ಡೆಲ್ಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿಗೆ ತಂಡದ ಸದಸ್ಯ ಕೈಲ್ ಜೇಮಿಸನ್ ಅಭ್ಯಾಸದ ವೇಳೆ ಡ್ಯೂಕ್ ಬಾಲ್ ಹಾಕಲು ನಿರಾಕರಿಸಿದ್ದಾರೆ. ಇದು ಇದೀಗ ಬಾರಿ ಸುದ್ದಿಯಾಗುತ್ತಿದೆ.
14ನೇ ಆವೃತ್ತಿಯ ಐಪಿಎಲ್‍ನಲ್ಲಿ ಭಾಗವಹಿಸಿರುವ ನ್ಯೂಜಿಲೆಂಡ್ ತಂಡದ ಆಲ್‍ರೌಂಡರ್ ಕೈಲ್ ಜೇಮಿಸನ್ ಆರ್ಸಿಬಿ ತಂಡದ ಪರ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈ ನಡುವೆ ಆರ್ಸಿಬಿ ತಂಡದ ಅಭ್ಯಾಸದ ವೇಳೆ ವಿರಾಟ್, ಜೇಮಿಸನ್ ಅವರೊಂದಿಗೆ ಡ್ಯೂಕ್ ಬಾಲ್ ಹಾಕುವಂತೆ ಮನವಿ ಮಾಡಿಕೊಂಡಿದ್ದಾರೆ. ಆದರೆ ಇದಕ್ಕೆ ಜೇಮಿಸನ್ ನಾನು ಯಾವುದೇ ಕಾರಣಕ್ಕೂ ಡ್ಯೂಕ್ ಬಾಲ್ ಮಾತ್ರ ಹಾಕುವುದಿಲ್ಲ ಎಂದು ವಿರಾಟ್ ಮನವಿಯನ್ನು ತಿರಸ್ಕರಿಸಿದ್ದಾರೆ.
ಡ್ಯೂಕ್ ಬಾಲ್ ಎಂದರೇನು?
ಕ್ರಿಕೆಟ್ ಆಡುವ ಹಲವು ದೇಶಗಳಲ್ಲಿ ಬೇರೆ ಬೇರೆ ಬಾಲ್‍ಗಳನ್ನು ಬಳಸಲಾಗುತ್ತದೆ. ಟೆಸ್ಟ್ ಕ್ರಿಕೆಟ್‍ನಲ್ಲಿ ಬೇರೆ ಬೇರೆ ದೇಶಗಳು ಮೂರು ಮಾದರಿಯ ಬಾಲ್‍ಗಳನ್ನು ಬಳಸುತ್ತದೆ ಅದರಲ್ಲಿ ಸಾನ್ಸ್ ಪರೀಲ್ ಗ್ರೀನ್‍ಲ್ಯಾಂಡ್ಸ್(ಎಸ್‍ಜಿ) ಕುಕಬುರಾ ಸ್ಪೋರ್ಟ್ ಮತ್ತು ಡ್ಯೂಕ್ ಬಾಲ್ ಎಂಬ ಮೂರು ಮಾದರಿಯ ಬಾಲ್‍ನ್ನು ಬಳಸಲಾಗುತ್ತದೆ. ಅದರಲ್ಲಿ ಭಾರತದಲ್ಲಿ ಸಾನ್ಸ್ ಪರೀಲ್ ಗ್ರೀನ್‍ಲ್ಯಾಂಡ್ಸ್ ಬಾಲ್ ಬಳಸಿದರೆ. ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಸೌತ್ ಆಫ್ರಿಕಾ, ಪಾಕಿಸ್ತಾನ, ಶ್ರೀಲಂಕಾ ದೇಶಗಳಲ್ಲಿ ಕುಕಬುರಾ ಸ್ಪೋರ್ಟ್ ಬಾಲ್ ಬಳಸಲಾಗುತ್ತದೆ. ಇಂಗ್ಲೆಂಡ್ ಮತ್ತು ವೆಸ್ಟ್ಇಂಡಿಸ್‍ನಲ್ಲಿ ಅತೀ ಹೆಚ್ಚು ಡ್ಯೂಕ್ ಬಾಲ್ ಬಳಸಲಾಗುತ್ತದೆ. ಈ ಮೂರು ಮಾದರಿಯ ಬಾಲ್‍ಗಳಲ್ಲಿ 6 ಲೈನ್‍ಗಳ ಸ್ಟಿಚ್‍ಗಳು ಇರುತ್ತವೆ ಇವುಗಳನ್ನು ಕೈಗಳಿಂದ ಮತ್ತು ಮಷಿನ್ ಮೂಲಕ ಸ್ಟಿಚ್ ಮಾಡಲಾಗುತ್ತದೆ. ಡ್ಯೂಕ್ ಬಾಲ್‍ಗಳನ್ನು ಕೈಗಳಿಂದ ಸ್ಟಿಚ್ ಮಾಡಲಾಗುತ್ತಿದ್ದು, ಇದು ವೇಗಿಗಳಿಗೆ ಹೆಚ್ಚು ನೆರವಾಗುತ್ತದೆ ಮತ್ತು ಈ ಬಾಲ್ ಹೆಚ್ಚು ಸ್ವಿಂಗ್ ಆಗುತ್ತದೆ.
ವಿರಾಟ್ ಮನವಿ ತಿರಸ್ಕಿರಿಸಿರುವ ಜೇಮಿಸನ್ ಅವರ ಗುಟ್ಟನ್ನು ತಂಡದ ಇನ್ನೋರ್ವ ಆಟಗಾರ ಡೇನಿಯಲ್ ಕ್ರಿಶ್ಚಿಯನ್ ಬಿಚ್ಚಿಟ್ಟಿದ್ದು, ಜೇಮಿಸನ್ ಮುಂಬರುವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‍ನ್ನು ಗಮನದಲ್ಲಿಟ್ಟುಕೊಂಡು ಈ ರೀತಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಹೌದು ಈ ಬಾರಿಯ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಭಾರತ ಹಾಗೂ ನ್ಯೂಜಿಲ್ಯಾಂಡ್ ತಂಡಗಳ ನಡುವೆ ನಡೆಯಲಿದೆ ಈ ವೇಳೆ ಇವರಿಬ್ಬರು ಕೂಡ ಎದುರಾಳಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಟೆಸ್ಟ್ ಚಾಂಪಿಯನ್ ಶಿಪ್‍ನಲ್ಲಿ ಡ್ಯೂಕ್ ಬಾಲ್ ಬಳಸಲಾಗುತ್ತದೆ. ಹಾಗಾಗಿ ಜೇಮಿಸನ್ ಇದೀಗ ಕೊಹ್ಲಿಗೆ ಡ್ಯೂಕ್ ಬಾಲ್ ಹಾಕಿದರೆ ಮುಂದಿನ ಟೆಸ್ಟ್ ಚಾಂಪಿಯನ್ ಶಿಪ್ ಪಂದ್ಯಕ್ಕೂ ಮುನ್ನ ತನ್ನ ಡ್ಯೂಕ್ ಬಾಲ್ ಎಸೆತವನ್ನು ಸರಿಯಾಗಿ ಕೊಹ್ಲಿ ಪರಿಚಯ ಮಾಡಿಕೊಂಡರೆ ತಂಡಕ್ಕೆ ಹಿನ್ನಡೆ ಎಂಬ ಕಾರಣಕ್ಕೆ ಬಾಲ್ ಮಾಡಲು ನಿರಾಕರಿಸಿದ್ದಾರೆ ಎಂದು ಕ್ರಿಶ್ಚಿಯನ್ ತಿಳಿಸಿದ್ದಾರೆ.