ಕೊಹ್ಲಿಯನ್ನು ಹಾಡಿಹೊಗಳಿದ ಕೇವಿನ್ ಪೀಟರ್ಸನ್

Public TV
1 Min Read
kevin petwrson

ಮುಂಬೈ: ಈ ಬಾರಿಯ ಐಪಿಎಲ್‍ನಲ್ಲಿ ಆರ್​ಸಿಬಿ ತಂಡದ ನಿರ್ವಹಣೆ ಕಂಡು ಸಂತೋಷಗೊಂಡಿರುವ ಇಂಗ್ಲೆಂಡ್‍ನ ಮಾಜಿ ಆಟಗಾರ ಕೇವಿನ್ ಪೀಟರ್ಸನ್ ಆರ್​ಸಿಬಿ ಕಪ್ತಾನ ವಿರಾಟ್ ಕೊಹ್ಲಿಯನ್ನು ಹಾಡಿಹೊಗಳಿದ್ದಾರೆ.

virat kohli

ನಿಜಕ್ಕೂ 14ನೇ ಆವೃತ್ತಿ ಐಪಿಎಲ್‍ನಲ್ಲಿ ಆರ್​ಸಿಬಿ ತಂಡದ ನಿರ್ವಹಣೆ ಕಂಡು ಅಚ್ಚರಿಯಾಗಿದೆ. ಅದರಲ್ಲೂ ಬೌಲಿಂಗ್ ಸೈಡ್ ಅಂತೂ ತುಂಬಾನೆ ಬದಲಾವಣೆಯೊಂದಿಗೆ ಬಲಿಷ್ಠವಾಗಿ ಗೋಚರಿಸುತ್ತಿದೆ. ಹಾಗಾಗಿ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

rcb virat kohli web

ಈ ಕುರಿತು ಮಾಧ್ಯಮವೊಂದರ ಚರ್ಚೆಯಲ್ಲಿ ಭಾಗವಹಿಸಿದ ಪೀರ್ಟಸನ್, ಆರ್​ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ತಂಡದ ನಾಯಕನಾಗಿ ತಂಡವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದು, ಸರಿಯಾದ ನಿರ್ಧಾರಗಳನ್ನು ತೆಗೆದುಕೊಂಡು ಮುನ್ನುಗುತ್ತಿದ್ದಾರೆ ಹಾಗಾಗಿ ಆಡಿದ ನಾಲ್ಕು ಪಂದ್ಯವನ್ನು ಗೆದ್ದುಕೊಂಡು 8 ಅಂಕದೊಂದಿಗೆ ಅಗ್ರಸ್ಥಾನದಲ್ಲಿದೆ ಎಂದು ಕೊಹ್ಲಿಯ ಪರ ಹೊಗಳಿಕೆಯ ಮಾತನಾಡಿದ್ದಾರೆ.

rcb Shahbaz Ahmed virat kohli web

ಆರ್​ಸಿಬಿ ತಂಡ ಡೆತ್ ಓವರ್‍ ಗಳಲ್ಲಿ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಎದುರಾಳಿ ತಂಡವನ್ನು ಬಗ್ಗಬಡಿಯುತ್ತಿದೆ. ಪ್ರತಿ ಸೀಸನ್‍ನ್ನು ಗಮನಿಸಿದರು ಕೂಡ ಆರ್​ಸಿಬಿ ತಂಡದ ಬ್ಯಾಟಿಂಗ್ ಲೈನ್ ಅಪ್ ತುಂಬಾ ಬಲಿಷ್ಠವಾಗಿ ಗೋಚರಿಸುತ್ತಿತ್ತು. ಆದರೆ ಈ ಬಾರಿ ಆರ್​ಸಿಬಿ ಬೌಲರ್‍ ಗಳು ಉತ್ತಮ ಪ್ರದರ್ಶನದಿಂದ ಸದ್ದು ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Mohammed Siraj

ಆರ್​ಸಿಬಿ ತಂಡದ ಯುವ ಬೌಲರ್ ಮೊಹಮ್ಮದ್ ಸಿರಾಜ್ ಬಗ್ಗೆ ಮಾತನಾಡಿರುವ ಪೀಟರ್ಸನ್, ಸಿರಾಜ್ ಒಬ್ಬ ವಿಶಿಷ್ಟವಾದ ಬೌಲರ್. ಆವರಿಗೆ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಸಿಕ್ಕಿರುವ ಅನುಭವವನ್ನು ಇದೀಗ ಐಪಿಎಲ್‍ನಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಇವರಿಗೆ ಕೈಲ್ ಜೇಮಿಸನ್ ಉತ್ತಮ ಸಹಾಯಕ ಬೌಲರ್ ಆಗಿದ್ದು, ಹರ್ಷಲ್ ಪಟೇಲ್ ಡೆತ್ ಓವರ್‍ ಗಳಲ್ಲಿ ಮ್ಯಾಜಿಕ್ ಮಾಡುತ್ತಿದ್ದಾರೆ. ಇವರೊಂದಿಗೆ ವಾಷಿಂಗ್ಟನ್ ಸುಂದರ್ ಮತ್ತು ಶಹಬಾಜ್ ಅಹ್ಮದ್ ಕೂಡ ಉತ್ತಮ ಲಯದಲ್ಲಿದ್ದಾರೆ ಎಂದು ಅಭಿಪ್ರಾಯ ಹಂಚಿಕೊಂಡರು.

rcb Shahbaz Ahmed

ಕೇವಿನ್ ಪೀಟರ್ಸನ್ ಈ ಹಿಂದೆ ಐಪಿಎಲ್‍ನಲ್ಲಿ ಆರ್​ಸಿಬಿ ತಂಡದ ಪರ ಆಟವಾಡಿದ್ದರು. ಹಾಗಾಗಿ ಆರ್​ಸಿಬಿ ತಂಡದ ಕುರಿತು ಸರಿಯಾದ ಮಾಹಿತಿ ಹೊಂದಿರುವ ಪೀಟರ್ಸನ್ ಈ ಬಾರಿಯ ಅವರ ಆಟದ ಕುರಿತು ಮೆಚ್ಚುಗೆ ಸೂಚಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *