ಕೊರೊನಾ ಸೋಂಕಿತೆಗೆ ಆರೋಗ್ಯಯುತವಾಗಿ ಹೆರಿಗೆ ಮಾಡಿಸಿದ ವೈದ್ಯರು

Public TV
1 Min Read
healthy childbirth Haveri5

ಹಾವೇರಿ: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ಅಬ್ಬರ ದಿನದಿಂದ ದಿನಕ್ಕೆ ರಣಕೇಕೆ ಹಾಕುತ್ತಿದೆ. ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕಿನಲ್ಲಿ 26 ವರ್ಷದ ಗರ್ಭಿಣಿಗೆ ಸೋಂಕು ದೃಢಪಟ್ಟಿತ್ತು. ಈ ಕೊರೊನಾ ಸೋಂಕಿತೆಗೆ ವೈದ್ಯರು ಆರೋಗ್ಯಯುತವಾಗಿ ಹೆರಿಗೆ ಮಾಡಿಸಿದ್ದಾರೆ.

healthy childbirth Haveri3

ಗರ್ಭಿಣಿ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಹರಿಗೆ ನೋವು ಕಾಣಿಸಿಕೊಂಡಿತ್ತು. ಕೊವೀಡ್ ಕೇರ್ ಸೆಂಟರ್‍ನಲ್ಲಿ ಕೆಲಸ ಮಾಡುವ ಬ್ಯಾಡಗಿ ತಾಲ್ಲೂಕು ಸರ್ಕಾರಿ ಆಸ್ಪತ್ರೆಯ ಡಾಕ್ಟರ್ ನಾಗರಾಜ್ ನೇತೃತ್ವದಲ್ಲಿ ಮಾಲಾ, ವಾಣಿ, ಉಮಾ ಶುಶ್ರೂಷಕಿಯರ ಸಹಯೋಗದೊಂದಿಗೆ ನಾರ್ಮಲ್ ಡೆಲಿವರಿ ಮಾಡಿಸಿದ್ದು, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯದಿಂದ ಇದ್ದಾರೆ.

healthy childbirth Haveri9

ಸದ್ಯ ತಾಯಿ ಮತ್ತು ಮಗು ಆರೋಗ್ಯವಾಗಿದ್ದು ಕೊವೀಡ್ ಕೇರ್ ಸೆಂಟರ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾರ್ಮಲ್ ಡೆಲಿವರಿ ಮಾಡಿಸಿದ್ದ ಬ್ಯಾಡಗಿ ತಾಲ್ಲೂಕು ಆಸ್ಪತ್ರೆಯ ವೈದ್ಯರಿಗೆ ಜಿಲ್ಲೆಯ ಜನರು ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೆ ತಾಯಿ ಮತ್ತು ಮಗು ಕೊರೊನಾನಿಂದ ಗೆದ್ದು ಬೇಗ ಗುಣಮುಖರಾಗಲಿ ಎಂದು ಜನರು ಹಾರೈಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *