ಚಿಕ್ಕೋಡಿ (ಬೆಳಗಾವಿ): ಕೊಳವೆ ಬಾವಿಗೆ ಬಿದ್ದು ರೈತ ಸಾವನ್ನಪ್ಪಿರುವ ಘಟನೆ ರಾಯಬಾಗ ತಾಲೂಕಿನ ಸುಲ್ತಾನಪುರ ಗ್ರಾಮದಲ್ಲಿ ನಡೆದಿದೆ.
ಸುಲ್ತಾನಪೂರ ಗ್ರಾಮದ ಲಕ್ಕಪ್ಪ ಸಂಗಪ್ಪ ದೊಡಮನಿ (38) ಕೊಳವೆ ಬಾವಿಯಲ್ಲಿ ಸಿಲುಕಿ ಮೃತಪಟ್ಟ ರೈತ. ಕೊಳವೆ ಬಾವಿಗೆ ಸಿಲುಕಿದ್ದ ಮಾಹಿತಿ ತಿಳಿಯುತ್ತಿದ್ದಂತೆ ರಾಯಬಾಗ ತಹಶೀಲ್ದಾರ್ ಚಂದ್ರಕಾಂತ ಭಜಂತ್ರಿ, ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದರು. ತಕ್ಷಣವೇ 2 ಜೆಸಿಬಿಗಳನ್ನು ಕರೆಯಿಸಿ ಕಾರ್ಯಾಚರಣೆ ಆರಂಭಿಸಿದರು.
Advertisement
Advertisement
ಸುಮಾರು 18ರಿಂದ 20 ಅಡಿ ಆಳದಲ್ಲಿ ಸಿಲುಕಿದ್ದ ಲಕ್ಕಪ್ಪ ಅವರ ದೇಹವನ್ನ ಕ್ಯಾಮೆರಾದಿಂದ ಗಮನಿಸಿ ಜೆಸಿಬಿ ಮೂಲಕ ಮೂರು ಗಂಟೆಗಳ ಕಾರ್ಯಾಚರಣೆ ನಡೆಸಲಾಯಿತು. ಬಳಿಕ ಕೊಳವೆ ಬಾವಿಯಿಂದ ಶವವನ್ನ ಹೊರ ತೆಗೆದು ರಾಯಬಾಗ ತಾಲೂಕಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಯಿತು.
Advertisement
ಕಳೆದ ವಾರ ತನ್ನ ಜಮೀನಿನಲ್ಲಿ ಕೊಳವೆ ಬಾವಿ ಕೊರಿಸಿದ್ದ ಲಕ್ಕಪ್ಪ, ಕಡಿಮೆ ನೀರು ಬಂದಿದ್ದರಿಂದ ಮನನೊಂದ ಆತ್ಮಹತ್ಯೆಗೆ ಯತ್ನ ಮಾಡಿಕೊಂಡಿರಬಹದು ಎಂಬ ಶಂಕೆಯನ್ನ ಪೊಲೀಸರು ವ್ಯಕ್ತಪಡಿಸಿದ್ದಾರೆ. ಕಾರ್ಯಾಚರಣೆಯ ಮಾಹಿತಿ ತಿಳಿದು ಬೆಳಗಾವಿ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Advertisement
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಬೆಳಗಾವಿ ಡಿಸಿ ಬೊಮ್ಮನಹಳ್ಳಿ, ಈ ಪ್ರಕರಣದ ಸಂಪೂರ್ಣ ತನಿಖೆ ನಡೆಸಲು ಹೇಳಿದ್ದೇನೆ. ಇದು ಆತ್ಮಹತ್ಯೆ ಅಥವಾ ಕೊಲೆಯೇ ಎನ್ನುವ ತಿಳಿಯುತ್ತದೆ ಎಂದು ಹೇಳಿದರು.