ಗದಗ: ಕೊರೊನಾ ಸೋಂಕಿತ ಗರ್ಭಿಣಿಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ ವೈದ್ಯಕೀಯ ಸಿಬ್ಬಂದಿಗಳ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿರುವ ಘಟನೆ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.
ಜಿಲ್ಲೆಯ ಗೋಜನೂರು ಗ್ರಾಮದ ಕೊರೊನಾ ಸೋಂಕಿತ ಗರ್ಭಿಣಿಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಲಾಗಿದೆ. ಸೋಂಕಿತರು ಅಂದರೆ ನಿಷ್ಠೂರವಾಗಿ ನೋಡುವುದರ ಜೊತೆಗೆ ಯಾರು ಹತ್ರಾನೂ ಸುಳಿಯಲ್ಲ. ಈ ಸಂದರ್ಭದಲ್ಲಿ ಗದಗ ಜಿಮ್ಸ್ ವೈದ್ಯರು ಸಿಸೇರಿನ್ ಮೂಲಕ ಎರಡು ಜೀವ ಉಳಿಸಿದ್ದಾರೆ. ವೈದ್ಯರಾದ ಡಾ.ಶಿವನಗೌಡ, ಡಾ.ಶೃತಿ ಹಾಗೂ ಡಾ ಅಜಯ್ ಮತ್ತು ಸಿಬ್ಬಂದಿಗಳು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದರಿಂದ ಸೋಂಕಿತೆಗೆ ಹೆಣ್ಣು ಮಗು ಜನನವಾಗಿದೆ.
Advertisement
Advertisement
ನವಜಾತ ಶಿಶು 2.7 ಕೆಜಿ ತೂಕ ಹೊಂದಿದೆ. ಶಿಶುವಿಗೆ ಸ್ವಲ್ಪ ಉಸಿರಾಟದ ತೊಂದರೆ ಇರೋದರಿಂದ ಕೋವಿಡ್-19 ವಾರ್ಡ್‍ನಲ್ಲಿ ವಿಶೇಷ ಆರೈಕೆ ಮಾಡಲಾಗುತ್ತಿದೆ. ಮಗು ಚೇತರಿಸಿಕೊಳ್ಳುವ ಲಕ್ಷಣಗಳು ಇದೆ ಎಂದು ವೈದ್ಯರು ಹೇಳಿದ್ದಾರೆ. ಸೋಂಕಿತ ಮಹಿಳೆಗೆ ಮೊದಲನೇಯ ಹೆರಿಗೆ ಕೂಡ ಶಸ್ತ್ರಚಿಕಿತ್ಸೆಯಿಂದ ಆಗಿತ್ತು. ಈಗ 2ನೇ ಹೆರಿಗೆಯನ್ನು ಕೂಡ ಶಸ್ತ್ರಚಿಕಿತ್ಸೆ ಮೂಲಕ ಮಾಡಲಾಗಿದೆ. ಗದಗ ವೈದ್ಯಕೀಯ ಸಿಬ್ಬಂದಿ ತಂಡದ ಉತ್ತಮ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೀಯ ವ್ಯಕ್ತವಾಗುತ್ತಿದೆ.