-ಐಸೋಲೇಷನ್ ವಾರ್ಡಿಗೆ ನುಗ್ಗಿ ಕಳ್ಳತನ
ದಿಸ್ಪುರ್: ಆಸ್ಪತ್ರೆಯ ಐಸೋಲೇಷನ್‍ವಾರ್ಡ್‍ನಲ್ಲಿದ್ದ ಕೊರೊನಾ ಸೋಂಕಿತನ ಮೊಬೈಲ್ ಕದ್ದು ಕಳ್ಳನೋರ್ವ ಕ್ವಾರಂಟೈನ್ ಆಗಿರುವ ಘಟನೆ ಅಸ್ಸಾಂನ ಚಿರಾಂಗ್ ಜಿಲ್ಲೆಯ ಕಾಜಲ್‍ಗಾಂವ್‍ನ ಜೆಎಸ್‍ಎಸ್‍ಬಿ ಸಿವಿಲ್ ಆಸ್ಪತ್ರೆಯಲ್ಲಿ ನಡೆದಿದೆ.
ಸೋಂಕಿತನ ಮೊಬೈಲ್ ಕದ್ದ ಕಳ್ಳನನ್ನು ಪಪ್ಪು ಬರ್ಮನ್ (22) ಎಂದು ಗುರುತಿಸಲಾಗಿದೆ. ಈತ ಆಸ್ಪತ್ರೆಯಲ್ಲಿ ಸೋಂಕಿತ ಮಲಗಿದ ನಂತರ ಸುಮಾರು ರಾತ್ರಿ ಒಂದು ಗಂಟೆಗೆ ಐಸೋಲೇಷನ್ ವಾರ್ಡಿಗೆ ನುಗ್ಗಿ ಫೋನ್ ಕದ್ದು ಸಿಕ್ಕಿಬಿದ್ದಿದ್ದಾನೆ. ಈ ವೇಳೆ ಆತನನ್ನು ಅದೇ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.
Advertisement
Advertisement
ಪಪ್ಪು ಬರ್ಮನ್ ಫೋನ್ ಕದ್ದು ಆಸ್ಪತ್ರೆಯಿಂದ 15 ಕಿಮೀ ದೂರದಲ್ಲಿರುವ ತನ್ನ ಮನೆಯಲ್ಲಿ ಇದ್ದ. ಆಸ್ಪತ್ರೆಯಲ್ಲಿ ಸಿಕ್ಕ ಸಿಸಿಟಿವಿ ದೃಶ್ಯವನ್ನು ಆಧರಿಸಿ ಪೊಲೀಸರು ಆತನನ್ನು ಪತ್ತೆಹಚ್ಚಿದ್ದಾರೆ. ನಂತರ ವೈದ್ಯರ ಸಮೇತ ಆತನ ಮನೆಗೆ ಹೋಗಿ ಬಂಧಿಸಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಸದ್ಯ ಆತನ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದು, ವರದಿಗಾಗಿ ಕಾಯುತ್ತಿದ್ದಾರೆ.
Advertisement
Advertisement
ಐಸೋಲೇಷನ್ ವಾರ್ಡ್ ಒಳಗೆ ಹೋಗಲು ಈತ ಹೇಗೆ ಧೈರ್ಯ ಮಾಡಿದ ಎಂದು ನಮಗೆ ಈಗಲೂ ಗೊತ್ತಾಗುತ್ತಿಲ್ಲ. ಈತ ಮೊಬೈಲ್ ಕದ್ದ ವ್ಯಕ್ತಿ ಕೊರೊನಾ ಸೋಂಕಿತನಾಗಿದ್ದು, ಆತ ಇನ್ನೂ ಸಕ್ರಿಯ ಹಂತದಲ್ಲಿ ಇದ್ದಾನೆ. ಹೀಗಾಗಿ ಮೊಬೈಲ್‍ಗೆ ಕೂಡ ವೈರಸ್ ಅಂಟಿರಬಹುದು. ಹಾಗಾಗಿ ಪಪ್ಪು ಬರ್ಮನ್ ವರದಿ ಬರುವವರೆಗೂ ಆತನ ಮೇಲೆ ನಿಗಾವಹಿಸಿದ್ದೇವೆ ಎಂದು ವೈದ್ಯ ಮನೋಜ್ ದಾಸ್ ಹೇಳಿದ್ದಾರೆ.
ನಾವು ಆರೋಪಿಯನ್ನು ಹಿಡಿದು ಕ್ವಾರಂಟೈನ್‍ಗೆ ಒಪ್ಪಿಸಿದ್ದೇವೆ. ಈ ವಿಚಾರವನ್ನು ಜಿಲ್ಲಾ ಆರೋಗ್ಯ ಇಲಾಖೆಗೆ ನೀಡಿದ್ದೇವೆ. ಇನ್ನೂ ಮುಂದೆ ಅವರು ಆತನ ಪ್ರಾಥಮಿಕ ಮತ್ತು ದ್ವೀತಿಯ ಹಂತದ ಸಂಪರ್ಕಿತರನ್ನು ಗುರುತಿಸಬೇಕು ಎಂದು ಎಸ್‍ಪಿ ಸುಧಾಕರ್ ಸಿಂಗ್ ಅವರು ತಿಳಿಸಿದ್ದಾರೆ.