ಕೊರೊನಾ ಯಾವಾಗ ನಿಯಂತ್ರಣಕ್ಕೆ ಬರುತ್ತೆಂದು ಅಂದಾಜಿಸಲು ಸಾಧ್ಯವಿಲ್ಲ- WHO

Public TV
1 Min Read
WHO

ಜಿನೀವಾ: ಇಡೀ ಜಾಗತಿಕ ವಲಯವನ್ನು ಸಂಕಷ್ಟಕ್ಕೀಡು ಮಾಡಿರುವ ಕೊರೊನಾ ವೈರಸ್ ಯಾವಾಗ ನಿಯಂತ್ರಣಕ್ಕೆ ಬರಲಿದೆ ಎಂದು ಅಂದಾಜಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಕೊರೊನಾ ಅಂತ್ಯವಾಗುವ ಬಗ್ಗೆ ಹೇಳಿಕೆ ನೀಡಿರುವ WHO ಆರೋಗ್ಯ ತುರ್ತು ಕಾರ್ಯಕ್ರಮದ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಮೈಕಲ್ ರಯಾನ್, ಕೊರೊನಾ ಸೋಂಕು ಇತರೆ ಸಾಂಕ್ರಾಮಿಕ ರೋಗಗಳಂತೆ ಮತ್ತೊಂದು ಸ್ಥಳೀಯ ವೈರಸ್ ಆಗಿ ಇಲ್ಲಿಯೇ ಉಳಿದುಕೊಳ್ಳಬಹುದು. ಇದು ಯಾವಾಗ ಅಂತ್ಯವಾಗುತ್ತೆ ಎಂದು ಊಹಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

CORONA 1 2

ಕೊರೊನಾ ವೈರಸ್ ಗೆ ಔಷಧಿಯೊಂದೇ ಮುಕ್ತಿ. ಸದ್ಯ ಔಷಧಿ ಇಲ್ಲದಿದ್ದರೂ ಸೋಂಕು ಹರಡಿರುವ ಪ್ರಮಾಣ ಕಡಿಮೆ ಇದೆ. ವಾಸ್ತವದಲ್ಲಿ ಈ ವೈರಸ್ ವಿರುದ್ಧ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಂಡು ಸಶಕ್ತ ಜೀವನ ಪುನಾರಂಭಿಸಲು ಕೆಲವು ವರ್ಷಗಳೇ ಬೇಕಾಗಬಹುದು ಎಂದು ಡಾ. ಮೈಕಲ್ ಹೇಳಿದ್ದಾರೆ.

ಈ ಹಿಂದೆ ಮಾತನಾಡಿದ್ದ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಗೆಬ್ರೆಯೆಸಸ್, ಹಲವು ದೇಶಗಳು ಈ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವಲ್ಲಿ ಆರಂಭಿಕ ಹಂತದಲ್ಲಿರುವುದಾಗಿ ಹೇಳಿವೆ. ಆದರೆ ಈ ಮಹಾಮಾರಿ ಜಗತ್ತಿನಲ್ಲಿ ಇನ್ನೂ ದೀರ್ಘಕಾಲ ಇರುತ್ತದೆ ಎಂದು ತಿಳಿಸಿದ್ದರು.

WHO 1

ಕೆಲವೊಂದು ದೇಶಗಳು ನಮ್ಮಲ್ಲಿ ಕೋವಿಡ್ 19 ನಿಯಂತ್ರಣದಲ್ಲಿದೆ ಎಂದು ಭಾವಿಸಿದ್ದಾರೆ. ಆದರೆ ಅಲ್ಲಿ ಕೂಡ ಸೋಂಕುಗಳು ಕಂಡುಬರುತ್ತಲೇ ಇವೆ. ಇತ್ತ ಆಫ್ರಿಕಾ ಮತ್ತು ಅಮೆರಿಕದಲ್ಲಿಯೂ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಜಗತ್ತಿನ ಎಲ್ಲಾ ದೇಶಗಳು ಎಚ್ಚರದಿಂದಿದ್ದು, ಜಾಗ್ರತೆ ವಹಿಸಬೇಕು ಎಂದಿದ್ದರು.

Share This Article
Leave a Comment

Leave a Reply

Your email address will not be published. Required fields are marked *