– ಯಾವ್ಯಾವ ಆಟಗಾರ ಹೆಸರನಲ್ಲಿವೆ ಬೆಸ್ಟ್ ರೆಕಾರ್ಡ್?
ನವದೆಹಲಿ: ಐಪಿಎಲ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದು ಸಂಜೆ ಅಬುಧಾಬಿಯಲ್ಲಿ ಐಪಿಎಲ್ ಹಂಗಾಮಕ್ಕೆ ವೇದಿಕೆ ಸಜ್ಜಾಗಿದೆ.
ಐಪಿಎಲ್ ಎಂಬುದು ಭಾರತೀಯ ಕ್ರಿಕೆಟ್ ಪ್ರೇಮಿಗಳ ಪಾಲಿಗೆ ಹಬ್ಬವಿದ್ದಂತೆ. ಈ ಚುಟುಕು ಪಂದ್ಯದಲ್ಲಿ ಆಟಗಾರರು ದಾಖಲೆಗಳ ಮೇಲೆ ದಾಖಲೆ ನಿರ್ಮಿಸಿ ಕ್ರೀಡಾಭಿಮಾನಿಗಳಿಗೆ ಮನರಂಜನೆ ನೀಡುತ್ತಾರೆ. ಹೊಡಿಬಡಿ ಆಟದಲ್ಲಿ ವಿಕೆಟ್, ಸಿಕ್ಸರ್ ಸೇರಿದ ದಾಖಲೆಗಳಿಗೆ ಲೆಕ್ಕವೇ ಇಲ್ಲ. ಈ ರೀತಿಯ ಪ್ರಮುಖ ದಾಖಲೆಗಳ ಪಟ್ಟಿ ಇಲ್ಲಿದೆ ನೋಡಿ.
Advertisement
Advertisement
ವಿರಾಟ್ ಕೊಹ್ಲಿ: ಭಾರತೀಯ ಕ್ರಿಕೆಟ್‍ನ ರನ್ ಮಷಿನ್ ವಿರಾಟ್, ಐಪಿಎಲ್‍ನಲ್ಲಿ ಅತೀ ಹೆಚ್ಚು ರನ್ ಭಾರಿಸಿದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಬೆಂಗಳೂರು ತಂಡದ ನಾಯಕನಾಗಿರುವ ಕೊಹ್ಲಿ ಒಟ್ಟು 5,412 ಐಪಿಎಲ್ ರನ್ ಹೊಡೆದಿದ್ದಾರೆ. ಒಟ್ಟು 177 ಐಪಿಎಲ್ ಪಂದ್ಯವಾಡಿರುವ ವಿರಾಟ್ 5 ಶತಕ ಮತ್ತು 36 ಅರ್ಧಶತಕಗಳನ್ನು ಬಾರಿಸಿದ್ದಾರೆ.
Advertisement
Advertisement
ಕೆಎಲ್ ರಾಹುಲ್: ಹಾಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕನಾಗಿರುವ ರಾಹುಲ್, ಈ ಬಾರಿಯ ಐಪಿಎಲ್‍ನಲ್ಲಿ ಸ್ಟಾರ್ ಆಟಗಾರನಾಗಿದ್ದಾರೆ. ರಾಹುಲ್ ಐಪಿಎಲ್‍ನಲ್ಲಿ ಅತಿ ವೇಗದಲ್ಲಿ ಅರ್ಧಶತಕ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2018ರ ಐಪಿಎಲ್‍ನಲ್ಲಿ ದೆಹಲಿ ವಿರುದ್ಧದ ಪಂದ್ಯದಲ್ಲಿ ರಾಹುಲ್ 16 ಎಸೆತಗಳಲ್ಲಿ 51 ರನ್ ಗಳಿಸಿದ್ದರು. ಇದನ್ನು ಓದಿ: ಸುರೇಶ್ ರೈನಾ ಐಪಿಎಲ್ ದಾಖಲೆ ಮುರಿಯುವ ಸನಿಹದಲ್ಲಿ ಧೋನಿ
ಗೌತಮ್ ಗಂಭೀರ್: ದೆಹಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡದ ಮಾಜಿ ನಾಯಕ ಗೌತಮ್ ಗಂಭೀರ್ ಅವರು ನಾಯಕನಾಗಿ ದಾಖಲೆ ಬರೆದಿದ್ದಾರೆ. ನಾಯಕನಾಗಿ ತಂಡಕ್ಕೆ ಬ್ಯಾಕ್ ಟು ಬ್ಯಾಕ್ ಗೆಲುವು ತಂದು ಕೊಟ್ಟ ಕೀರ್ತಿ ಗಂಭೀರ್ ಅವರಿಗೆ ಸಲ್ಲುತ್ತದೆ. 2014 ಮತ್ತು 2015 ಐಪಿಎಲ್ ಆವೃತ್ತಿಯಲ್ಲಿ ಇವರು ತಮ್ಮ ತಂಡವನ್ನು ಸತತ 10 ಪಂದ್ಯದಲ್ಲಿ ನಾಯಕನಾಗಿ ಗೆಲುವಿನ ದಡ ಸೇರಿಸಿದ್ದಾರೆ.
ಕ್ರಿಸ್ ಗೇಲ್: ಐಪಿಎಲ್ ದಾಖಲೆಗಳ ಸಾಲಿನಲ್ಲಿ ಕ್ರಿಸ್ ಗೇಲ್ ಹೆಮ್ಮರವಾಗಿ ಕಾಣುತ್ತಾರೆ. ಐಪಿಎಲ್‍ನಲ್ಲಿ ಪಂಜಾಬ್, ಕೋಲ್ಕತ್ತಾ, ಬೆಂಗಳೂರು ತಂಡದ ಪರವಾಗಿ 124 ಪಂದ್ಯಗಳನ್ನು ಆಡಿರುವ ಅವರು, ಒಟ್ಟು 326 ಸಿಕ್ಸರ್ ಗಳನ್ನು ಸಿಡಿಸಿ ದಾಖಲೆ ಬರೆದಿದ್ದಾರೆ. ಜೊತೆಗೆ ಐಪಿಎಲ್‍ನಲ್ಲಿ ಅತೀ ವೇಗದ ಶತಕ ಸಿಡಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜೊತೆಗೆ ಐಪಿಎಲ್‍ನಲ್ಲಿ ಅತೀ ಹೆಚ್ಚು ವೈಯಕ್ತಿಕ ರನ್ ಹೊಡೆದ ಆಟಗಾರ ಎನಿಸಿಕೊಂಡಿದ್ದಾರೆ. 2013 ಐಪಿಎಲ್ ಆವೃತ್ತಿಲ್ಲಿ ಗೇಲ್ ಪುಣೆ ವಿರುದ್ಧ 30 ಬಾಲಿಗೆ ಶತಕ ಸಿಡಿಸಿದ್ದರು. ಅಂದು ಗೇಲ್ ಒಟ್ಟು 175 ರನ್ ಪೇರಿಸಿದ್ದರು.
ಲಸಿತ್ ಮಾಲಿಂಗ: ಇಂಡಿಯನ್ ಪ್ರೀಮಿಯರ್ ಲೀಗ್‍ನಲ್ಲಿ ಶ್ರೀಲಂಕಾದ ವೇಗಿ ಲಸಿತ್ ಮಾಲಿಂಗ್ ಬೆಸ್ಟ್ ಬೌಲರ್ ಆಗಿ ಯಶಸ್ವಿಯಾಗಿದ್ದಾರೆ. ಇವರು ಐಪಿಎಲ್‍ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಆಟಗಾರನಾಗಿದ್ದು, ಒಟ್ಟು 170 ವಿಕೆಟ್ ಪಡೆದಿದ್ದಾರೆ. ಈ ಬಾರಿಯ ಐಪಿಎಲ್ ಅನ್ನು ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡಬೇಕಿದ್ದ ಮಾಲಿಂಗ್ ಟೂರ್ನಿಯಿಂದ ಹೊರಬಂದಿದ್ದಾರೆ. ಇದನ್ನು ಓದಿ: ಐಪಿಎಲ್ ನಂ.1 ದಾಖಲೆಯ ಸನಿಹದಲ್ಲಿ ರವೀಂದ್ರ ಜಡೇಜಾ
ಸುರೇಶ್ ರೈನಾ: ಐಪಿಎಲ್ ಐಕಾನ್ ಎಂದೇ ಖ್ಯಾತಿ ಗಳಿಸಿರುವ ಸುರೇಶ್ ರೈನಾ ಈ ಬಾರಿ ಐಪಿಎಲ್‍ನಿಂದ ಹೊರ ಬಂದಿದ್ದಾರೆ. ಆದರೆ ಐಪಿಎಲ್‍ನಲ್ಲಿ ಅತೀ ಹೆಚ್ಚು ಪಂದ್ಯಗಳನ್ನಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಈವರೆಗೂ ರೈನಾ ಬರೋಬ್ಬರಿ 193 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. ಜೊತೆಗೆ ಒಂದು ಪವರ್ ಪ್ಲೇನಲ್ಲಿ ಅತೀ ಹೆಚ್ಚು ರನ್ ಸಿಡಿಸಿದ ಆಟಗಾರ ಎಂಬ ದಾಖಲೆ ಹೊಂದಿದ್ದಾರೆ. ರೈನಾ ಒಂದೇ ಪವರ್ ಪ್ಲೇನಲ್ಲಿ 87 ರನ್ ಸಿಡಿಸಿದ್ದಾರೆ.