನು ಪಂಜಾಬ್ ತಂಡ 2018ರಲ್ಲಿ 11 ಕೋಟಿ ರೂ. ನೀಡಿ ಖರೀದಿಸಿತ್ತು.