ದಾವಣಗೆರೆ: ಮನೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಸಹೋದರಿಯರಿಬ್ಬರ ಶವ ಪತ್ತೆಯಾಗಿರುವ ಘಟನೆ ದಾವಣಗೆರೆಯ ಹೊರವಲಯದಲ್ಲಿ ನಡೆದಿದೆ.
ಗೌರಮ್ಮ (34) ರಾಧಮ್ಮ (32) ಸಾವನ್ನಪ್ಪಿರುವ ಸಹೋದರಿಯರಾಗಿದ್ದಾರೆ. ದಾವಣಗೆರೆಯ ಹೊರವಲಯದಲ್ಲಿರುವ ಆಂಜನೇಯ ಕಾಟನ್ ಮಿಲ್ ಪ್ರದೇಶದ ಬಾಡಿಗೆ ಮನೆಯಲ್ಲಿ ಘಟನೆ ನಡೆದಿದೆ. ಘಟನೆ ನಡೆದು ಐದಾರು ದಿನವಾಗಿದ್ದು, ಕೊಳೆತ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿವೆ. ಇದನ್ನೂ ಓದಿ: ಮೃತ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ನೆರವು ನೀಡಿದ ಬಿಎಸ್‍ವೈ
ಮೃತ ಗೌರಮ್ಮ ಹಾಗೂ ರಾಧಿಕಾ ಮೂಲತಃ ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲೂಕಿನ ಬೆನಕನಹಳ್ಳಿ ಗ್ರಾಮದವರಾಗಿದ್ದಾರೆ. ಕೂಲಿ ಮಾಡಲು ದಾವಣಗೆರೆಯ ಆಂಜನೇಯ ಕಾಟನ್ ಮಿಲ್ ಕೆಲಸ ಮಾಡುತ್ತಿದ್ದು, ಅದೇ ಬಡಾವಣೆಯಲ್ಲಿ ಇಬ್ಬರೂ ವಾಸವಾಗಿದ್ದರು. ಇದನ್ನೂ ಓದಿ: ಜನ ಬಯಸಿದರೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ: ಅಭಿಷೇಕ್ ಅಂಬರೀಶ್
ಕಳೆದ ಐದಾರು ದಿನಗಳಿಂದ ಮನೆಯಿಂದ ಹೊರ ಬಂದಿರಲಿಲ್ಲ, ಅಲ್ಲದೆ ಈ ಇಬ್ಬರು ಸಹೋದರಿಯರು ವಾಸವಾಗಿದ್ದ ಮನೆಯಿಂದ ಕೆಟ್ಟ ವಾಸನೆ ಬರುತ್ತಿದ್ದು, ಇದರಿಂದ ಸ್ಥಳೀಯರು ವಿದ್ಯಾ ನಗರ ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ಬಂದುಮನೆ ಬಾಗಿಲು ತೆರೆದಾಗ ಪ್ರಕರಣ ಬಯಲಿಗೆ ಬಂದಿದೆ. ಅಲ್ಲದೆ ಸಹೋದರಿಯರಿಬ್ಬರ ಮೃತದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದು, ಕೆಟ್ಟ ವಾಸನೆ ಬರುತ್ತಿದೆ. ಈ ಸಂಬಂಧ ವಿದ್ಯಾನಗರ ಠಾಣೆಯಲ್ಲಿ ಮೃತರ ಕುಟುಂಬಸ್ಥರು ಕೊಲೆ ಶಂಕೆ ಎಂದು ದೂರು ನೀಡಿದ್ದು, ಗೌರಮ್ಮ ಪತಿ ಮಂಜುನಾಥ್ ಎಂಬುವವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಪ್ರಕರಣ ಸಂಬಂಧಿಸಿದಂತೆ ಮೃತರ ಕುಟುಂಬಸ್ಥರ ಬಳಿ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ.