ಬೆಂಗಳೂರು: ಕೊರೊನಾ ಸಂಕಷ್ಟದ ನಡುವೆಯೂ ಕೂಡ ತರಕಾರಿ ಬೆಲೆ ಏರಿಕೆಯಾಗಿದ್ದು, ಗ್ರಾಹಕರಿಗೆ ಶಾಕ್ ಆಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ತರಕಾರಿ ಬೆಲೆ ಗಗನಕ್ಕೇರಿದೆ. ದಿನೇ ದಿನೇ ರಾಕೆಟ್ ವೇಗದಲ್ಲಿ ಹೆಚ್ಚಾಗುತ್ತಿದೆ ತರಕಾರಿ ಬೆಲೆ ಕಂಡು ಗ್ರಾಹಕರು ಸುಸ್ತಾಗಿದ್ದಾರೆ. ಕಳೆದ ಮೂರು ದಿನಗಳಿಂದ ತರಕಾರಿ ಬೆಲೆ ಏರಿಕೆಯಾಗುತ್ತಿದ್ದು, ಹೋಟೆಲ್ ಉದ್ಯಮ, ವ್ಯಾಪಾರಿಗಳಿಗೆ ಮತ್ತು ಗ್ರಾಕರಿಗೆ ತಲೆನೋವಾಗಿದೆ. ಇದನ್ನು ಓದಿ: ಕೋಲಾರ ಟೊಮೆಟೊಗೆ ಅಂತರ್ ರಾಜ್ಯ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ
Advertisement
ರಾಜ್ಯದ ಹಲವಾರು ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಇದೇ ಕಾರಣಕ್ಕೆ ತರಕಾರಿ ಬೆಲೆ ಜಾಸ್ತಿಯಾಗುತ್ತಿದೆ ಎನ್ನಲಾಗಿದೆ. ಏಕೆಂದರೆ ರೈತರು ಬೆಳೆದಿದ್ದ ಬೆಳೆಯೆಲ್ಲ ವರುಣ ದೇವನ ಅಟ್ಟಹಾಸಕ್ಕೆ ಕೊಚ್ಚಿಹೋಗಿವೆ. ರಾಯಚೂರು, ಬೀದರ್, ಬಳ್ಳಾರಿ ಮತ್ತು ಕಲಬುರಗಿಯಲ್ಲಿ ಹೆಚ್ಚು ಮಳೆಯಾಗುತ್ತಿದೆ. ಬೆಳೆ ಎಲ್ಲ ತೋಟದಲ್ಲೇ ನಾಶವಾಗುತ್ತಿರೋ ಹಿನ್ನೆಲೆ ರೈತರು ಕಂಗಾಲಾಗಿದ್ದಾರೆ. ಮುಂದಿನ ತಿಂಗಳವರೆಗೂ ಬೆಲೆ ಕಡಿಮೆಯಾಗೋದು ಡೌಟ್ ಎಂದು ಅಂದಾಜಿಸಲಾಗಿದೆ.
Advertisement
Advertisement
ಯಾವುದಕ್ಕೆ ಏಷ್ಟು ಬೆಲೆ? – ಸದ್ಯ ಬೆಂಗಳೂರಿನಲ್ಲಿ ತರಕಾರಿ ಬೆಲೆಯನ್ನು ನೋಡುವುದಾದರೆ, ಬಟಾಣಿ ಕೆಜಿಗೆ 227 ರೂ., ಬೀನ್ಸ್-100 ರೂ., ಮೆಣಸಿನಕಾಯಿ-69 ರೂ., ಬೆಂಡೆಕಾಯಿ-50 ರೂ., ಊಟಿ ಕ್ಯಾರಟ್- 94 ರೂ., ಹೀರೇಕಾಯಿ-60 ರೂ., ಮೂಲಂಗಿ-40 ರೂ., ಟೊಮ್ಯಾಟೊ-60 ರೂ., ಬೀಟ್‍ರೂಟ್-40 ರೂ., ಸೌತೆಕಾಯಿ-40 ರೂ., ನುಗ್ಗೆಕಾಯಿ-120 ರೂ., ದಪ್ಪ ಮೆಣಸಿನಕಾಯಿ-60 ರೂ., ಎಲೆಕೋಸು-40 ರೂ., ಆಲೂಗಡ್ಡೆ-40 ರೂ. ಗೆಣಸು-60 ರೂ., ಬದನೆಕಾಯಿ-40 ರೂ. ಮತ್ತು ಈರುಳ್ಳಿ ಕೆಜಿಗೆ 40ರೂ. ಆಗಿದೆ.
Advertisement