ಉಡುಪಿ: ಕೊರೊನಾ ಸೋಂಕಿತ ಗರ್ಭಿಣಿಗೆ ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಉಡುಪಿಯಲ್ಲಿ ಸಿಜೇರಿಯನ್ ಮಾಡಿ ಹೆರಿಗೆ ಮಾಡಿಸಲಾಯ್ತು. ತಾಯಿ-ಮಗು ಆರೊಗ್ಯವಾಗಿದ್ದಾರೆ.
ಮಹಾರಾಷ್ಟ್ರದಿಂದ ಬಂದವರ ಪ್ರಾಥಮಿಕ ಸಂಪರ್ಕ ಹೊಂದಿದ್ದ 22 ವರ್ಷದ ತುಂಬು ಗರ್ಭಿಣಿಗೆ ಉಡುಪಿ ಟಿಎಂ ಎ ಪೈ ಕೋವಿಡ್ 19 ಆಸ್ಪತ್ರೆಯ ತಜ್ಞ ವೈದ್ಯರು ಬುಧವಾರ ಹೆರಿಗೆ ಮಾಡಿಸಿದ್ದಾರೆ. ರಾಜ್ಯದ ಇತಿಹಾಸದಲ್ಲೇ ಕೋವಿಡ್ ರೋಗಿಗೆ ಇದು ಪ್ರಥಮ ಸಿಜೇರಿಯನ್ ಹೆರಿಗೆ ಎಂಬ ದಾಖಲೆಯಾಗಿದೆ.
Advertisement
Advertisement
ಉಡುಪಿಯ ಟಿಎಂಎ ಪೈ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿದ್ದೇವೆ. ಬಾಣಂತಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಬಾಣಂತಿ ಕೊರೋನಾದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಮಗುವಿನ ತಪಾಸಣೆ ಇನ್ನಷ್ಟೆ ಆಗಬೇಕಿದೆ.
Advertisement
ಸಾಮಾನ್ಯವಾಗಿ ಗರ್ಭದಲ್ಲಿದ್ದಾಗ ಮಗುವಿಗೆ ಸೋಂಕು ತಗಲುವುದಿಲ್ಲ. ಹೆರಿಗೆ ನಂತರವೂ ತಾಯಿ-ಮಗುವನ್ನು ದೂರ ಇಟ್ಟಿದ್ದೇವೆ. ಎನ್‍ಐಸಿಯುನಲ್ಲಿ ಇಟ್ಟು ಮಗುವನ್ನು ಪೋಷಣೆ ಮಾಡುತ್ತಿದ್ದೇವೆ. ಹಾಲುಣಿಸುವಾಗ ಬಹಳ ಮುಂಜಾಗ್ರತಾ ಕ್ರಮ ವಹಿಸುತ್ತಿರುವುದಾಗಿ ಉಡುಪಿ ಕೋವಿಡ್ 19 ಆಸ್ಪತ್ರೆ ವೈದ್ಯ ಡಾ. ಶಶಿಕಿರಣ್ ಉಮಾಕಾಂತ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದರು.
Advertisement