ಕೊರೊನಾ ವಾರ್ಡ್‍ನಲ್ಲಿ ವೈದ್ಯರ ಡ್ಯಾನ್ಸ್ – ವೀಡಿಯೋ ವೈರಲ್

Public TV
1 Min Read
FotoJet 11 10

ಗಾಂಧಿನಗರ: ಭಾರತದಲ್ಲಿ ಕೊರೊನಾ ಎರಡನೇ ಅಲೆಯಿಂದಾಗಿ ವೈದ್ಯರು ಮತ್ತೆ ಒತ್ತಡಕ್ಕೊಳಗಾಗುತ್ತಿದ್ದಾರೆ. ಆದರೆ ಆರೋಗ್ಯ ಸಿಬ್ಬಂದಿ ಮಾತ್ರ ಕೊರೊನಾ ಸೋಂಕಿಗೆ ಒಳಗಾಗಿರುವ ರೋಗಿಗಳ ಆತಂಕವನ್ನು ದೂರ ಮಾಡಲು ಮುಂದಾ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹೌದು. ಗುಜರಾತ್‍ನ ವಡೋದರಾದ ಸೇವಾಶ್ರಮ ಎಂಬ ಆಸ್ಪತ್ರೆಯಲ್ಲಿ ಆರೋಗ್ಯ ಸಿಬ್ಬಂದಿ ಡ್ಯಾನ್ಸ್ ಮಾಡುವ ಮೂಲಕ ಕೋವಿಡ್ ರೋಗಿಗಳನ್ನು ಹುರಿದುಂಬಿಸಲು ಪ್ರಯತ್ನಿಸಿದ್ದಾರೆ.

FotoJet 3 44

ವೀಡಿಯೋದಲ್ಲಿ ಹಲವಾರು ವೈದ್ಯರು ಹಾಡಿಗೆ ವ್ಯಾಯಾಮ ಹಾಗೂ ಡ್ಯಾನ್ಸ್ ಮಾಡಿದ್ದು, ಕುಳಿತಿರುವ ರೋಗಿಗಳಿಗೂ ಕೂಡ ಹೆಜ್ಜೆ ಹಾಕಲು ಪ್ರೋತ್ಸಾಹ ನೀಡಿದ್ದಾರೆ. ಈ ವೇಳೆ ಕೆಲವು ರೋಗಿಗಳು ಎದ್ದು ನಿಂತು ವೈದ್ಯರ ಜೊತೆಗೆ ಒಟ್ಟಾಗಿ ಡ್ಯಾನ್ಸ್ ಮಾಡಿದರೆ, ಮತ್ತೆ ಕೆಲವರು ಬೆಡ್ ಮೇಲೆ ಕುಳಿತುಕೊಂಡೆ ಸಾಧ್ಯವಾದಷ್ಟು ಡ್ಯಾನ್ಸ್ ಮಾಡಿದ್ದಾರೆ.

ಈ ದೃಶ್ಯವನ್ನು ಕೆಲವು ರೋಗಿಗಳು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ವೀಡಿಯೋದಲ್ಲಿ ವೈದ್ಯರು ಹಾಗೂ ನರ್ಸ್‍ಗಳು ಕೋವಿಡ್ ವಾರ್ಡ್‍ಗಳಲ್ಲಿ ಪಿಪಿಇ ಕಿಟ್ ಧರಿಸಿ ‘1990ರ ಸನ್ನಿ ಡಿಯೋಲ್’ ಅಭಿನಯಿಸಿರುವ ‘ಗಾಯಲ್’ ಸಿನಿಮಾದ ಹಾಡಿಗೆ ನೃತ್ಯ ಮಾಡಿದ್ದಾರೆ.

ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ವೈದ್ಯರ ಹಾಗೂ ಆರೋಗ್ಯ ಸಿಬ್ಬಂದಿ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *