ಅಹಮದಾಬಾದ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ 3 ನೇ ಟಿ20 ಪಂದ್ಯದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಭರ್ಜರಿ ಬ್ಯಾಟಿಂಗ್ ನಡುವೆಯೂ, ಇಂಗ್ಲೆಂಡ್ ತಂಡ ಇನ್ನು 10 ಬಾಲ್ ಉಳಿದಿರುವಂತೆ 8 ವಿಕೆಟ್‍ನಿಂದ ಗೆದ್ದು ಸರಣಿಯಲ್ಲಿ 2-1 ಮುನ್ನಡೆ ಪಡೆದುಕೊಂಡಿದೆ.
Advertisement
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಇಯಾನ್ ಮೊರ್ಗನ್ ಅತಿಥೇಯ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿದರು. ಭಾರತದ ಪರ ಆರಂಭಿಕರಾಗಿ ಬ್ಯಾಟಿಂಗಿಳಿದ ರೋಹಿತ್ ಶರ್ಮಾ 15ರನ್(17 ಬಾಲ್, 2 ಬೌಂಡರಿ) ಮತ್ತು ಕೆಎಲ್ ರಾಹುಲ್ ಮತ್ತೆ ಶೂನ್ಯಕ್ಕೆ ಔಟ್ ಆಗುವ ಮೂಲಕ ಭರವಸೆಯನ್ನು ನಿರಾಸೆ ಮಾಡಿದರು. ನಂತರ ಬಂದ ಕಳೆದ ಪಂದ್ಯದ ಹೀರೋ ಇಶಾನ್ ಕಿಶಾನ್ ಈ ಪಂದ್ಯದಲ್ಲಿ 4 ರನ್(9 ಬಾಲ್) ಸಿಡಿಸಿ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು.
Advertisement
Advertisement
ನಂತರ ಒಂದಾದ ವಿರಾಟ್ ಕೊಹ್ಲಿ ಮತ್ತು ರಿಷಬ್ ಪಂತ್ ಕೆಲ ಹೊತ್ತು ಬ್ಯಾಟಿಂಗ್‍ನಲ್ಲಿ ಮಿಂಚಿದರು ಕೂಡ ಪಂತ್ 25 ರನ್(20 ಬಾಲ್, 3 ಬೌಂಡರಿ) ಸಿಡಿಸಿ ರನ್ ಔಟ್ ಆದರು. ಒಂದು ಕಡೆ ವಿಕೆಟ್ ಬೀಳುತ್ತಿದ್ದರು ಇತ್ತ ಕೊಹ್ಲಿ ತಮ್ಮ ಎಂದಿನ ಶೈಲಿಯಲ್ಲಿ ಬ್ಯಾಟ್ ಬೀಸಿ ಅಜೇಯ 77 ರನ್( 46 ಎಸೆತ, 8 ಬೌಂಡರಿ, 4 ಸಿಕ್ಸರ್) ಸಿಡಿಸಿ ಕಡೆಯವರೆಗೆ ಕ್ರೀಸ್‍ನಲ್ಲಿದ್ದರು ಅಂತಿಮವಾಗಿ ಭಾರತ ನಿಗದಿತ 20 ಓವರ್‍ನಲ್ಲಿ 6 ವಿಕೆಟ್ ಕಳೆದುಕೊಂಡು 156 ರನ್ ಗಳಿಸಿತು. ಇಂಗ್ಲೆಂಡ್ ಪರ ಮಾರ್ಕ್‍ವುಡ್ 3 ವಿಕೆಟ್ ಮತ್ತು ಜೋರ್ಡನ್ 2 ವಿಕೆಟ್ ಕಿತ್ತು ಮಿಂಚಿದರು.
Advertisement
Breakthrough for #TeamIndia! ????????@yuzi_chahal strikes in his first over.????????
England 1 down as Jason Roy departs. @Paytm #INDvENG
Follow the match ???? https://t.co/mPOjpEkHpC pic.twitter.com/xuD0J5n5C4
— BCCI (@BCCI) March 16, 2021
157 ರನ್‍ಗಳ ಟಾರ್ಗೆಟ್‍ನೊಂದಿಗೆ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್‍ಗೆ ಚಹಲ್ ಆರಂಭಿಕ ಆಘಾತ ನೀಡಿದರು. ಜೋಸನ್ ರಾಯ್ 9 ರನ್(13 ಬಾಲ್, 2 ಬಾಲ್) ಔಟ್ ಆದರೆ, ಇತ್ತ ಇನ್ನೋರ್ವ ಆರಂಭಿಕ ಬ್ಯಾಟ್‍ಮ್ಯಾನ್ ಜೋಸ್ ಬಟ್ಲರ್, ಡೇವಿಡ್ ಮಲಾನ್ ಜೊತೆ ಸೇರಿ ಎರಡನೇ ವಿಕೆಟ್‍ಗೆ 58 ರನ್(39 ಬಾಲ್) ಜೊತೆಯಾಟವಾಡಿ ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿದರು.
England win the third @Paytm #INDvENG T20I & go 2-1 up in the series. #TeamIndia will look to win the next game & take the series into the decider.
Scorecard ???? https://t.co/mPOjpECiha pic.twitter.com/zkN1xauHQL
— BCCI (@BCCI) March 16, 2021
ಈ ವೇಳೆ ದಾಳಿಗಿಳಿದ ವಾಷಿಂಗ್ಟನ್ ಸುಂದರ್ 18 ರನ್ ಗಳಿಸಿದ್ದ ಡೇವಿಡ್ ಮಲಾನ್ ವಿಕೆಟ್ ಕಬಳಿಸಿದರು. ಆದರೂ ಬಟ್ಲರ್ ತಮ್ಮ ಆರ್ಭಟ ಮುಂದುವರಿಸಿ ಅಜೇಯ 83 ರನ್(52 ಎಸೆತ, 5 ಬೌಂಡರಿ, 4 ಸಿಕ್ಸ್‍ರ್) ಸಿಡಿಸಿ ಪಂದ್ಯಗೆಲ್ಲಲು ಮಹತ್ವದ ಪಾತ್ರ ವಹಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ಜಾನಿ ಬೈಸ್ರ್ಟೋವ್ ಅಜೇಯ 40 ರನ್(28 ಬಾಲ್, 5 ಬೌಂಡರಿ) ಸಿಡಿಸಿ ಇನ್ನು 10 ಬಾಲ್ ಬಾಕಿ ಇರುವಂತೆ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ ಇಂಗ್ಲೆಂಡ್ ತಂಡ 5 ಪಂದ್ಯಗಳ ಟಿ20ಸರಣಿಯಲ್ಲಿ 2-1 ಮುನ್ನಡೆ ಪಡೆದುಕೊಂಡಿದೆ.