ಕೊರೊನಾ ವೈರಸ್‍ನ್ನು ನಾನು ಹೊಡೆದೋಡಿಸಿದೆ: ಕಂಗನಾ

Public TV
1 Min Read
kangana ranaut

ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್‍ಗೆ ಇತ್ತೀಚೆಗಷ್ಟೇ ಕೋವಿಡ್-19 ಪಾಸಿಟಿವ್ ದೃಢಪಟ್ಟಿತ್ತು. ಮನೆಯಲ್ಲೇ ಕ್ವಾರಂಟೈನ್ ಆಗಿದ್ದ ಕಂಗನಾ ರಣಾವತ್ ಇದೀಗ ಕೊರೊನಾ ವೈರಸ್ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.

WhatsApp Image 2021 05 18 at 6.53.52 PM 1

 

ಇಂದು ಕೊರೊನಾ ಪರೀಕ್ಷೆಯನ್ನು ಮಾಡಿಸಿದ್ದೇನೆ ನನಗೆ ನೆಗೆಟಿವ್ ಬಂದಿದೆ. ಈ ವೈರಸ್‍ನ್ನು ನಾನು ಹೇಗೆ ಹೊಡೆದೋಡಿಸಿದೆ ಎಂದು ಹೇಳಿಕೊಳ್ಳಬೇಕಿದೆ. ಆದರೆ ವೈರಸ್‍ಗೆ ಅಗೌರವ ತೋರಿಸದರೆ ಕೆಲವರಿಗೆ ಬೇಸರವಾಗುತ್ತದೆ. ಹೋಗಲಿಬಿಡಿ ಹಾಗಾಗಿ ಏನೂ ಹೇಳಿಕೊಳ್ಳುತ್ತಿಲ್ಲ. ನಿಮ್ಮ ಪ್ರೀತಿ ಹಾರೈಕೆಗೆ ಧನ್ಯವಾದಗಳು ಎಂದು ಕಂಗನಾ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕೋವಿಡ್-19 ಪಾಸಿಟಿವ್ ಬಂದರೆ ಭಯ ಪಡಬೇಡಿ. ಯಾವುದೇ ವಿಷಯಕ್ಕೂ ಧೈರ್ಯ ಕಳೆದುಕೊಳ್ಳಬೇಡಿ. ನಿಮಗೆ ಉಂಟಾಗುತ್ತಿರುವ ರೋಗ ಲಕ್ಷಣಗಳ ಬಗ್ಗೆ ಗಮನ ಹರಿಸಿ. ಋಣಾತ್ಮಕ ಚಿಂತನೆಗಳಿಂದ ಮಾನಸಿಕವಾಗಿ ಕುಗ್ಗಬಹುದು. ಹೀಗಾಗಿ ನಾನು ಪ್ರಾಣಾಯಾಮ, ಧ್ಯಾನ ಮಾಡುತ್ತಿದ್ದೆ. ದೈಹಿಕವಾಗಿ ಶಕ್ತಿಯುತವಾಗಿರಲು ಯೋಗಾಸನ ಮಾಡುತ್ತಿದ್ದೆ. ಇದೆಲ್ಲದರಿಂದ ನಾನು ಬೇಗ ಗುಣಮುಖವಾಗಲು ಸಹಕಾರಿ ಆಯ್ತು. ಹನುಮಾನ್ ಚಾಲಿಸಾ, ಗಾಯಿತ್ರಿ ಮಂತ್ರವನ್ನು ನಾನು ಹೆಚ್ಚು ಕೇಳುತ್ತಿದ್ದೆ. ಇದರಿಂದ ನನಗೆ ಸಕಾರಾತ್ಮಕ ಎನರ್ಜಿ ಲಭಿಸಿತು ಎಂದು ಇನ್‍ಸ್ಟಾಗ್ರಾಮ್ ವೀಡಿಯೋದಲ್ಲಿ ನಟಿ ಕಂಗನಾ ಹೇಳಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *