ಕೋಲಾರ : ಕೊರೊನಾ ಸೊಂಕಿತರ ಸಾವಿಗಾಗಿಯೇ ಕಾಯುತ್ತಿರುವ ಖಾಸಗಿ ಅಂಬುಲೆನ್ಸ್ ಮಾಫಿಯಾ ದಂಧೆ ಕೋಲಾರದಲ್ಲಿ ಬೆಳಕಿಗೆ ಬಂದಿದೆ.
Advertisement
ಹಣ ಮಾಡುವ ದುರುದ್ದೇಶದಿಂದ ಮೃತಪಟ್ಟ ಸೊಂಕಿತರ ಶವ ಸಾಗಿಸಲು ಖಾಸಗಿ ಅಂಬುಲೆನ್ಸ್ ಮಾಲೀಕರು ಪೈಪೋಟಿ ನಡೆಸುತ್ತಿದ್ದಾರೆ. ಸರ್ಕಾರದ ನಿಯಮಗಳನ್ನು ಉಲ್ಲುಂಘಿಸಿ ಕೋವಿಡ್‍ನಿಂದ ಮೃತ್ತಪಟ್ಟ ವ್ಯಕ್ತಿ ಶವ ಸಾಗಿಸಲು ಕುಟುಂಬಸ್ಥರಿಂದ ಖಾಸಗಿ ಅಂಬುಲೆನ್ಸ್ ಮಾಲೀಕರು ದುಪ್ಪಟ್ಟು ಹಣ ಕೇಳುತ್ತಿದ್ದಾರೆ. ಕೋಲಾರದಿಂದ 25 ಕಿ.ಮೀಟರ್ ಇರುವ ಬಂಗಾರಪೇಟೆ ತಾಲೂಕಿನ ಬೂದಿಕೋಟೆಗೆ ಸೊಂಕಿತನ ಶವ ಸಾಗಿಸಲು ಅಂಬುಲೆನ್ಸ್ ಮಾಲೀಕ ಅಂಬರೀಶ್ ಎಂಬವನು 12 ಸಾವಿರಕ್ಕೆ ಬೇಡಿಕೆ ಇಟ್ಟಿರೆ, ಇದೇ ವೇಳೆ ಮತ್ತೊಬ್ಬ ಅಂಬುಲೆನ್ಸ್ ಮಾಲೀಕ ಮಹೇಶ್ 4 ಸಾವಿರಕ್ಕೆ ಶವ ಸಾಗಿಸಲು ಮುಂದಾಗಿದ್ದಾನೆ.
Advertisement
Advertisement
ಈ ವೇಳೆ ಇಬ್ಬರ ನಡುವೆ ಜಗಳ ಶುರುವಾಗಿದೆ. ಅಂಬರೀಶ್ ಶವ ಸಾಗಾಟವನ್ನೇ ಬಂಡವಾಳ ಮಾಡಿಕೊಂಡು ಹಗಲು ದರೋಡೆಗೆ ಇಳಿದಿದ್ದಾನೆಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಖಾಸಗಿ ಅಂಬುಲೆನ್ಸ್ ದರ ನಿಗದಿ ಮಾಡಿ ಆದೇಶ ಹೊರಡಿಸಿದರು ಕೂಡ ಆದೇಶಕ್ಕೆ ಕ್ಯಾರೆ ಎನ್ನುತ್ತಿಲ್ಲ. ಸ್ಥಳದಲ್ಲಿಯೇ ಪೊಲೀಸರು ಇದ್ದರು ಅಂಬರೀಷ್ ರಾಜಾರೋಷವಾಗಿ ಬಡ ಜನರ ಬಳಿ ಹಣ ವಸೂಲಿ ಮಾಡಿ ಸರ್ಕಾರದ ನಿಯಮವನ್ನು ಗಾಳಿಗೆ ತೂರಿದ್ದಾನೆ.
Advertisement
ಮೃತ ಕುಟುಂಬಸ್ಥರ ಮೇಲೆಯೂ ರೌಡಿಗಳಂತೆ ವರ್ತಿಸುತ್ತಿರುವ ಅಂಬರೀಷ್ ಹಾಗೂ ಸಹಚರರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ರೋಗಿಗಳು ಒತ್ತಾಯ ಮಾಡುತ್ತಿದ್ದಾರೆ. ಈ ಅಂಬರೀಶ್ ಕೇವಲ ಅಂಬುಲೆನ್ಸ್ ಸೇವೆ ಮಾತ್ರ ಅಲ್ಲ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಯೊಂದಿಗೆ ಶಾಮಿಲಾಗಿ ಸಾವಿರಾರು ರೂಪಾಯಿ ಹಣ ಪಡೆದು ಬೆಡ್ ಕೊಡಿಸುವುದು, ರೆಮೆಡಿಸಿವರ್ ಇಂಜೆಕ್ಷನ್, ರಕ್ತ ಮಾರಾಟದ ದಂಧೆಯಲ್ಲೂ ಭಾಗಿಯಾಗಿದ್ದಾನೆಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ. ಈತನ ವಿರುದ್ಧ ಜಿಲ್ಲಾಸ್ಪತ್ರೆ ವೈದ್ಯಧಿಕಾರಿಗಳು, ಪೊಲೀಸರು ಕಾನೂನು ಕ್ರಮ ಜರುಗಿಸುವಂತೆ ಒತ್ತಾಯ ಮಾಡುತ್ತಿದ್ದಾರೆ.