– ಸುರಕ್ಷತೆಗೆ ಆದ್ಯತೆ, ಸಂಸತ್ತಿನಲ್ಲಿ ಹಲವು ಹೊಸತನಕ್ಕೆ ಮುನ್ನುಡಿ
– ಐವರು ಸಂಸದರಿಗೆ ಕೊರೊನಾ
ನವದೆಹಲಿ: ಕೊರೊನಾ ಭಾರತವನ್ನು ಬಿಟ್ಟು ಬಿಡದೆ ಕಾಡುತ್ತಿದೆ. ಈ ಸಂಕಷ್ಟದ ನಡುವೆ ಇಂದಿನಿಂದ ಸಂಸತ್ ಅಧಿವೇಶನಗಳು ಆರಂಭವಾಗಲಿದೆ. ಕೊರೊನಾ ಭೀತಿ ಎದುರಾದ ಬಳಿಕ ಇದೇ ಮೊದಲ ಬಾರಿಗೆ ಸಂಸತ್ ಕಲಾಪಗಳನ್ನು ನಡೆಯುತ್ತಿದ್ದು, ಸುರಕ್ಷತೆ ದೃಷ್ಟಿಯಿಂದ ಹಲವು ಹೊಸತನಕ್ಕೆ ಆದ್ಯತೆ ನೀಡಲಾಗುತ್ತಿದೆ.
Advertisement
ಕೊರೊನಾ, ಆರ್ಥಿಕತೆ ಕುಸಿತ ಸೇರಿದಂತೆ ದೇಶದ ಹಲವು ಗಂಭೀರ ವಿಚಾರಗಳ ಬಗ್ಗೆ ಚರ್ಚಿಸಲು ಮುಂಗಾರು ಸಂಸತ್ ಅಧಿವೇಶನ ಆರಂಭಿಸುವಂತೆ ವಿಪಕ್ಷಗಳು ಸರ್ಕಾರವನ್ನು ಒತ್ತಾಯಿಸಿದ್ದವು. ಒತ್ತಾಯ ಮೇರೆಗೆ ಕೊರೊನಾ ಸಂಕಷ್ಟದ ನಡುವೆ ಅಧಿವೇಶನ ನಡೆಸಲು ಕೇಂದ್ರ ಸರ್ಕಾರ ತೀರ್ಮಾನ ಮಾಡಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಎಚ್ಚರಿಕೆಯ ನಡುವೆ ಇಂದಿನಿಂದ ಸಂಸತ್ ಕಲಾಪ ಆರಂಭವಾಗಲಿದೆ.
Advertisement
Advertisement
ಕೊರೊನಾ ಬಳಿಕ ನಡೆಯುತ್ತಿರುವ ಮೊದಲ ಅಧಿವೇಶನ ಹಿನ್ನೆಲೆ ಸಾಕಷ್ಟು ವಿಶೇಷ ತಯಾರಿಗಳನ್ನು ಈ ಬಾರಿ ಸಂಸತ್ ಭವನದಲ್ಲಿ ಮಾಡಿಕೊಳ್ಳಲಾಗಿದೆ. ಸೋಂಕು ಹರಡದಂತೆ ಎಚ್ಚರಿಕೆ ವಹಿಸಲಾಗಿದೆ.
Advertisement
ಈ ಬಾರಿ ಸಂಸತ್ ಅಧಿವೇಶನದ ವಿಶೇಷತೆಗಳು:
* ಲೋಕಸಭೆ ಹಾಗೂ ರಾಜ್ಯಸಭೆ ಕಲಾಪಕ್ಕಾಗಿ ಸದನದ ಗ್ಯಾಲರಿ ಹಾಗೂ ಚೇಂಬರ್‌ಗಳನ್ನು ಕೂಡ ಬಳಸಲಾಗುತ್ತಿದೆ.
* ಸದಸ್ಯರಿಗಾಗಿ ಎರಡೂ ಕಡೆಗಳಲ್ಲಿ 85 ಅಂಗುಲದ ದೊಡ್ಡ ಪರದೆಗಳನ್ನು ಅಳವಡಿಸಲಾಗುತ್ತಿದೆ.
* ವೈರಸ್ ಹಾಗೂ ಇತರ ಸೋಂಕು ನಿವಾರಣೆಗಾಗಿ ಏರ್ ಕಂಡೀಷನರ್‌ಗಳಲ್ಲಿ ನೇರಳಾತೀತ ವಿಕಿರಣಗಳನ್ನು ಬಳಸಲಾಗುತ್ತಿದೆ.
* ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ ಮಾಡಲಾಗುತ್ತಿದೆ.
* ಪಕ್ಷಗಳ ಸಂಖ್ಯಾಬಲ ಆಧರಿಸಿ ಗ್ಯಾಲರಿ ಅಥವಾ ಚೇಂಬರ್‌ಗಳಲ್ಲಿ ಆಸನ ವ್ಯವಸ್ಥೆಯಾಗಿದೆ.
* ಪ್ರಧಾನಮಂತ್ರಿ, ಕೇಂದ್ರ ಸಚಿವರು, ಸಭಾ ನಾಯಕರು, ವಿಪಕ್ಷಗಳ ನಾಯಕರಿಗೆ ರಾಜ್ಯಸಭೆಯ ಚೇಂಬರ್‌ನಲ್ಲಿ ಅವಕಾಶ
* ಮಾಜಿ ಪ್ರಧಾನಿಗಳಾದ ಮನಮೋಹನ್‌ಸಿಂಗ್ ಹಾಗೂ ಎಚ್.ಡಿ. ದೇವೇಗೌಡ ಅವರಿಗೂ ಚೇಂಬರ್‍ನಲ್ಲಿಯೇ ಆಸನ ವ್ಯವಸ್ಥೆ ಮಾಡಿದೆ.
ಈ ಬಾರಿ ಕಲಾಪಗಳು ಕೇವಲ ನಾಲ್ಕು ಗಂಟೆಗಷ್ಟೇ ಸೀಮಿತವಾಗಲಿದೆ. ಇಂದು ಮೊದಲು ಲೋಕಸಭೆ ಬಳಿಕ ರಾಜ್ಯಸಭೆ ಕಲಾಪ ನಡೆಯಲಿದೆ. ನಾಳೆಯಿಂದ ಬೆಳಗ್ಗೆ ರಾಜ್ಯಸಭೆ ಮತ್ತು ಮಧ್ಯಾಹ್ನ ಲೋಕಸಭೆ ಕಲಾಪ ನಡೆಯಲಿವೆ. ಸಮಯ ಅಭಾವದ ಹಿನ್ನೆಲೆಯಲ್ಲಿ ಪ್ರಶ್ನಾವಳಿ ಸಮಯ ರದ್ದು ಮಾಡಿದ್ದು, ಶೂನ್ಯ ಅವಧಿಯನ್ನು ಅರ್ಧಕ್ಕೆ ಇಳಿಸಲಾಗಿದೆ.
ಕಲಾಪಗಳಲ್ಲಿ ಭಾಗಿಯಾಗುವ ಸಂಸದರಿಗೆ 72 ಗಂಟೆ ಮುಂಚೆ ಕೊರೊನಾ ಟೆಸ್ಟ್ ಮಾಡಿಸಲು ಸೂಚಿಸಲಾಗಿತ್ತು. ಅದರಂತೆ ಕೊರೊನಾ ಟೆಸ್ಟ್ ಮಾಡಿಸಿರುವ ಸಂಸದರ ಪೈಕಿ ಐದು ಮಂದಿ ಲೋಕಸಭೆ ಸದಸ್ಯರಿಗೆ ಪಾಸಿಟಿವ್ ಇರುವುದು ದೃಢವಾಗಿದೆ.
ಕೇಂದ್ರವನ್ನು ತರಾಟೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ಸೇರಿ ಎಲ್ಲಾ ವಿಪಕ್ಷಗಳು ಸಿದ್ಧವಾಗಿದೆ. ದೇಶದಲ್ಲಿನ ಆರ್ಥಿಕ ಕುಸಿತ, ಜಿಡಿಪಿ ಕುಸಿತ, ಉದ್ಯೋಗ ನಷ್ಟ, ಭಾರತ ಮತ್ತು ಚೀನಾ ಗಡಿ ವಿಚಾರ ಸೇರಿದಂತೆ ಹಲವು ಗಂಭೀರ ವಿಚಾರಗಳ ಬಗ್ಗೆ ಚರ್ಚೆ ನಡೆಸಲು ಮತ್ತು ಈ ಸಂಬಂಧ ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಳ್ಳಲು ಸಿದ್ಧವಾಗಿದೆ. ವಿಪಕ್ಷಗಳ ಟೀಕೆಗೆ ಉತ್ತರ ನೀಡಲು ಮೋದಿ ಮತ್ತು ತಂಡ ಕೂಡ ಸಿದ್ಧವಾಗಿದೆ.
Delhi: Monsoon session of Parliament to begin today. pic.twitter.com/w9imOwWaCO
— ANI (@ANI) September 14, 2020