ಕೋಲ್ಕತ್ತಾ: ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಟಿಎಂಸಿ 218 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ರೆ. ಬಿಜೆಪಿ 71 ಕ್ಷೇತ್ರಗಳಲ್ಲಿ ಗೆದ್ದಿದೆ. ಈ ಮಧ್ಯೆ ಪಶ್ಚಿಮ ಬಂಗಾಳದ ಸಲ್ತೋರಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮನೆಗೆಲಸ ಮಾಡಿಕೊಂಡಿದ್ದ ಚಂದನಾ ಬೌರಿ ಕೋಟ್ಯಧಿಪತಿ ಎದುರಾಳಿಯನ್ನು ಸೋಲಿಸಿ ಅಚ್ಚರಿ ಮೂಡಿಸಿದ್ದಾರೆ.
ಚಂದನಾ ಬೌರಿ ಒಟ್ಟು 91,648 ಮತಗಳನ್ನು ಪಡೆದು 87,503 ಮತ ಪಡೆದ ಟಿಎಂಸಿ ಅಭ್ಯರ್ಥಿ ಸಂತೋಷ್ ಕುಮಾರ್ ಮೊಂಡಾಲ್ ವಿರುದ್ಧ 4, 145 ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಚಂದನಾ ಬೌರಿ ದಿನಗೂಲಿ ಕಾರ್ಮಿಕನೋರ್ವನ ಪತ್ನಿಯಾಗಿದ್ದು, ಇವರು ಮನೆ ಕೆಲಸ ಮಾಡುವ ಮೂಲಕ ಮೂರು ಹೊತ್ತಿನ ಊಟ ಮಾಡುತ್ತಿದ್ದರು. ಬಾಂಕೂರಾ ಜಿಲ್ಲೆಯ ಸಾಲ್‍ತೋರಾ ಎಸ್‍ಸಿ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಚಂದನಾ ಬೌರಿ ಬಿಜೆಪಿ ಕಣಕ್ಕಿಳಿಸಿತ್ತು.
Advertisement
Congratulations on a splendid & inspiring victory Smt.Chandana Bauri ji.@BJP4Bengal https://t.co/d1LgtfSfNa
— Sumiran Komarraju (@SumiranKV) May 2, 2021
Advertisement
ಚಂದನಾ ಬೌರಿ ಆಸಿ ವಿವರ:
ಚಂದನಾ ಬೌರಿ 10ನೇ ತರಗತಿ ಪಾಸ್ ಆಗಿದ್ದು ಅವರ ದಿನದ ಆದಾಯ ಕೇವಲ 400 ರೂಪಾಯಿಗಳಾಗಿವೆ. ಅವರ ಬ್ಯಾಂಕ್ ಖಾತೆಯಲ್ಲಿ 31, 985 ರೂಪಾಯಿ ಹಣವಿದೆ. ಮೂರು ಮೇಕೆ ತಂದೆಯಿಂದ ಬಳುವಳಿಯಾಗಿ ಬಂದ3 ಹಸು ಹಾಗೂ ಒಂದು ಮಣ್ಣಿನ ಮನೆ ಇದೆ.
Advertisement
#Chandana Bauri Is Leading and will Declared Winner within Hours She Is Daily wager @doctorrichabjp Ji https://t.co/3auYYqYb3x
— Shubham Thorat (@Shubham36551970) May 2, 2021
Advertisement
ಟಿಎಂಸಿ ಅಭ್ಯರ್ಥಿ ಸಂತೋಷ್ ಕುಮಾರ್ ಮೊಂಡಾಲ್ ಒಟ್ಟು ಆಸ್ತಿ ವಿವರ 2.7 ಕೋಟಿ ಎಮದು ಘೋಷಿಸಿದ್ದಾರೆ. ಸಂತೋಷ್ ಕುಮಾರ್ ಸ್ವಂತ ಕ್ರಷರ್ ಹೊಂದಿದ್ದಾರೆ. ದಿನಗೂಲಿ ಕಾರ್ಮಿಕ ವ್ಯಕ್ತಿ ಪತ್ನಿ ಕೋಟ್ಯಾಧಿಪತಿಯ ವಿರುದ್ಧ ಗೆಲವು ಸಾಧಿಸಿರುವುದು ಅಚ್ಚರಿಯನ್ನುಂಟು ಮಾಡಿದೆ.