ಕೊರೊನಾ ಸಂಕಷ್ಟದಲ್ಲಿ ಕಂಗಾಲಾಗಿದ್ದ ಗುಲಾಬಿ ಬೆಳೆಗಾರರಿಗೆ ಪ್ರೇಮ ದಿನದ ಬಂಪರ್- ಕೈ ಹಿಡಿದ ಗುಲಾಬಿ ಬೆಲೆ

Public TV
1 Min Read
klr rose

ಕೋಲಾರ: ಕೊರೊನಾ ಸಂಕಷ್ಟದಲ್ಲಿ ನೆಲಕಚ್ಚಿದ್ದ ಗುಲಾಬಿ ಬೆಳೆಗಾರರಿಗೆ ಪ್ರೇಮ ದಿನದ ಬಂಪರ್ ಸಿಕ್ಕಿದ್ದು, ಗುಲಾಬಿ ಬೆಲೆಯಲ್ಲಿ ಏರಿಕೆಯಾಗಿದ್ದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

klr rose 15 e1613225237375

ಕೊರೊನಾ ಸಂಕಷ್ಟದಿಂದ ಹೂವು ಬೆಳೆಗಾರರಿಗೆ ಮುಳ್ಳಿನ ಹಾಸಿಗೆಯ ಮೇಲೆ ಮಲಗಿದಂತಾಗಿತ್ತು, ಕಳೆದ ಹತ್ತು ತಿಂಗಳಿಂದ ಯಾವುದೇ ಸಭೆ ಸಮಾರಂಭಗಳಿಲ್ಲದೆ, ಜಾತ್ರೆ ಪೂಜೆಗಳಿಲ್ಲದೆ ಹೂವಿಗೆ ಬೇಡಿಕೆ ಇರಲಿಲ್ಲ. ಅಲ್ಲದೆ ವಿದೇಶಗಳಿಗೆ ರಫ್ತು ಮಾಡಲೂ ಸಾಧ್ಯವಾಗಿರಲಿಲ್ಲ. ಹೀಗಾಗಿ ಸಂಕಷ್ಟಕ್ಕೆ ಸಿಲುಕಿದ್ದರು. ಅದರಲ್ಲೂ ಕೋಲಾರ ಜಿಲ್ಲೆಯ ರೈತರು ಭಾರೀ ಸಂಕಷ್ಟಕ್ಕೊಳಗಾಗಿದ್ದರು.

klr rose 6 e1613225212814

ಫೆಬ್ರವರಿ ತಿಂಗಳಲ್ಲಿ ಪ್ರೇಮಿಗಳ ದಿನದ ವಿಶೇಷವಾಗಿ ಗುಲಾಬಿ ಹೂವು ಬೆಳೆದ ರೈತರಿಗೆ ಸುಗ್ಗಿ ಹಬ್ಬ ಎನ್ನುವಂತಾಗಿದೆ. ಹತ್ತು ತಿಂಗಳಿಂದ ಮಕಾಡೆ ಮಲಗ್ಗಿದ್ದ ಗುಲಾಬಿ ಹೂವಿಗೆ ಈಗ ಒಳ್ಳೆಯ ಬೆಲೆ ಬಂದಿದೆ ಅನ್ನೋದು ಹೂವು ಬೆಳೆಗಾರರ ಮಾತು. ಅದಕ್ಕಾಗಿಯೇ ಫ್ರೆಬ್ರವರಿ ತಿಂಗಳು ಬಂತೆಂದ್ರೆ ಗುಲಾಬಿ ಹೂವಿಗೆ ಎಲ್ಲಿಲ್ಲದ ಬೇಡಿಕೆ. ನಮ್ಮ ದೇಶಕ್ಕಿಂತ ವಿದೇಶಗಳಲ್ಲಿ ಡಿಮ್ಯಾಂಡ್ ಜಾಸ್ತಿ ಇರುತ್ತದೆ. ಅದಕ್ಕಾಗಿ ಈಗ ಗುಲಾಬಿ ಹೂವಿಗೆ ಒಳ್ಳೆಯ ಬೇಡಿಕೆ ಬಂದಿದೆ. ಒಂದು ಹೂವಿನ ಬೆಲೆ 8 ರಿಂದ 10 ರೂಪಾಯಿ ವರಗೆ ಮಾರಾಟವಾಗುತ್ತಿದೆ.

klr rose 3 e1613225189398

ಕೋಲಾರ ಜಿಲ್ಲೆಯಲ್ಲಿ ಒಟ್ಟು 540 ಹೆಕ್ಟೇರ್ ಪ್ರದೇಶದಲ್ಲಿ ಗುಲಾಬಿ ಹೂವು ಬೆಳೆದರೆ, ಸುಮಾರು 50 ಹೆಕ್ಟೇರ್ ಪ್ರದೇಶದಲ್ಲಿ ಗುಲಾಬಿ ಹೂವನ್ನು ರೈತರು ಪಾಲಿ ಹೌಸ್‍ನಲ್ಲಿ ಬೆಳೆಯುತ್ತಾರೆ.

klr rose 8

ಅದರಲ್ಲೂ ದೇಶ ಹಾಗೂ ವಿದೇಶಗಳಲ್ಲೂ ಬಹು ಬೇಡಿಕೆ ಇರುವ ತಾಜ್‍ಮಹಲ್, ಗೋಸ್ಟ್ರೈಕ್, ಅವಲಂಚ್ ವೈಟ್, ಎಲ್ಲೋ, ಸೇರಿದಂತೆ ಹಲವು ಬಗೆಯ ಗುಲಾಬಿ ಹೂ ಗಳನ್ನು ಆಸ್ಟ್ರೇಲಿಯಾ, ಜಪಾನ್, ಸಿಂಗಪೂರ್, ಮಲೇಶಿಯಾ ಗಳಿಗೆ ರಫ್ತು ಮಾಡುತ್ತಾರೆ. ಆದರೆ ಈ ವರ್ಷ ಕೊರೊನಾ ಹಿನ್ನೆಲೆ ಹೂವಿಗೆ ಬೇಡಿಕೆ ಇಲ್ಲದೆ ಎಷ್ಟೋ ಜನರು ಹೂವಿನ ತೋಟವನ್ನೇ ನಾಶ ಮಾಡಿದ್ದು, ಶಕ್ತಿ ಇದ್ದವರು ಮಾತ್ರ ತೋಟವನ್ನು ಕಾಪಾಡಿಕೊಂಡಿದ್ದಾರೆ ಅನ್ನೋದು ರೈತರ ಮಾತು. ಹೀಗೆ ತೋಟವನ್ನು ಕಾಪಾಡಿಕೊಂಡವರಿಗೆ ಈಗ ಉಸಿರಾಡೋದಕ್ಕೆ ಒಳ್ಳೆಯ ಬೆಲೆ ಬಂದಿದೆ.

vlcsnap 2021 02 13 19h29m51s933

Share This Article
Leave a Comment

Leave a Reply

Your email address will not be published. Required fields are marked *