ಕೋಲ್ಕತ್ತಾ: ರಾಜ್ಯದಲ್ಲಿ ದೋಣಿಯಲ್ಲಿ ಪ್ರಯಾಣಿಸುವಾಗ ಸಮಯವನ್ನು ಓದಿನಲ್ಲಿ ಕಳೆಯಲೆಂದು ಮಕ್ಕಳಿಗಾಗಿ ದೋಣಿಯಲ್ಲಿ ಲೈಬ್ರರಿಯನ್ನು ತೆರೆಯುವ ಮೂಲಕ ಸಾರಿಗೆ ನಿಗಮವು ಹೊಸ ಪ್ರಯತ್ನಕ್ಕೆ ಮುಂದಾಗಿದೆ.
Advertisement
Advertisement
ದೋಣಿಯಲ್ಲಿ ಪ್ರಯಾಣ ಬೆಳೆಸುವ ಮಕ್ಕಳಿಗಾಗಿ 500 ಬೇರೆ ಬೇರೆ ಹೆಸರಾಂತ ಲೇಖಕರ ಪುಸ್ತಕಗಳನ್ನು ಹೊಂದಿದ ಲೈಬ್ರರಿಯನ್ನು ಕೊಲ್ಕತ್ತಾದ ಸಾರಿಗೆ ನಿಗಮ ಮತ್ತು ಸ್ಥಳೀಯ ಪುಸ್ತಕ ಮಳಿಗೆಯ ಕೂಡುವಿಕೆಯಲ್ಲಿ ದೋಣಿಯಲ್ಲೇ ಪ್ರಾರಂಭಿಸಿದೆ.
Advertisement
ಈ ಗ್ರಂಥಾಲಯ ಸ್ಥಾಪನೆಯ ಮುಖ್ಯ ಉದ್ದೇಶ ಏನೆಂದರೆ ಹೊಗ್ಲಿ ನದಿಯಲ್ಲಿ ದೋಣಿಯಲ್ಲಿ ಪ್ರಯಾಣಿಸುವಾಗ ಕೊಲ್ಕತ್ತಾದ ವಿಶೇಷತೆಯನ್ನು ತಿಳಿಸುವ ಸಣ್ಣ ಪ್ರಯತ್ನ ಇದಾಗಿದ್ದು, ದೋಣಿಯಲ್ಲಿ ಸಂಚರಿಸುವ ಮಕ್ಕಳಿಗಾಗಿ 500 ಬೇರೆ ಬೇರೆ ಲೇಖಕರ ಪುಸ್ತಕಗಳನ್ನು ಇಟ್ಟಿದ್ದೇವೆ. ಇದು ಇಂಗ್ಲೀಷ್ ಮತ್ತು ಬೆಂಗಾಳಿ ಭಾಷೆಯಲ್ಲಿದೆ. ಮಿಲೇನಿಯಮ್ ಪಾರ್ಕ್ ನಿಂದ ಬೇಲೂರು ಮಠ ಜೆಟ್ಟಿಗೆ ಪ್ರಯಾಣಿಸಲು 3 ಗಂಟೆಯ ಬೇಕಾಗುತ್ತದೆ ಈ ಹೊತ್ತನ್ನು ಓದಿನಲ್ಲಿ ಕಳೆಯಲಿ ಎಂಬ ಉದ್ದೇಶವನ್ನು ಹೊಂದಿದ್ದೇವೆ. ಪ್ರತಿದಿನ ದೋಣಿಯು ಮೂರು ಬಾರಿ ಈ ಮಾರ್ಗವಾಗಿ ಸಂಚರಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
ದೋಣಿ ಲೈಬ್ರರಿಯಲ್ಲಿ ಮಕ್ಕಳಿಗೆ 50 ರೂಪಾಯಿ ಮತ್ತು ಹಿರಿಯರಿಗೆ 100 ರೂಪಾಯಿ ಟಿಕೆಟ್ ದರವನ್ನು ನಿಗದಿ ಪಡಿಸಲಾಗಿದೆ. ಈ ಪುಸ್ತಕಗಳ ಪೈಕಿ ಕಥೆ, ಕಾದಂಬರಿ, ಮತ್ತು ಕವನಗಳನ್ನು ಹೊಂದಿರುವ ಪುಸ್ತಕಗಳನ್ನು ಪ್ರಯಾಣಿಕರಿಗಾಗಿ ಕಲ್ಪಿಸಿಕೊಟ್ಟಿದ್ದಾರೆ. ಇದರೊಂದಿಗೆ ದೋಣಿಯಲ್ಲಿ ಉಚಿತ ವೈಫೈ ಸೌಲಭ್ಯವು ಇದೆ.