– ಮೂಕಾಂಬಿಕಾ ಸನ್ನಿಧಿಯಲ್ಲಿ ಚಂಡಿಕಾಹೋಮ
ಉಡುಪಿ: ಸ್ಯಾಂಡಲ್‍ವುಡ್ ನಟ-ನಿರ್ದೇಶಕ ರಿಷಭ್ ಶೆಟ್ಟಿ ತನ್ನ ಮಗನ ಎರಡನೇ ವರ್ಷದ ಹುಟ್ಟುಹಬ್ಬವನ್ನು ಕೊಲ್ಲೂರು ಮೂಕಾಂಬಿಕಾ ಸನ್ನಿಧಿಯಲ್ಲಿ ಚಂಡಿಕಾಹೋಮ ಮಾಡುವ ಮೂಲಕ ಆಚರಿಸಿದರು.
ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರದವರಾದ ರಿಷಬ್ ಶೆಟ್ಟಿ ಕುಟುಂಬ ಸಮೇತರಾಗಿ ಕೊಲ್ಲೂರಿಗೆ ಭೇಟಿಕೊಟ್ಟರು. ರಿಷಬ್ ಶೆಟ್ಟಿ, ಮಗ ರನ್ವಿತ್, ಪತ್ನಿ ಪ್ರಗತಿ ಜೊತೆ ತಾಯಿ ಮೂಕಾಂಬಿಕೆಯ ದರ್ಶನಗೈದು, ರನ್ವಿತ್ ಶೆಟ್ಟಿ ಹುಟ್ಟುಹಬ್ಬವನ್ನು ದೇಗುಲದ ಯಜ್ಞಶಾಲೆಯಲ್ಲಿ ಚಂಡಿಕಾಹೋಮ ಮಾಡುವ ಮೂಲಕ ಆಚರಿಸಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ರಿಷಬ್ ಶೆಟ್ಟಿ, ದೇವರ ಆಶೀರ್ವಾದ ನಮ್ಮ ಶ್ರಮ ಇದ್ದರೆ ಏನು ಬೇಕಾದರೂ ಸಾಧಿಸಬಹುದು. ನಾನು ಚಿಕ್ಕವನಿದ್ದಾಗಲೂ ಶುಭದಿನದಲ್ಲಿ ಕೊಲ್ಲೂರಿಗೆ ಬರುತ್ತಿದ್ದೆ. ಈಗ ಮಗನನ್ನು ಕರೆದುಕೊಂಡು ಬಂದು ದೇವಿಯ ಸೇವೆ ಸಲ್ಲಿಸಿದ್ದೇನೆ ಎಂದರು.
ಕೆಲದಿನಗಳ ಹಿಂದೆ ರಿಷಬ್ ಶೆಟ್ಟಿ ನಟನೆಯ ‘ಹೀರೋ’ ಚಿತ್ರ ತೆರೆಕಂಡು ಯಶಸ್ವಿ ಪ್ರದರ್ಶನ ಕಂಡಿತ್ತು. ಪ್ರೇಕ್ಷಕರಿಂದ ಚಪ್ಪಾಳೆಯನ್ನು ಗಿಟ್ಟಿಸಿಕೊಂಡಿತ್ತು.