– ಸಾರ್ವಜನಿಕವಾಗಿ ಕ್ಲಬ್ ಡ್ಯಾನ್ಸರ್‌ಗಳ ಜೊತೆ ಸ್ಟೆಪ್
ಯಾದಗಿರಿ: ಕೊರೊನಾ ಸಂಕಷ್ಟದಲ್ಲಿ ಯಾದಗಿರಿ ಬಿಜೆಪಿಗರು ಫುಲ್ ಮೋಜು ಮಸ್ತಿ ಮಾಡುತ್ತಿದ್ದಾರೆ. ಈ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಬರ್ತ್ ಡೇ ಪಾರ್ಟಿ ಹೆಸರಲ್ಲಿ ಬಿಜೆಪಿ ಕಾರ್ಯಕರ್ತರ ಮತ್ತು ಜಿಲ್ಲಾ ಮುಖಂಡರ ಯುವತಿರೊಂದಿಗೆ ಅಸಭ್ಯ ಡ್ಯಾನ್ಸ್ ಮಾಡಿ ಸುದ್ದಿಯಲ್ಲಿದ್ದಾರೆ. ಸುರಪುರ ತಾಲೂಕಿನ ಬೈರಮಡ್ಡಿ ಗ್ರಾಮದಲ್ಲಿ ನಿನ್ನೆ ರಾತ್ರಿ ಪೂರ್ತಿ ಸುರಪುರ ಬಿಜೆಪಿ ಮುಖಂಡ ಮಂಜುನಾಯಕ ಎಂಬವರ ಜನ್ಮದಿನ ಆಚರಣೆ ನಡೆದಿದೆ. ಈ ಪಾರ್ಟಿಗೆ ಬೇರೆ ಕಡೆಯಿಂದ ಕ್ಲಬ್ ಡ್ಯಾನ್ಸರ್‌ಗಳನ್ನು ಕರೆತರಲಾಗಿತ್ತು.
ಕ್ಲಬ್ ಡ್ಯಾನ್ಸರ್‌ಗಳ ಜೊತೆ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ರಮೇಶ್ ಗೌಡ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಇನ್ನೂ ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯರು ಸಹ ಭಾಗಿಯಾಗಿದ್ದರು ಎನ್ನಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಕಾರ್ಯಕರ್ತರ ವಿಡಿಯೋ ವೈರಲ್ ಆಗಿವೆ.