ಕೊರೊನಾ ಸಂಕಷ್ಟ- ಜನಸಾಮಾನ್ಯರ ಸಲಹೆ ಕೇಳಿದ ಪ್ರಧಾನಿ ಮೋದಿ

Public TV
1 Min Read
Modi lockdown

ನವದೆಹಲಿ: ದೇಶದಲ್ಲಿ ಸೋಂಕಿತರ ಸಂಖ್ಯೆ ಮೂರು ಲಕ್ಷ ದಾಟಿದ್ದು, ಈ ಹಿನ್ನೆಲೆ ಕೊರೊನಾ ನಿಯಂತ್ರಣ ಸಂಬಂಧ ಸಾರ್ವಜನಿಕರು ಸಲಹೆ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಟ್ವೀಟ್ ಮೂಲಕ ಮನವಿ ಮಾಡಿರುವ ಅವರು, ಜನರ ಉತ್ತಮ ಸಲಹೆಗಳನ್ನು ಜೂನ್ 28ರ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಹಂಚಿಕೊಳ್ಳುವುದಾಗಿ ಹೇಳಿದ್ದಾರೆ. ಕೊರೊನಾ ವೈರಸ್ ಗೆ ಸಂಬಂಧಿಸಿದಂತೆ ಚರ್ಚಿಸಲು ಸಾಕಷ್ಟು ವಿಚಾರಗಳು ನಿಮ್ಮ ಬಳಿ ಇದೆ. ನಿಮ್ಮ ವಿಚಾರಗಳನ್ನು ಹಂಚಿಕೊಳ್ಳಿ, 130 ಕೋಟಿ ಜನರ ಅಭಿಪ್ರಾಯ ನನಗೆ ಮತ್ತಷ್ಟು ಬಲ ತಂದು ಕೊಡಲಿದೆ ಹಾಗೂ ಹೆಚ್ಚು ಅಂಶಗಳನ್ನು ವಿಸ್ತಾರವಾಗಿ ಹಾಗೂ ವಿವಿಧ ವಿಚಾರಧಾರೆಗಳನ್ನು ಹೊಂದಲು ಸಹಕಾರಿಯಾಗಲಿದೆ ಎಂದು ಮೋದಿ ಹೇಳಿದ್ದಾರೆ.

ಇದಕ್ಕಾಗಿ ಎರಡು ವಾರಗಳ ಕಾಲಾವಕಾಶವಿದ್ದು, ಟಾಲ್ ಫ್ರೀ ಸಂಖ್ಯೆ 1800-11-7800 ಗೆ ಕರೆಮಾಡಿ ಅಥಾವ NAMO ಮತ್ತು Mygov ಆ್ಯಪ್ ನಲ್ಲಿ ತಮ್ಮ ವಿಚಾರ, ಅಭಿಪ್ರಾಯ ಮತ್ತು ಸಲಹೆಗಳನ್ನು ಹಂಚಿಕೊಳ್ಳಲು ಕೋರಿದ್ದಾರೆ.

corona 6

ಕಳೆದ ತಿಂಗಳ ಮನ್ ಕೀ ಬಾತ್ ನಲ್ಲಿ ಕೊರೊನಾ ಸಂಕಷ್ಟ ಕಾಲದಲ್ಲಿ ತಮ್ಮ ತೊಂದರೆಗಳ ನಡುವೆ ಜನರಿಗೆ ಸಹಾಯ ಮಾಡಿದ್ದ ಹಲವರ ಬಗ್ಗೆ ಮೋದಿ ಮಾತನಾಡಿದ್ದರು. ಅಲ್ಲದೆ ಕೊರೊನಾ ವಿರುದ್ಧ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಲು ಮನವಿ ಮಾಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *