ಬೆಂಗಳೂರು: ಕೊರೊನಾ ಹೆಮ್ಮಾರಿ ಜನರ ಬದುಕನ್ನ ಅಲ್ಲಾಡಿಸುತ್ತಿದೆ. ಕೊರೊನಾ ಕೇಕೆಗೆ ದಿನಸಿ ಸಾಮಾಗ್ರಿಗಳ ಬೆಲೆ ಗಗನಕ್ಕೇರಿ ಕೆಳಗಿಳಿಯುತ್ತಿದ್ರೂ ಇವರು ಮಾತ್ರ ಆ ಬೆಲೆಯನ್ನ ಕಡಿಮೆ ಮಾಡಿಲ್ಲ. ಕೆಲಸಯಿಲ್ಲ, ದುಡ್ಡಿಲ್ಲದ ಜನರನ್ನ ಈ ಬೆಲೆ ಏರಿಕೆ ಮತ್ತಷ್ಟು ಹಿಂಸಿಸುತ್ತಿರುವುದು ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ವೇಳೆ ಬೆಳಕಿಗೆ ಬಂದಿದೆ.
Advertisement
ಕೊರೋನಾ ಲಾಕ್ ಡೌನ್ ಶುರುವಾಗಿದ್ದೇ ತಡ ಜನರ ದಿನನಿತ್ಯದ ವಸ್ತುಗಳ ಬೆಲೆ ಗಗನಕ್ಕೇರಿತ್ತು. ಯಾಕಂದರೆ ಕಡೆಮೆ ದಾಸ್ತಾನು, ಸರಬರಾಜು ಆಗ್ತಿಲ್ಲ ಅಂತ ಎಪಿಎಂಸಿ ಹೇಳಿತ್ತು. ದಿನಸಿ ಅಂಗಡಿಯವರಂತೂ ನಾವು ಮಾರ್ಕೆಟಿಂದ ಹೆಚ್ಚಿನ ಬೆಲೆಗೆ ತರ್ತೀವಿ ಅಂತ ಮನಸ್ಸೋ ಇಚ್ಛೆ ರೇಟ್ ಜಾಸ್ತಿ ಮಾಡಿದರು.
Advertisement
Advertisement
ದಿನಸಿ ಅಂಗಡಿಗಳಲ್ಲಿ ಕೂಡ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ಮಾಡಿದೆ.
ದಿನಸಿ ಅಂಗಡಿ- 1
ಪ್ರತಿನಿಧಿ – ಬೇಳೆ ಇದ್ಯಾ..?
ಅಂಗಡಿ ಮಾಲೀಕ – ಯಾವ ಬೇಳೆ ಬೇಕು..?
ಪ್ರತಿನಿಧಿ – ತೊಗರಿ ಬೇಳೆ
ಮಾಲೀಕ – ಇದೆ ನೋಡಿ
ಪ್ರತಿನಿಧಿ -ಕಡಿಮೆ ಆಗಿದ್ಯಾ ಸರ್ ರೇಟ್.. ಜಾಸ್ತಿ ಆಗಿತ್ತಲ್ಲಾ ಕೊರೋನಾ ಶುರುವಾದಾಗ..?
ಪ್ರತಿನಿಧಿ – 98 ರೂಪಾಯಿ ಆಗಿದ್ಯಾ..?
ಪ್ರತಿನಿಧಿ – 75 ರೂಪಾಯಿ ಇತ್ತಲ್ಲಾ ಸರ್..?
Advertisement
ಮಾಲೀಕ – 126 ರೂಪಾಯಿ ಆಗಿತ್ತು, ಈಗ ಸ್ವಲ್ಪ ಕಡಿಮೆಯಾಗಿದೆ.
ಪ್ರತಿನಿಧಿ – ಕೊರೊನಾಗೆ ಮೊದಲು ಎಷ್ಟಿತ್ತು..?
ಅಂಗಡಿಯಾತ– ಅದೇನೋ ಗೊತ್ತಿಲ್ಲ..
ಪ್ರತಿನಿಧಿ – ಕೊರೊನಾ ಲಾಕ್ ಡೌನಿನಿಂದ ಸಪ್ಲೇ ಆಗಿಲ್ಲ ಅಂತ ಜಾಸ್ತಿ ಆಗಿತ್ತಲ್ಲ.
ಅಂಗಡಿಯಾತ – ಅಯ್ಯೋ ಮಿಲ್ ಓನರ್ ಏನೂ ತಿಂದಿಲ್ಲ. ಈ ಆರ್ ಎಂ ಸಿ ಯಾರ್ಡ್ ಅವ್ರೇ ತಿಂದಿರೋದು.
ದಿನಸಿ ಅಂಗಡಿ -2
ಪ್ರತಿನಿಧಿ– ಕಡಿಮೆನೇ ಆಗಿಲ್ವಾ?
ಅಂಗಡಿಯಾತ– ಇಲ್ಲ..
ಪ್ರತಿನಿಧಿ– ಯಾಕ್ ಸರ್ ಹಿಂಗೆ.. ಎಲ್ಲಾ ಐಟಂ ಹಿಂಗಾ..ನಮ್ಮ ಮನೆ ಹತ್ರ ಫಂಕ್ಚನ್ ಇತ್ತು..
ಪ್ರತಿನಿಧಿ– ಸಕ್ಕರೆ ಕಡಿಮೆಯಾಗಿದ್ಯಾ ಸರ್..?
ಅಂಗಡಿಯಾತ– 43 ಇತ್ತು, ಈಗ ಸ್ವಲ್ಪ ಕಡಿಯಾಗಿದೆ.
ಪ್ರತಿನಿಧಿ– ಸಪ್ಲೇ ಇಲ್ವಾ..?
ಅಂಗಡಿಯಾತ– ಸಪ್ಲೇ ಇದೆ, ಮಾರ್ಕೆಟ್ ಅವರು ಬಿಟ್ಟುಕೊಡಲ್ಲ
ಪ್ರತಿನಿಧಿ – ಓ ಆರ್ ಎಂಸಿಯಿಂದ ರೇಟ್ ಜಾಸ್ತಿಯಾಗಿರೋದಾ..?
ಅಂಗಡಿಯಾತ– ಹಾ ಹೌದು..
ಅಂಗಡಿಯವರು ಎಪಿಎಂಸಿ, ಆರ್‍ಎಂಸಿ ಯಾರ್ಡಿನಲ್ಲಿ ಬೆಲೆ ಕಡಿಮೆ ಮಾಡುತ್ತಿಲ್ಲ ಅಂದ್ರೇ ಎಪಿಎಂಸಿ ಮಾರುಕಟ್ಟೆಯ ವ್ಯಾಪಾರಿ ಬೇರೆಯೇ ಹೇಳುತ್ತಿದ್ದಾರೆ. ಇವರು ಅವರ ಮೇಲೆ ಅವರು ಇವರ ಮೇಲೆ ಆರೋಪ ಮಾಡ್ತಾರೆ. ಆದರೆ ಜನ ಮಾತ್ರ ಇದರಿಂದ ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಈ ಬಗ್ಗೆ ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸಬೇಕಿದೆ.