ಬೆಂಗಳೂರು: ಮಾಹಾಮಾರಿ ಕೊರೊನಾ ವೈರಸ್ ಹೆಸರಲ್ಲಿ ಲೂಟಿ ಮಾಡುವುದು ಇನ್ನೂ ನಿಂತಿಲ್ಲ. ಸರ್ಕಾರದಿಂದ ಹಣ ಕಳುಹಿಸಿದರೂ ಖಾಸಗಿ ಆಸ್ಪತ್ರೆಗಳು ಇನ್ನೂ ಹಣ ವಸೂಲಿ ಮಾಡುವುದರಲ್ಲಿಯೇ ನಿರತವಾಗಿವೆ.
ಕೊರೊನಾ ಬಂದವರ ಚಿಕಿತ್ಸೆ ವೆಚ್ಚವನ್ನ ಸರ್ಕಾರವೇ ನೀಡುತ್ತಿದೆ. ಸರ್ಕಾರದಿಂದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ವ್ಯಕ್ತಿಗಳ ಬಿಲ್ ಅನ್ನ ಸರ್ಕಾರದ ವತಿಯಿಂದ ನೀಡಲಾಗುತ್ತೆ. ಖಾಸಗಿಯಾಗಿ ಚಿಕಿತ್ಸೆ ಪಡೆಯುವವರನ್ನ ಹೊರತು ಪಡಿಸಿ ಉಳಿದವರ ವೆಚ್ಚವನ್ನ ಸರ್ಕಾರವೇ ಭರಿಸುತ್ತದೆ. ಈಗ ಇದನ್ನೇ ಬಂಡವಾಳ ಮಾಡಿಕೊಂಡಿರೋ ಬೆಂಗಳೂರಿನ ಆಸ್ಪತ್ರೆಯೊಂದು ಎರಡೂ ಕಡೆಯಿಂದ ಹಣ ಮಾಡಲು ಮುಂದಾಗಿದೆ. ಈ ಮೂಲಕ ಅತ್ತ ಸರ್ಕಾರದಿಂದಲೂ ದುಡ್ಡು, ಇತ್ತ ರೋಗಿಯಿಂದಲೂ ಹಣ ವಸೂಲಿ ಮಾಡಿಕೊಳ್ಳುತ್ತಿದೆ.
Advertisement
Advertisement
ಕಳೆದ ತಿಂಗಳು ಆರ್ ಟಿ ಐ ಕಾರ್ಯಕರ್ತ ನರಸಿಂಹ ಮೂರ್ತಿ ಎಂಬವರು ಕೊರೊನಾ ಸೋಂಕು ತಗುಲಿದೆ. ಕೂಡಲೇ ನರಸಿಂಹ ಮೂರ್ತಿ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಬಿಬಿಎಂಪಿ ದಾಖಲು ಮಾಡಿದೆ. ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗುವ ಸಮಯದಲ್ಲಿ ಆಸ್ಪತ್ರೆಯವರು ನರಸಿಂಹ ಮೂರ್ತಿ ಅವರ ಸಂಬಂಧಿಕರಿಂದ 10,000 ಫೀಸ್ ಬಿಲ್ ಕಟ್ಟಿಸಿಕೊಂಡಿದ್ಸಾರೆ. 10 ಸಾವಿರ ಕಟ್ಟಿದ್ರೇನೇ ಡಿಸ್ಚಾರ್ಜ್ ಮಾಡೋದು ಎಂದು ಹೇಳಿ ಹಣ ಕಟ್ಟಿಸಿಕೊಂಡಿದ್ದಾರೆ. ಇಲ್ಲಿ ಸರ್ಕಾರವೇ ರೋಗಿಯ ಚಿಕಿತ್ಸಾ ವೆಚ್ಚವನ್ನ ನೀಡುತ್ತಿದ್ದೆ, ಅದರೂ ಆಸ್ಪತ್ರೆಯವರು ಹಣದಾಸೆಗೆ ಬಿದ್ದು ರೋಗಿಯ ಕಡೆಯಿಂದಲೂ ಹಣ ಪೀಕಿದ್ದಾರೆ.
Advertisement
Advertisement
ಈ ಸಂಬಂಧ ಸಾಮಾಜಿಕ ಹೋರಾಟಗಾರ ದೂರು ನೀಡಿದ್ದಾರೆ. ಬಿಬಿಎಂಪಿ ಆಯುಕ್ತರು, ಪೊಲೀಸ್ ಕಮಿಷನರ್, ರಾಜ್ಯ ಕಾರ್ಯದರ್ಶಿ, ಆರೋಗ್ಯ ಸಚಿವರು ಸೇರಿದಂತೆ ಪ್ರಧಾನಿ ಮೋದಿಗೆ ದೂರು ನೀಡಿದ್ದಾರೆ. ಸರ್ಕಾರ ಕೂಡಲೇ ಈ ರೀತಿ ಹಣ ಮಾಡುತ್ತಿರೋ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ನರಸಿಂಹಮೂರ್ತಿ ವಕೀಲರಾಗಿದ್ದು ನಿಯಮಗಳು ತಿಳಿದಿರೋದಕ್ಕೆ ದೂರು ನೀಡಿದ್ದಾರೆ. ಸಾಮಾನ್ಯ ಜನರಿಂದ ಹೀಗೆ ಎಷ್ಟೋ ದುಡ್ಡು ತಿನ್ನುತ್ತಿದ್ದಾರೆ ಅನ್ನೋ ಪ್ರಶ್ನೆ ಈಗ ಉದ್ಭವಿಸಿದೆ. ಸರ್ಕಾರದಿಂದಲೂ ಹಣ ರೋಗಿ ಕಡೆಯಿಂದಲೂ ಹಣ ಪಡೆಯೋ ಆಸ್ಪತ್ರೆಗಳ ಮೇಲೆ ಸರ್ಕಾರ ಹಾಗೂ ಬಿಬಿಎಂಪಿ ಕಠಿಣ ಕ್ರಮ ಕೈಗೊಳ್ಳುತ್ತಾ ಎಂಬುದನ್ನು ಕಾದುನೋಡಬೇಕಿದೆ.