ಮುಂಬೈ: ಕೊರೊನಾ ವೈರಸ್ ಎರಡನೇ ಅಲೆಯಿಂದಾಗಿ ಭಾರತ ಹೆಣಗಾಡುತ್ತಿದೆ. ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಲು ಸೆಲೆಬ್ರಿಟಿಗಳು ಪ್ರಯತ್ನಿಸುತ್ತಿದ್ದಾರೆ. ಅಲ್ಲದೇ ಸೋಶಿಯಲ್ ಮೀಡಿಯಾದ ಮೂಲಕ ಸಂದೇಶಗಳನ್ನು ಸಾರುವುದರ ಜೊತೆಗೆ, ಕೋವಿಡ್-19ನಿಂದ ಬಳಲುತ್ತಿರುವ ಜನರಿಗೆ ಸಹಾಯ ಮಾಡಲು ಸೆಲೆಬ್ರೆಟಿಗಳು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಸದ್ಯ ಈ ಸಾಲಿಗೆ ರವೀನಾ ಟಂಡರ್ ಕೂಡ ಸೇರ್ಪಡೆಯಾಗಿದ್ದಾರೆ.
ಬಾಲಿವುಡ್ ನಟಿ ರವೀನಾ ಟಂಡನ್ ದೆಹಲಿಯ ಕೋವಿಡ್-19 ಸೋಂಕಿತರಿಗೆ ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಮಾಡಿದ್ದಾರೆ. ಈ ಕುರಿತಂತೆ ಕೆಲವೊಂದಷ್ಟು ಫೋಟೋಗಳನ್ನು ಸೋಶಿಯಲ್ ಮೀಡಿಯಾ ಹಂಚಿಕೊಂಡಿದ್ದಾರೆ.
Team enroute Delhi. A drop in the ocean , but hoping it’ll help those few at least . #rudrafoundation #ourfirstlot pic.twitter.com/SP10jsLivd
— Raveena Tandon (@TandonRaveena) May 7, 2021
ರವೀನಾ ಟಂಡನ್‍ರವರು ರುದ್ರ ಫೌಂಡೇಶನ್ ಎಂಬ ತಂಡವೊಂದನ್ನು ರಚಿಸಿ, ಆಕ್ಸಿಜನ್ ಸಿಲಿಂಡರ್‍ಗಳನ್ನು ದಾನ ಮಾಡಿದ್ದಾರೆ. ಮುಂಬೈನಿಂದ ಮೊದಲ ಬಾರಿಗೆ ಆಕ್ಸಿಜನ್ ಸಿಲಿಂಡರ್‍ಗಳನ್ನು ದೆಹಲಿಗೆ ಕಳುಹಿಸುತ್ತಿರುವ ಫೋಟೋಗಳನ್ನು ರವೀನಾ ಟಂಡನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ತಂಡವು ದೆಹಲಿ ಪೂರ್ತಿ ಸುತ್ತಾಡಿದೆ. ಸಾಗರದಲ್ಲಿನ ಒಂದು ಹನಿಗಾಗಿ, ಆದರೆ ಇದು ಕನಿಷ್ಠ ಸ್ವಲ್ಪ ಮಂದಿಗಾದರೂ ಸಹಾಯವಾಗುತ್ತದೆ ಎಂದು ಭಾವಿಸುತ್ತೇನೆ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ.
View this post on Instagram
ರವೀನಾ ಟಂಡನ್ ಕೆಜಿಎಫ್ 2 ಸಿನಿಮಾದಲ್ಲಿ ಅಭಿನಯಿಸಿದ್ದು, ಈ ಸಿನಿಮಾ ಜುಲೈ 16ರಂದು ಬಿಡುಗಡೆಯಾಗಲಿದೆ. ನಿರ್ದೇಶಕ ಪ್ರಶಾಂತ್ ನೀಲ್ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಯಶ್, ಸಂಜಯ್ ದತ್, ಶ್ರೀ ನಿಧಿ ಶೆಟ್ಟಿ, ಪ್ರಕಾಶ್ ರಾಜ್ ಮತ್ತು ಮಾಳವಿಕ ಅವಿನಾಶ್ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.
View this post on Instagram