ಬುಡಾಪೆಸ್ಟ್: ಪೋರ್ಚುಗಲ್ ಫುಟ್‍ಬಾಲ್ ಟೀಂ ನಾಯಕ ಕ್ರಿಸ್ಟಿಯಾನೋ ರೊನಾಲ್ಡೊ ಟೇಬಲ್ ಮೇಲಿರಿಸಿದ್ದ ಕೊಕಾ ಕೋಲಾ ಬಾಟಲ್ ಗಳನ್ನು ಕೆಳಗೆ ಇರಿಸಿದ ಪರಿಣಾಮ ಕಂಪನಿ 29.34 ಸಾವಿರ ಕೋಟಿ ರೂ. ನಷ್ಟ ಅನುಭವಿಸಿದೆ.
ಶೇರ್ ಮಾರುಕಟ್ಟೆಯಲ್ಲಿ ಕೊಕಾ ಕೋಲಾ ಕಂಪನಿಯ ಶೇರುಗಳ ಮುಖಬೆಲೆ 56.10 ಡಾಲರ್ ನಿಂದ 55.22 ಡಾಲರ್ ಗೆ ಇಳಿಕೆಯಾಗಿದೆ. ಅಂದ್ರೆ ಶೇ.1.6ರಷ್ಟು ಬೆಲೆ ಇಳಿದಿದೆ. ಸುದ್ದಿಗೋಷ್ಠಿ ವೇಳೆ ಟೇಬಲ್ ಮೇಲೆ ಕೊಕಾ ಬಾಟೆಲ್ ಗಳನ್ನು ಇರಿಸಲಾಗಿತ್ತು. ವೇದಿಕೆಯತ್ತ ಬರುತ್ತಲೇ ತಮ್ಮ ಮುಂದಿದ್ದ ಕೊಕಾ ಕೋಲಾ ಬಾಟೆಲ್ ಗಳನ್ನು ಕೆಳಗಿರಿಸಿ, ನೀರು ಕುಡಿಯಿರಿ ಎಂದು ಆ ಬಾಟೆಲ್ ಮುಂದಿಟ್ಟುಕೊಂಡರು.
Advertisement
Advertisement
ಕೊಕಾ ಕೋಲಾ ಪ್ರಾಯೋಜಕತ್ವ: ಆಸ್ಟ್ರೇಲಿಯನ್ ಅಸೋಸಿಯೇಟೆಡ್ ಪ್ರೆಸ್ ಪ್ರಕಾರ ಕೊಕಾ ಕೋಲಾ ಮಾರ್ಕೆಟ್ ವ್ಯಾಲ್ಯೂ 242 ಕೋಟಿ ಅರಬ್ ಡಾಲರ್ ನಿಂದ 238 ಅರಬ್ ಡಾಲರ್ ಕೋಟಿಗೆ ತಲುಪಿದೆ. 11 ದೇಶಗಳಲ್ಲಿ ನಡೆಯುತ್ತಿರುವ ಯುಇಎಫ್‍ಎ ಯುರೋ ಕಪ್ ಗೆ ಕೊಕಾ ಕೋಲಾ ಪ್ರಾಯೋಜಕತ್ವ ಪಡೆದುಕೊಂಡಿದೆ.
Advertisement
Advertisement
ಫಿಟ್ನೆಸ್ ಡಯಟ್: 36 ವರ್ಷದ ರೊನಾಲ್ಡೊ ಕಟ್ಟುನಿಟ್ಟಿನ ಆಹಾರ ಪದ್ಧತಿಯನ್ನ ಅಳವಡಿಸಿಕೊಂಡಿದ್ದಾರೆ. ಫಿಟ್ನೆಸ್ ಗಾಗಿ ಯಾವುದೇ ರೀತಿಯ ಕೋಲ್ಡ್ ಡ್ರಿಂಕ್ ಮತ್ತು ಏರೆಟೆಡ್ ಡ್ರಿಂಕ್ ಗಳಿಂದ ದೂರ ಇರುತ್ತಾರೆ. ಭಾರತ ಕ್ರಿಕೆಟ್ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫಿಟ್ನೆಸ್ ವಿಷಯದಲ್ಲಿ ರೊನಾಲ್ಡೋ ಅವರನ್ನ ಫಾಲೋ ಮಾಡುತ್ತಾರೆ. ಕೊಹ್ಲಿ ಅಂತೆ ಹಲವು ಕ್ರೀಡಾಪಟುಗಳು ಫಿಟ್ನೆಸ್ ಗಾಗಿ ರೊನಾಲ್ಡೊ ಅವರನ್ನು ಅನುಸರಿಸುತ್ತಾರೆ.
???????? Cristiano Ronaldo wasn't pleased with the bottles of coke at his press conference and shouted 'drink water!'…#POR | #CR7 pic.twitter.com/QwKeyKx2II
— The Sportsman (@TheSportsman) June 14, 2021
ಈ ಪೋರ್ಚುಗಲ್ ತಂಡವನ್ನು ಗ್ರೂಫ್ ಎಫ್ ನಲ್ಲಿರಿಸಲಾಗಿದೆ. ಪೋರ್ಚುಗಲ್ ಜೊತೆ ಜರ್ಮನಿ, ಫ್ರಾನ್ಸ್ ಮತ್ತು ಹಂಗರಿ ಸಹ ಇದೇ ಗ್ರೂಫ್ ನಲ್ಲಿವೆ. ಫ್ರಾನ್ಸ್ ಫಿಫಾ ವರ್ಲ್ಡ್ ಕಪ್ ಚಾಂಪಿಯನ್ ಆಗಿದೆ. ಜರ್ಮನಿ ಮೂರು ಬಾರಿ ಯುರೋ ಚಾಂಪಿಯನ್ ಆಗಿದೆ. 2016ರ ಯುರೋ ಕಪ್ ಫೈನಲ್ ನಲ್ಲಿ ಪೋರ್ಚುಗಲ್ ಎದರು ಫ್ರಾನ್ಸ್ ಸೋಲೊಪ್ಪಿಕೊಂಡಿತ್ತು.