ಬೆಂಗಳೂರು: ರಾಜ್ಯದಲ್ಲಿ ಕೊರೊನಾ ದಿನೇ ದಿನೇ ಹೊಸ ದಾಖಲೆ ಬರೆಯುತ್ತಿದ್ದು, ಶನಿವಾರ ಒಂದೇ ದಿನ 8,818 ಹೊಸ ಪ್ರಕರಣಗಳು ಪತ್ತೆಯಾಗಿದ್ದವು. ಆದರೂ ಸಿಲಿಕಾನ್ ಸಿಟಿ ಜನರು ಎಂದಿನಿಂದ ಭರ್ಜರಿಯಾಗಿ ಓಡಾಟ ಮಾಡುತ್ತಿದ್ದಾರೆ.
ಕಳೆದ ದಿನ ಬೆಂಗಳೂರಿನಲ್ಲಿ 3,495 ಮಂದಿ ಕೊರೊನಾಗೆ ತುತ್ತಾಗಿದ್ದಾರೆ. ಅಲ್ಲದೇ ಮಹಾಮಾರಿ 35 ಜನರನ್ನು ಬಲಿ ಪಡೆದುಕೊಂಡಿದೆ. ಆದರೂ ಜನರು ಎಂದಿನಂತೆ ಲಾಲ್‍ಬಾಗ್‍ನಲ್ಲಿ ಬೆಳ್ಳಂಬೆಳ್ಳಗೆ ವಾಕಿಂಗ್ ಮಾಡುತ್ತಿದ್ದಾರೆ. ಈ ಹಿಂದೆ ಲಾಕ್‍ಡೌನ್ ಸಮಯದಲ್ಲಿ ಲಾಗ್‍ಬಾಗ್‍ಗೆ ಪ್ರವೇಶವನ್ನು ನಿಷೇಧಿಸಲಾಗಿತ್ತು. ಆದರೆ ಅನ್‍ಲಾಕ್ ಮಾಡಿದ ನಂತರ ಜನರು ಹೆಚ್ಚಾಗಿ ವಾಕಿಂಗ್ ಬರುತ್ತಿದ್ದಾರೆ.
ಅದರಲ್ಲೂ ವಯಸ್ಸಾದರೂ ವಾಕಿಂಗ್‍ಗೆ ಹೋಗಬಾರದು ಎಂದು ಬಿಬಿಎಂಪಿ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದರು. ಆದರೂ ಕೆಲ ಹಿರಿಯರು ಆರೋಗ್ಯ ದೃಷ್ಟಿಯಿಂದ ಬೆಳ್ಳಂಬೆಳಗ್ಗೆ ವಾಕಿಂಗ್ ಮಾಡುತ್ತಿದ್ದಾರೆ.
ಇನ್ನೂ ಆನಂದಪುರ ಮಾರ್ಕೆಟ್ ಮತ್ತು ಯಶವಂತಪುರ ಮಾರ್ಕೆಟ್‍ನಲ್ಲಿ ವ್ಯಾಪಾರ ಜೋರಾಗಿದೆ. ಇಂದು ಭಾನುವಾರ ಆಗಿರುವುದರಿಂದ ನಿಧಾನವಾಗಿ ವ್ಯಾಪಾರ-ವಹಿವಾಟನ್ನು ಶುರು ಮಾಡುತ್ತಿದ್ದಾರೆ. ವ್ಯಾಪಾರ ಮಾಡುವಾಗ ಕೆಲವರು ಮಾಸ್ಕ್ ಧರಿಸದೆ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ವಾಕಿಂಗ್ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ.