ಬೆಂಗಳೂರು: ಹೈದರಾಬಾದ್‍ನ ಭಾರತ್ ಬಯೋಟೆಕ್ ಕಂಪನಿ ಅಭಿವೃದ್ಧಿ ಪಡಿಸಿರುವ ಕೊರೊನಾ ಲಸಿಕೆ ಕೊವ್ಯಾಕ್ಸಿನ್ ಉತ್ಪಾದನಾ ದಿನಾಂಕ ಮತ್ತು ಅವಧಿ ಮುಗಿಯುವ ದಿನಾಂಕ(ಎಕ್ಸ್‍ಪೈರಿ ಡೇಟ್)ಲೆಕ್ಕಚಾರದ ಮೇಲೆ ಭಾರೀ ಚರ್ಚೆ ನಡೆಯುತ್ತಿದೆ.
Advertisement
ಕಡಿಮೆ ಸಮಯದಲ್ಲಿ ಕೊವ್ಯಾಕ್ಸಿನ್ ಬಳಸಬೇಕು. ಲಸಿಕೆ ತಯಾರಾದ ದಿನದಿಂದ 6 ತಿಂಗಳಷ್ಟೇ ಸಮಯಾವಕಾಶ ಇರುತ್ತದೆ. ಹೀಗೆ ಲಸಿಕೆ ಉಪಯೋಗಕ್ಕೆ ಕಡಿಮೆ ಪ್ರಮಾಣದ ಕಾಲವಾಕಾಶ ನೀಡಿದ ಹಿನ್ನೆಲೆ ತಜ್ಞರು ತಮ್ಮದೇ ಅಭಿಪ್ರಾಯ ಮಂಡಿಸಿದ್ದಾರೆ.
Advertisement
Advertisement
ವ್ಯಾಕ್ಸಿನ್ ಬಳಕೆ ಅವಕಾಶ ಕೇವಲ 6 ತಿಂಗಳಾಗಲು ಇರಲು ಪ್ರಮುಖ ಕಾರಣ ಲಸಿಕೆಯ ಶೀತಲತೆ ಕಾಯುವುದು. ಲಸಿಕೆ ಆವಿಷ್ಕಾರವಾದ ನಂತರ 6 ತಿಂಗಳು ಸ್ಟೇಬಿಟಿಲಿ ಚೆಕ್‍ಗಾಗಿ ಇಡಬೇಕು. ಆದರೆ ಕೊವ್ಯಾಕ್ಸಿನ್ ಸ್ಟೆಬಿಲಿಟಿ ಚೆಕ್‍ಗೆ 6 ತಿಂಗಳು ಕಾಲವಾಕಾಶ ಸಿಕ್ಕಿಲ್ಲ. ಕೊವ್ಯಾಕ್ಸಿನ್‍ಗೆ ಆಕ್ಸಿಲರಿ ಕಿಟ್ ಸ್ಟೇವಿಲಿಟಿ ಅಂತ ಒಂದು ತಿಂಗಳು ಕಾಲವಾಕಾಶ ಚೆಕ್ ಮಾಡಲಾಗಿದೆ ಈ ಹಿನ್ನೆಲೆಯಲ್ಲಿ ಮುನ್ನಚ್ಚರಿಕೆಯನ್ನು ಆಧರಿಸಿ ಕೊವ್ಯಾಕ್ಸಿನ್ ಬಳಕೆ ಕಾಲವಾಕಾಶ 6 ತಿಂಗಳು ಅಂತ ಹಾಕಿರುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.
Advertisement
ಆಕ್ಸಿಲರಿ ಕಿಟ್ ಸ್ಟೇಬಿಲಿಟಿ ಅಂತ ಒಂದರಿಂದ ಎರಡು ತಿಂಗಳು ಮಾತ್ರ ಚೆಕ್ ಮಾಡಿರುವ ಸಾಧ್ಯತೆಗಳಿದ್ದು, ಕೊವ್ಯಾಕ್ಸಿನ್ ಹೊಸ ಪ್ರಯೋಗ ಹಿನ್ನೆಲೆಯಲ್ಲಿ ಅಲ್ಪವಾಧಿ ಉಪಯೋಗಕ್ಕೆ ಅವಕಾಶದ ಕೊಟ್ಟಿರುವ ಸಾಧ್ಯತೆ ಇದೆ. ಇದೂ ಉತ್ತಮ ಆಯ್ಕೆಯಾಗಿದ್ದು, ವರ್ಷಗಟ್ಟಲೆ ಅವಕಾಶ ಕೊಟ್ಟಿದ್ದರೆ ಪರಿಣಾಮ ತಿಳಿಯಲು ಕಷ್ಟವಾಗುತ್ತಿತ್ತು. ಲಸಿಕೆ ಸಂಗ್ರಹಕ್ಕೆ ಬೇಕಾದ ಶೀತಲೀಕರಣ ಕೇಂದ್ರ ಕಡಿಮೆ ಇರುವುದರಿಂದ ಕೂಡ ಈ ರೀತಿ ಮಾಡಿರಬಹುದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ರಾಜ್ಯಕ್ಕೆ 20 ಸಾವಿರ ಡೋಸ್ ಕೊವ್ಯಾಕ್ಸಿನ್ ಲಸಿಕೆ ತಲುಪಿದೆ. ಬೆಂಗಳೂರು ನಗರದಲ್ಲಿ 1 ಲಕ್ಷ 78 ಸಾವಿರ ಫಲಾನುಭವಿಗಳಿಗೆ ಕೊರೊನಾ ಲಸಿಕೆ ನೀಡುವ ಪಟ್ಟಿಯೂ ಸಿದ್ಧವಾಗಿದೆ ಎಂದು ಮೂಲಗಳ ಪ್ರಕಾರ ತಿಳಿದುಬಂದಿದೆ.