– 103 ಮಂದಿಗೆ ಕೊರೊನಾ
– ಬಿಳೇಕಳ್ಳಿ ಅಪಾರ್ಟ್‍ಮೆಂಟ್ ನಿವಾಸಿಗಳಿಗೆ ಮಾತ್ರ ನಿಯಮ
ಬೆಂಗಳೂರು: ಒಂದೇ ಅಪಾರ್ಟ್‍ಮೆಂಟ್‍ನಲ್ಲಿದ್ದ 103 ಮಂದಿಗೆ ಕೊರೊನಾ ಬಂದಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಈಗ ಹೊಸ ನಿಯಮ ಜಾರಿ ಮಾಡಿದೆ.
Advertisement
ಫೆ.6 ರಂದು 40 ಜನ ಬೊಮ್ಮನಹಳ್ಳಿ ಬಿಳೇಕಳ್ಳಿಯ ಖಾಸಗಿ ಅಪಾರ್ಟ್‍ಮೆಂಟ್‍ನಲ್ಲಿ ನಡೆದ ಪಾರ್ಟಿ ಮಾಡಿದ್ದರು. ಈ ಪಾರ್ಟಿಗೆ ಡೆಹ್ರಾಡೂನ್‍ನಿಂದ ಬಂದವರು ಭಾಗಿಯಾಗಿದ್ದರು.
Advertisement
Advertisement
ಅಪಾರ್ಟ್‍ಮೆಂಟ್‍ನಲ್ಲಿ 435 ಫ್ಲ್ಯಾಟ್‍ಗಳಿವೆ. 1052 ಮಂದಿ ಟೆಸ್ಟ್ ಕೊರೋನಾ ಪರೀಕ್ಷೆ ಮಾಡಲಾಗಿದೆ. ಈವರೆಗೂ 103 ಜನರಿಗೆ ಕೊರೋನಾ ಪಾಸಿಟಿವ್ ಬಂದಿದೆ. ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚಳ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಹೊಸ ರೂಲ್ಸ್ ಮಾಡಿದೆ.
Advertisement
ಅಪಾರ್ಟ್‍ಮೆಂಟ್‍ಗೆ ಹೊರಗಿನವರು ಪ್ರವೇಶ ಮಾಡುವಂತಿಲ್ಲ. ಹೋಂ ಕ್ವಾರಂಟೈನ್ ಅವಧಿ ಮುಗಿಸಿಯೇ ನಿವಾಸಿಗಳು ಹೊರಗೆ ಬರಬೇಕು. ಅಪಾರ್ಟ್‍ಮೆಂಟ್ ಒಳಗಡೆ ಯಾವುದೇ ಪಾರ್ಟಿಗಳು, ಸಭೆ ಮಾಡುವಂತಿಲ್ಲ. ತಂತ್ರಜ್ಞಾನ ಬಳಸಿ ಮೀಟಿಂಗ್ ಮಾಡಬೇಕೆಂದು ಸೂಚನೆ ನೀಡಲಾಗಿದೆ. ಸೊಂಕು ಹರಡಿದ ಅಪಾರ್ಟ್ ಮೆಂಟ್ ಕಾಮನ್ ಏರಿಯಾ ಬಳಕೆಗೂ ಹಲವು ನಿಬರ್ಂಧಗಳನ್ನು ಹೇರಲಾಗಿದೆ.
50 ವರ್ಷ ಮೇಲ್ಪಟ್ಟವರು 96 ಜನರಿಗೆ ಕೊರೋನಾ ಪಾಸಿಟಿವ್ ಹಾಗೂ ಡಯಾಬಿಟಿಕ್ ಇರುವ 43 ಮಂದಿಗೂ ಬಂದಿದೆ ಎಂದು ಎಂದು ಬಿಬಿಎಂಪಿ ಆರೋಗ್ಯಾಧಿಕಾರಿ ವಿಜಯೇಂದ್ರ ಹೇಳಿದ್ದಾರೆ.
ಜ್ವರ, ಕೆಮ್ಮು ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಪರೀಕ್ಷೆ ಮಾಡುವಂತೆ ಅಪಾರ್ಟ್‍ಮೆಂಟ್‍ನಿಂದ ಕರೆ ಬಂದಿತ್ತು. ಕರೆ ಬಂದ ಹಿನ್ನೆಲೆಯಲ್ಲಿ ಪರೀಕ್ಷೆ ಮಾಡಿದಾಗ ಸೋಂಕು ಬಂದಿರುವುದು ದೃಢಪಟ್ಟಿದೆ. ಒಟ್ಟು 2 ಸಾವಿರ ಮಂದಿ ಅಪಾರ್ಟ್‍ಮೆಂಟ್‍ನಲ್ಲಿಲ್ಲಿದ್ದಾರೆ.
ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕೊರೋನಾ ಪಾಸಿಟಿವ್ ಕಂಡು ಬಂದ ಹಿನ್ನೆಲೆಯಲ್ಲಿ ಅಪಾರ್ಟ್‍ಮೆಂಟ್‍ನ ನಿವಾಸಿಗಳಿಗೆ ಆರೋಗ್ಯ ಸಿಬ್ಬಂದಿ ಸೋಮವಾರದಿಂದ ಕೊರೊನಾ ಟೆಸ್ಟ್ ಮಾಡಲಾಗುತ್ತಿದೆ. ಈ ವೇಳೆ 103 ಮಂದಿಗೆ ಸೋಂಕು ಇರುವುದು ತಿಳಿದುಬಂದಿದೆ.