ಬೆಂಗಳೂರು: ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಬರುವ ಹೊತ್ತಿನಲ್ಲೆ 3ನೇ ಅಲೆಗೂ ರಾಜ್ಯ ಸರ್ಕಾರ ಸಕಲ ಸಿದ್ಧತೆಗಳನ್ನ ಮಾಡಿಕೊಳ್ಳಬೇಕು ಅಂತ ಅವಧೂತ ವಿನಯ್ ಗುರೂಜಿ ಸಿಎಂ ಯಡಿಯೂರಪ್ಪರಿಗೆ ಸಲಹೆ ನೀಡಿದ್ದಾರೆ.
ಮುಖ್ಯಮಂತ್ರಿಗಳ ಕಾವೇರಿ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ ವಿನಯ್ ಗುರೂಜಿ, 3ನೇ ಅಲೆ ಸಾಕಷ್ಟು ತೊಂದರೆ ಕೊಡುತ್ತೆ ಅಂತ ವಿಜ್ಞಾನ ವಲಯ ಹೇಳುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಎಚ್ಚರ ತಪ್ಪದೆ ಅಗತ್ಯ ಸಿದ್ದತೆ ಮಾಡಿಕೊಳ್ಳಬೇಕು. ಎರಡನೇ ಅಲೆಯಲ್ಲಿ ಆದ ಸಮಸ್ಯೆ ಆಗದಂತೆ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಅಂತ ಸಲಹೆ ನೀಡಿದರು. ಇದಲ್ಲದೆ ಪ್ರತಿ ತಾಲೂಕಿಗೂ ಒಂದೊಂದು ಮಲ್ಪಿ ಸ್ಪೆಷಲ್ ಆಸ್ಪತ್ರೆಗಳನ್ನು ಸರ್ಕಾರ ಪ್ರಾರಂಭ ಮಾಡಬೇಕು ಅಂತ ಮನವಿ ಮಾಡಿದ್ರು.
Advertisement
Advertisement
ಇದೇ ವೇಳೆ ತಮ್ಮ ಜಿಲ್ಲೆಯ ಕೆಲ ಸಮಸ್ಯೆಗಳನ್ನ ಪರಿಹಾರ ಮಾಡುವಂತೆ ವಿನಯ್ ಗುರೂಜಿ ಅವರು ಸಿಎಂ ಯಡಿಯೂರಪ್ಪಗೆ ಮನವಿ ಮಾಡಿದರು. ಮಲೆನಾಡು ಸೇರಿದಂತೆ ಹಲವು ಕಡೆ ಅಂತರ್ಜಲದ ಮಟ್ಟ ಕುಸಿದಿದೆ. ನೀಲಗಿರಿ, ಅಕೇಶಿಯ ಪ್ಲಾಂಟೇಶ್ ನಿಂದ ಸಾಕಷ್ಟು ಸಮಸ್ಯೆ ಆಗಿದೆ. ಹೀಗಾಗಿ ಅಕೇಶಿಯಾ ಮತ್ತು ನೀಲಗಿರಿ ಮಗಳನ್ನ ತೆಗೆದು ಹಣ್ಣಿನ ಗಿಡಗಳನ್ನ ಬೆಳಿಸಿದ್ರೆ ಪ್ರಾಣಿ-ಪಕ್ಷಿಗಳಿಗೆ ಅನುಕೂಲ ಆಗುತ್ತೆ ಅಂತ ಮನವಿ ಮಾಡಿದರು. ಇದನ್ನೂ ಓದಿ: ಪ್ರಯಾಣಿಕರ ಪಾಸ್ ಅವಧಿ ವಿಸ್ತರಿಸಿದ ಬಿಎಂಟಿಸಿ
Advertisement
Advertisement
ಇದೇ ವೇಳೆ ಕೊಪ್ಪದಲ್ಲಿ ಇರೋ ಆಸ್ಪತ್ರೆಯನ್ನ ಮೇಲ್ದರ್ಜೆ ಏರಿಸಬೇಕು. ಕೊಪ್ಪದಿಂದ ಶಿವಮೊಗ್ಗ ಬರೋದಕ್ಕೆ ಒಂದೂವರೆ ಗಂಟೆಯಾಗುತ್ತೆ. ಇದ್ರಿಂದ ಸಾಕಷ್ಟು ಸಮಸ್ಯೆ ಆಗ್ತಿದೆ. ಹೀಗಾಗಿ ಅಲ್ಲಿನ ಆಸ್ಪತ್ರೆಯನ್ನ ಮೇಲ್ದರ್ಜೆಗೆ ಏರಿಸಬೇಕು ಅಂತ ಮನವಿ ಮಾಡಿಕೊಂಡರು. ಇದನ್ನೂ ಓದಿ: ಸೋಮವಾರದಿಂದ ಹೊಸ ರೂಲ್ಸ್, ಹೊಸ ಲೈಫ್ – ಅನ್‍ಲಾಕ್ 2.Oಗೆ ಬೆಂಗಳೂರಿಗರ ಸಿದ್ಧತೆ