ಬೆಂಗಳೂರು: ಕೊರೊನಾ ಹಾಟ್‍ಸ್ಪಾಟ್ ಆಗಿರುವ ಬೆಂಗಳೂರಲ್ಲಿ ಈಗ ಆಕ್ಸಿಜನ್ ಪೊರೈಕೆಯ ಹೊಸ ಸಮಸ್ಯೆ ಎದುರಾಗಿದೆ.
ಉಸಿರಾಟ ತೊಂದರೆ ಇರುವ ರೋಗಿಗಳಿಗೆ ಆಕ್ಸಿಜನ್ ಕೊರತೆ ಹಿನ್ನೆಲೆಯಲ್ಲಿ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿದ್ದ ರೋಗಿಗಳನ್ನ ವಿಕ್ಟೋರಿಯಾ, ರಾಜೀವ್ ಗಾಂಧಿ ಮತ್ತು ಬೌರಿಂಗ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಈ ನಡುವೆ ಬೆಂಗಳೂರಲ್ಲಿ ಆಸ್ಪತ್ರೆಗಳಿಗೆ ಆಕ್ಸಿಜನ್ ಪೊರೈಕೆ ಕೊರತೆ ಕಾಡುವ ಆತಂಕ ಎದುರಾಗಿದೆ.
Advertisement
Advertisement
ಕೊರೊನಾ ಸೋಂಕಿತರ ಪ್ರಕರಣಗಳ ಹೆಚ್ಚಳ ಆಗುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಬೇಡಿಕೆಯೂ ಹೆಚ್ಚಾಗಿದೆ. 1 ಆಕ್ಸಿಜನ್ ಬೆಡ್‍ಗೆ ದಿನಕ್ಕೆ 24 ಲೀಟರ್‌ನಷ್ಟು ಆಮ್ಲಜನಕ ಬೇಕಾಗಿದೆ. ಉದಾಹರಣೆಗೆ ಕಿಮ್ಸ್‌ನಲ್ಲಿ ಕೊರೊನಾಕ್ಕೂ ಮೊದಲು ದಿನಕ್ಕೆ ಬಳಕೆ ಆಗುತ್ತಿದ್ದ ಆಕ್ಸಿಜನ್ ಪ್ರಮಾಣ 20 ಸಾವಿರ ಕ್ಯೂಬಿಕ್. ಆದರೆ ಈಗ ದಿನಕ್ಕೆ 50 ಸಾವಿರ ಕ್ಯೂಬಿಕ್ ಆಕ್ಸಿಜನ್ ಬೇಕಿದೆ.
Advertisement
ರಾಜ್ಯದಲ್ಲಿರುವ ಆಕ್ಸಿಜನ್ ಪೊರೈಕೆ ಮಾಡುವ ಸ್ಥಾವರಗಳು ತಮ್ಮ ಉತ್ಪಾದನೆಯ ಅತ್ಯಧಿಕ ಪ್ರಮಾಣವನ್ನು ತಲುಪಿವೆ. ಇತ್ತ ಆಂಧ್ರ ಪ್ರದೇಶ ಕೊರೊನಾ ಕಾರಣದಿಂದಾಗಿ ಹೊರರಾಜ್ಯಗಳಿಗೆ ಆಕ್ಸಿಜನ್ ಪೊರೈಕೆ ಮಾಡದಂತೆ ನಿರ್ಬಂಧ ಹೇರಿದೆ.
Advertisement
ಸೋಮವಾರ ರಾತ್ರಿ ಕೂಡ ಕೋವಿಡ್ ಆಸ್ಪತ್ರೆಯೂ ಆಗಿರುವ ಕಿಮ್ಸ್‌ನಲ್ಲಿ ಆಕ್ಸಿಜನ್ ಕೊರತೆಯಿಂದ ಉಂಟಾಗಿತ್ತು. ಕಳೆದ 2 ದಿನಗಳಿಂದ ಆಸ್ಪತ್ರೆಗೆ ಸೂಕ್ತ ಪ್ರಮಾಣದಲ್ಲಿ ಆಕ್ಸಿಜನ್ ಪೊರೈಕೆ ಆಗುತ್ತಿರಲಿಲ್ಲ. ಈ ಬಗ್ಗೆ ಆಡಳಿತ ಮಂಡಳಿ ತಿಳಿಸಿದ್ದರೂ ಸರ್ಕಾರ ಎಚ್ಚೆತ್ತುಕೊಂಡಿರಲಿಲ್ಲ. ಸೋಮವಾರ ಸಂಜೆ ಆಕ್ಸಿಜನ್ ಖಾಲಿ ಆಗುತ್ತಿದ್ದಂತೆ ಆಡಳಿತ ಮಂಡಳಿ ರೋಗಿಗಳನ್ನ ಮುನ್ನೆಚ್ಚರಿಕೆಯಿಂದ ಬೌರಿಂಗ್, ವಿಕ್ಟೋರಿಯಾ, ರಾಜೀವ್ ಗಾಂಧಿ ಆಸ್ಪತ್ರೆಗಳಿಗೆ ಅಂಬುಲೆನ್ಸ್‌ಗಳ ಮೂಲಕ ರವಾನೆ ಮಾಡಲಾಗಿತ್ತು. ಘಟನೆಯ ಬಳಿಕ ಪಬ್ಲಿಕ್ ಟಿವಿಯಲ್ಲಿ ವರದಿ ಪ್ರಸಾರ ಆಗುತ್ತಿದ್ದಂತೆ ಎರಡು ಟ್ಯಾಂಕರ್‌ಗಳ ಮೂಲಕ ಆಸ್ಪತ್ರೆಗೆ ಆಕ್ಸಿಜನ್ ಪೊರೈಕೆ ಮಾಡಲಾಗಿತ್ತು.